ನ್ಯಾಯಾಲಯವನ್ನು ಅಗೌರವಿಸಿದ ಆರೋಪ : ‘ದಿ ಕಪಿಲ್ ಶರ್ಮಾ ಶೋ’ ವಿರುದ್ಧ ಎಫ್‌ಐಆರ್..!

ಹ್ಯಾಸ ಪ್ರೇಮಿಗಳ ನೆಚ್ಚಿನ ಕಾರ್ಯಕ್ರಮ ‘ದಿ ಕಪಿಲ್ ಶರ್ಮಾ ಶೋ’ ವಿರುದ್ಧ ನ್ಯಾಯಾಲಯವನ್ನು ಅಗೌರವಿಸಿದ ಆರೋಪ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

ನ್ಯಾಯಾಲಯದ ದೃಶ್ಯವನ್ನು ಪ್ರದರ್ಶಿಸುವಾಗ ಕಾರ್ಯಕ್ರಮದ ಪಾತ್ರದಾರಿಗಳು ಮದ್ಯಪಾನ ಮಾಡುತ್ತಿರುವಂತೆ ತೋರಿಸಿದ ಪ್ರಸಂಗದ ಕುರಿತು ದಿ ಕಪಿಲ್ ಶರ್ಮಾ ಶೋನ ನಿರ್ಮಾಪಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಹಾಸ್ಯ ಕಾರ್ಯಕ್ರಮದ ನಿರ್ಮಾಪಕರು ನ್ಯಾಯಾಲಯವನ್ನು ಅಗೌರವಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ಮಧ್ಯಪ್ರದೇಶದ ಶಿವಪುರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಸುರೇಶ್ ಧಾಕಡ್ ಎಂಬ ವಕೀಲರು ಈ ಪ್ರಕರಣವನ್ನು ದಾಖಲಿಸಿದ್ದಾರೆ. ವಕೀಲ ಸುರೇಶ್ “ಆಕ್ಷೇಪಾರ್ಹ ದೃಶ್ಯಗಳನ್ನು” ಹೊಂದಿರುವ ಪ್ರಸಂಗವನ್ನು ಸೋನಿ ಟಿವಿಯಲ್ಲಿ ಏಪ್ರಿಲ್ 21 ರಂದು ಪ್ರಸಾರ ಮಾಡಲಾಯಿತು ಎಂದು ದೂರಿದ್ದಾರೆ.

ಕಾರ್ಯಕ್ರಮದ ನಿರೂಪಕ ಕಪಿಲ್ ಶರ್ಮಾ ಮತ್ತು ಸೋನಿ ಟಿವಿ ನಿರ್ದೇಶಕ ಎಂಪಿ ಸಿಂಗ್ ವಿರುದ್ಧ ಐಟಿ ಕಾಯ್ದೆ ಮತ್ತು ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸುರೇಶ್ ಹೇಳಿದ್ದಾರೆ. ಅಕ್ಟೋಬರ್ 1 ರಂದು ಈ ಪ್ರಕರಣದ ವಿಚಾರಣೆ ನಡೆಯಲಿದೆ.

“ನ್ಯಾಯಾಲಯದ ದೃಶ್ಯದಲ್ಲಿ ಸಹನಟನು ಮದ್ಯದ ಬಾಟಲಿಯೊಂದಿಗೆ ವೇದಿಕೆಯ ಮೇಲೆ ಬರುತ್ತಾನೆ. ಅದನ್ನು ಸವಿಯಲು ಇತರ ಜನರನ್ನು ಒತ್ತಾಯಿಸುತ್ತಾನೆ. ಈ ದೃಶ್ಯವು ನ್ಯಾಯಾಲಯದ ಘನತೆಯನ್ನು ಮೀರಿಸುತ್ತದೆ” ಎಂದು ವಕೀಲರು ಸುದ್ದಿಗಾರರಿಗೆ ತಿಳಿಸಿದರು.

ಈ ಹಿಂದೆಯೂ ಸಹ ಹಾಸ್ಯ ಪ್ರದರ್ಶನವು ಮಹಿಳೆಯರ ಬಗ್ಗೆ ಅಸಭ್ಯವಾದ ಕಾಮೆಂಟ್‌ಗಳಂತಹ ಆಕ್ರಮಣಕಾರಿ ವಿಷಯವನ್ನು ಒಳಗೊಂಡಿತ್ತು ಎಂದು ಸುರೇಶ್ ಹೇಳಿಕೊಂಡಿದ್ದಾರೆ. ಕಾರ್ಯಕ್ರಮದ ನಿರ್ಮಾಪಕರ ವಿರುದ್ಧ ಪ್ರಕರಣ ದಾಖಲಿಸಲು ತಾನು ಈ ಹಿಂದೆ ಕಲೆಕ್ಟರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳನ್ನು ಸಂಪರ್ಕಿಸಿದ್ದೆ ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights