ಮೃಗಾಲಯಗಳು, ರಕ್ಷಣಾ ಕೇಂದ್ರಗಳು ಜೈಲುಗಳಿದ್ದಂತೆ; ಅವು ಕಾಡು ಪ್ರಾಣಿಗಳಿಗೆ ಸೂಕ್ತವಲ್ಲ: ತಜ್ಞರು

ಮೃಗಾಲಯಗಳು ಮತ್ತು ರಕ್ಷಣಾ ಕೇಂದ್ರಗಳು ಪ್ರಾಣಿಗಳಿಗೆ ಜೈಲುಗಳಾಗುತ್ತಿವೆ. ರಕ್ಷಣಾ ಕೇಂದ್ರಗಳಲ್ಲಿ ಪ್ರಾಣಿಗಳು ಶಾಶ್ವತ ಖೈದಿಗಳಾಗುವುದನ್ನು ಕಡಿಮೆ ಮಾಡಲು ಸರಿಯಾದ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಂರಕ್ಷಣಾಕಾರರು ಪ್ರತಿಪಾದಿಸುತ್ತಾರೆ.

ಅಷ್ಟು ಮಾತ್ರವಲ್ಲದೆ, ವಿಷಯವೆಂದರೆ ಮಾಂಸಾಹಾರಿ ಪ್ರಾಣಿಗಳಿಗೆ ವಸತಿ ಸೌಕರ್ಯಗಳ ಬಗ್ಗೆ ತಾರತಮ್ಯವಿದೆ. ರಕ್ಷಿಸಲಾದ ಎಲ್ಲಾ ಹುಲಿಗಳನ್ನು ಮೈಸೂರು ರಕ್ಷಣಾ ಕೇಂದ್ರಕ್ಕೆ ಮತ್ತು ಚಿರತೆಗಳನ್ನು ಬನ್ನೇರುಘಟ್ಟಕ್ಕೆ ಕಳುಹಿಸಲಾಗಿದೆ. ಆದ್ದರಿಂದ, ಬನ್ನೇರುಘಟ್ಟ ರಕ್ಷಣಾ ಕೇಂದ್ರದಲ್ಲಿ 35 ಚಿರತೆಗಳಿದ್ದರೆ, ಮೈಸೂರು ರಕ್ಷಣಾ ಕೇಂದ್ರದಲ್ಲಿ ಸುಮಾರು 8-10 ಹುಲಿಗಳಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಂರಕ್ಷಣಾ ತಜ್ಞರು ಗಮನ ಸೆಳೆಸಿದ್ದಾರೆ.

ಬೆಂಗಳೂರಿನ ವಿವಿಧೆಡೆಯಿಂದ ಮೂರು ಚಿರತೆಗಳನ್ನು ಕೆಲವೇ ದಿನಗಳಲ್ಲಿ ರಕ್ಷಿಸಲಾಗಿದೆ. ಅಕ್ಟೋಬರ್ 21 ರಂದು ಗಾಯಗೊಂಡ ಹುಲಿಯನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಿಂದ ಮೈಸೂರು ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಮೈಸೂರು ರಕ್ಷಣಾ ಕೇಂದ್ರದಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸೆರೆ ಸಿಕ್ಕ ಗಾಯಗೊಂಡ ಹುಲಿಯನ್ನು ಬನ್ನೇರುಘಟ್ಟ ರಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಅನಾಮಧೇಯ ಪಶುವೈದ್ಯರು ತಿಳಿಸಿದ್ದಾರೆ.

“ಕೇಂದ್ರ ಮೃಗಾಲಯ ಪ್ರಾಧಿಕಾರ ಮತ್ತು ಪರಿಸರ ಸಚಿವಾಲಯ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ನಿಯಮಗಳ ಪ್ರಕಾರ, ರಕ್ಷಿಸಿದ ಕಾಡು ಪ್ರಾಣಿಗಳನ್ನು ಮೃಗಾಲಯಗಳಲ್ಲಿ ಪ್ರದರ್ಶನಕ್ಕೆ ಇಡಲಾಗುವುದಿಲ್ಲ. ಅವುಗಳನ್ನು ಬೋನ್‌ಗಳಲ್ಲಿ ಇಟ್ಟರೆ, ಈ ಪ್ರಾಣಿಗಳು ತಮ್ಮ ಜೀವನದುದ್ದಕ್ಕೂ ಕೃದಿಗಳಂತೆ ಸೆರೆಯಲ್ಲಿ ಉಳಿಯುತ್ತವೆ. ವನ್ಯಜೀನಿಗಳನ್ನು ಅರ್ಥೈಸಿಕೊಳ್ಳುವ ತಿಳಿವಳಿಕೆ ಮತ್ತು ಉತ್ಸಾಹದ ಕೊರತೆಯಿಂದಾಗಿ ರೈತರು ಮತ್ತು ಗ್ರಾಮಸ್ಥರು ಇತ್ತೀಚಿನ ದಿನಗಳಲ್ಲಿ ಚಿರತೆ ಮರಿಗಳೊಂದಿಗೆ ಅರಣ್ಯ ಇಲಾಖೆಯನ್ನು ಸಂಪರ್ಕಿಸುತ್ತಿದ್ದಾರೆ. ರೈತರು ತಮ್ಮ ಭತ್ತ, ಕಬ್ಬು ಮತ್ತು ಇತರ ಗದ್ದೆಗಳಲ್ಲಿ ಚಿರತೆಗಳ ಕೊರಗುತ್ತಿರುವುದನ್ನು ಗಮನಿಸಿದ್ದಾರೆ. ಆದರೆ, ಅವುಗಳನ್ನು ಅವುಗಳ ತಾಯಿ ಬಿಟ್ಟು ಹೋಗಿರಬೇಕು ಎಂದು ಅರ್ಥಮಾಡಿಕೊಳ್ಳಲು ಅವರು ವಿಫಲರಾಗಿದ್ದಾರೆ. ಮರಿಗಳು ಬೇಟೆಯಾಡಲು ಅಥವಾ ಉತ್ತಮ ಸುರಕ್ಷಿತ ಸ್ಥಳವನ್ನು ಹುಡುಕಲು ಯತ್ನಿಸುತ್ತಿರುವಾಗ, ಮನುಷ್ಯರು ಅವುಗಳನ್ನು ಮೃಗಾಲಯಗಳಿಗೆ ತಲುಪಿಸುತ್ತಿದ್ದಾರೆ. ಹೀಗಾಗಿ, ಅವುಗಳನ್ನು ಕಾಡಿನಲ್ಲಿ ಬಿಡಲಾಗುವುದಿಲ್ಲ. ಅಂತಹ ಮರಿಗಳು ಬದುಕುಳಿಯುವುದಿಲ್ಲ. ಹಾಗಾಗಿ ಅವು ಕೂಡ ರಕ್ಷಣಾ ಕೇಂದ್ರದಲ್ಲಿ ಉಳಿಯುತ್ತವೆ. ವಾರದ ಹಿಂದೆ ಇಂತಹ ಪ್ರಕರಣ ನಡೆದಿದ್ದು, ಇದೀಗ ಬನ್ನೇರುಘಟ್ಟದಲ್ಲಿ ಮರಿಗಳಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಶುವೈದ್ಯರ ಪ್ರೋಟೋಕಾಲ್ ಪ್ರಕಾರ, ಕೋರೆಹಲ್ಲುಗಳು ಅಥವಾ ಉಗುರುಗಳು ಮುರಿದುಹೋದ, ತೀವ್ರವಾಗಿ ಗಾಯಗೊಂಡ, ಬೇಟೆಯಾಡಲು ಸಾಧ್ಯವಾಗದಂತಹ ಪ್ರಾಣಿಗಳನ್ನು ಮಾತ್ರ ಸೆರೆಹಿಡಿದು ರಕ್ಷಣಾ ಕೇಂದ್ರಗಳಲ್ಲಿ ಇರಿಸಬೇಕು. ಈ ನಿಯಮದಂತೆ ನೋಡಿದರೆ, “ಸೆರೆಯಲ್ಲಿರುವ 50% ರಷ್ಟು ಪ್ರಾಣಿಗಳನ್ನು ಮೃಗಾಲಯಗಳಿಂದ ಬಿಡುಗಡೆ ಮಾಡಲು ಯೋಗ್ಯವಾಗಿವೆ. ಆದರೆ, ಸೆರೆಯಲ್ಲಿ ಉಳಿದಿವೆ. ಆದ್ದರಿಂದ, ಅವುಗಳ ರಕ್ಷಣೆಗಾಗಿ ಕೇಂದ್ರ ಸರ್ಕಾರವು ಕಠಿಣ ರಕ್ಷಣಾ ಮತ್ತು ಪುನರ್ವಸತಿ ನಿಯಮಗಳನ್ನು ರೂಪಿಸಬೇಕು” ಎಂದು ಹಿರಿಯ ಅರಣ್ಯ ಇಲಾಖೆಯ ಪಶುವೈದ್ಯರು ಹೇಳಿದ್ದಾರೆ.

Read Also: ತ್ರಿಪುರಾ: VHP, ಬಜರಂಗದಳ ರ್‍ಯಾಲಿ ವೇಳೆ ಮಸೀದಿ ಮತ್ತು ಅಂಗಡಿಗಳ ಧ್ವಂಸ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.