ಸುಪ್ರೀಂ ಆದೇಶ: ಮಹಿಳೆಯರಿಗೆ NDA ಪರೀಕ್ಷೆಗೆ ಅರ್ಜಿ ಆಹ್ವಾನಿಸಿದ ಯುಪಿಎಸ್‌ಸಿ!

ಕೇಂದ್ರ ಲೋಕ ಸೇವಾ ಆಯೋಗವು (UPSC) ಅವಿವಾಹಿತ ಮಹಿಳೆಯರಿಗೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಮತ್ತು ನೌಕಾ ಅಕಾಡೆಮಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅನುಮತಿ ನೀಡಿದೆ ಎಂಬ ಅಧಿಕೃತ ಹೇಳಿಕೆಯನ್ನು ಶುಕ್ರವಾರ ನೀಡಿದೆ. ಸುಪ್ರೀಂ ಕೋರ್ಟ್ ಕಳೆದ ತಿಂಗಳು ಈ ವಿಷಯದ ಕುರಿತು ನಿರ್ದೇಶನ ನೀಡಿದ್ದನ್ನು ಆಯೋಗವು ಪಾಲಿಸುತ್ತಿದೆ.

ಸುಪ್ರೀಂ ಕೋರ್ಟ್‌ನ ಮಧ್ಯಂತರ ನಿರ್ದೇಶನಕ್ಕೆ ಅನುಸಾರವಾಗಿ ಆಯೋಗವು ಈ ಪರೀಕ್ಷೆಗಾಗಿ upsconline.nic.in ನಲ್ಲಿ ಅರ್ಜಿಯನ್ನು ತೆರೆಯಲು ನಿರ್ಧರಿಸಿದೆ. ಇದು ರಾಷ್ಟ್ರೀಯತೆ, ವಯಸ್ಸು, ಶೈಕ್ಷಣಿಕ ಅರ್ಹತೆ…ಇತ್ಯಾದಿಗಳ ವಿಷಯದಲ್ಲಿ ಅರ್ಹರಾಗಿರುವ “ಅವಿವಾಹಿತ ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ” ಅನುವು ಮಾಡಿಕೊಡುತ್ತದೆ ಹೇಳಿಕೆ ತಿಳಿಸಿದೆ.

ಇದನ್ನೂ ಓದಿ:  ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್ ನೀಡುವಂತಹ ಆರ್ಥಿಕ ಪರಿಸ್ಥಿತಿ ಇಲ್ಲ: ಸಾರಿಗೆ ಸಚಿವ ಶ್ರೀರಾಮುಲು

ದೈಹಿಕ ಮಾನದಂಡಗಳು ಮತ್ತು ಮಹಿಳಾ ಅಭ್ಯರ್ಥಿಗಳ ಖಾಲಿ ಹುದ್ದೆಗಳ ಸಂಖ್ಯೆಯನ್ನು ರಕ್ಷಣಾ ಸಚಿವಾಲಯದಿಂದ ಸ್ವೀಕರಿಸಿದ ನಂತರ ತಿಳಿಸಲಾಗುವುದು ಎಂದು ಆಯೋಗ ಹೇಳಿದ್ದು, ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 8 ರ ಸಂಜೆ 6 ಗಂಟೆಯವರೆಗೆ ಮಹಿಳಾ ಅಭ್ಯರ್ಥಿಗಳಿಗೆ ಅಪ್ಲಿಕೇಶನ್ ವಿಂಡೋ ತೆರೆದಿರುತ್ತದೆ ಎಂದು ಯುಪಿಎಸ್‌ಸಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ನಿಗದಿತ ಕೊನೆಯ ದಿನಾಂಕ/ಸಮಯವನ್ನು ಮೀರಿ ಯಾವುದೇ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ. ಅಲ್ಲದೆ, ಆನ್‌ಲೈನ್ ಮಾದರಿ ಹೊರತುಪಡಿಸಿ ಯಾವುದೇ ಮಾದರಿಯ ಮೂಲಕ ಸ್ವೀಕರಿಸಲಾಗುವುದಿಲ್ಲ ಮತ್ತು ಈ ಪರೀಕ್ಷೆಗೆ ಮಹಿಳಾ ಅಭ್ಯರ್ಥಿಗಳು ತಮ್ಮ ಅರ್ಜಿಗೆ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ ಎಂದು ಅದು ಹೇಳಿದೆ ಹೇಳಿದೆ.

ಪರೀಕ್ಷೆಯನ್ನು ನವೆಂಬರ್ 14 ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು TNIE ವರದಿ ಮಾಡಿದೆ.

ಸುಪ್ರೀಂ ಕೋರ್ಟ್ ಆಗಸ್ಟ್ 18 ರಂದು ಅರ್ಹ ಮಹಿಳೆಯರಿಗೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಪ್ರವೇಶ ಪಡೆಯಲು ಪರೀಕ್ಷೆಗೆ ಅವಕಾಶ ನೀಡಿ, ಲಿಂಗ ಸಮಾನತೆಯತ್ತ ಒಂದು ಮಹತ್ವದ ತೀರ್ಪನ್ನು ನೀಡಿತ್ತು.

ಇದನ್ನೂ ಓದಿ: ಪ್ರಧಾನಿ ಮೋದಿ ಹಾಗೂ ಜೋ ಬಿಡೆನ್ ಭೇಟಿಗೂ ಮುನ್ನ ರೈತ ನಾಯಕ ರಾಕೇಶ್ ಟಿಕಾಯತ್ ಟ್ವೀಟ್!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights