ಆನೇಕಲ್ ನ ಲೇಕ್ ಕೆಮಿಕಲ್ ಕಂಪನಿಯಲ್ಲಿ ಸಿಲಿಂಡರ್ ಸ್ಫೋಟ : ಏಳು ಮಂದಿಗೆ ಗಂಭೀರ ಗಾಯ!
ಬೆಂಗಳೂರಿನ ನ್ಯೂ ತರಗುಪೇಟೆಯ ಗೋದಾಮಿನಲ್ಲಿ ಪಟಾಕಿ ಸ್ಪೋಟಗೊಂಡು ಮೂವರು ಸಾವನ್ನಪ್ಪಿದ ಘಟನೆ ಮಾಸುವ ಹೊತ್ತಿಗೆ ಆನೇಕಲ್ ನ ಅತ್ತಿಬೆಲೆ ಬಳಿಯ ಲೇಕ್ ಕೆಮಿಕಲ್ ಕಂಪನಿಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ.
ಕೆಮಿಕಲ್ ಕಂಪನಿಯಲ್ಲಿ ಸಿಲಿಂಡರ್ ಸ್ಫೋಟದ ತೀವ್ರತೆ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ.
ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮಲ್ಲೇಶ್ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಈ ಹಿಂದೆಯೂ ಕಂಪನಿಯಲ್ಲಿ ಬೆಂಕಿ ಅವಘಡ ಸಂಭವಿಸಿತ್ತು ಎಂಬ ಮಾಹಿತಿ ಇದೆ.
ಜೊತೆಗೆ ಬ್ಲಾಸ್ಟ್ ನಿಂದ ಉಸಿರು ತೆಗೆದುಕೊಳ್ಳಲು ಜನ ಪರಿತಪಿಸುತ್ತಿದ್ದಾರೆ. ಹೀಗಾಗಿ ಕೂಡಲೇ ಕಂಪನಿಯನ್ನು ಸ್ಥಳಾಂತರಿಸಲು ಒತ್ತಾಯಿಸುತ್ತಿದ್ದಾರೆ. ಸ್ಪೋಟದಿಂದ ಏರಿಯಾದ ವಾತಾವರಣವೆಲ್ಲಾ ಕೆಮಿಕಲ್ ಮಯವಾಗಿದೆ. ಸ್ಪೋಟಗೊಂಡ ನಂತರ ಗಂಟಲು ಮೂಗು ಉರಿಯುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಇದರಿಂದ ಮೂರ್ನಾಲ್ಕು ಕಿ.ಮೀ ವರೆಗೆಗೂ ವಾತಾವರಣ ವಿಷಮಯವಾಗಿದೆ.