ಅನ್ಯ ಪಕ್ಷದವರನ್ನು ಭೇಟೆ ಆಡುತ್ತಿರುವ BJP: ಕಮಲ್‌ ಹಾಸನ್‌ ಪಕ್ಷದ ಕಾರ್ಯದರ್ಶಿ BJPಗೆ ಸೇರ್ಪಡೆ!

ದೇಶಾದ್ಯಂತ ಆಪರೇಷನ್‌ ಮಾಡಿ ಅನ್ಯ ಪಕ್ಷಗಳ ನಾಯಕರನ್ನು ಬಿಜೆಪಿಗೆ ಸೆಳೆಯುತ್ತಿರುವ ಕೇಸರಿ ಪಕ್ಷ, ತಮಿಳುನಾಡಿನಲ್ಲಿ ಅದೇ ಕೆಲಸವನ್ನು ಮುಂದುವರೆಸಿದೆ. 2021ರ ಚುನಾವಣೆಯಲ್ಲಿ ಶತಾಯ-ಗತಾಯ ಬಿಜೆಪಿ ಖಾತೆ ತೆರೆಯಲೇಬೇಕು ಎಂದು ನಿರ್ಧಾರಿಸಿದ್ದು, ಇದಕ್ಕಾಗಿ ಎಐಎಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ. ಅಲ್ಲದೆ, ನಟ, ರಾಜಕಾರಣಿ ಕಮಲ್ ಹಾಸನ್ ಅವರ ಮಕ್ಕಳ ನಿಧಿ ಮಯ್ಯಂ ಪಕ್ಷದ ನಾಯಕ, ಪ್ರಧಾನ ಕಾರ್ಯದರ್ಶಿ ಎ.ಅರುಣಾಚಲಂ ಅವರನ್ನೂ ಬಿಜೆಪಿ ಸೆಳೆದಿದ್ದು, ಅರುಣಾಚಲಂ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಕಮಲ್ ಹಾಸನ್ ತಮಿಳುನಾಡಿನಲ್ಲಿ ಎರಡನೇ ಹಂತದ ಚುನಾವಣಾ ಪ್ರಚಾರ ನಡೆಸುತ್ತಿರುವ ಹೊತ್ತಿನಲ್ಲೇ ತನ್ನ ಪಕ್ಷದ ಹಿರಿಯ ಮುಖಂಡರು ಭಾರತೀಯ ಜನತಾ ಪಾಟಿಗೆ ಸೇರ್ಪಡೆಗೊಂಡಿರುವುದು ಕಮಲ್ ಹಾಸನ್‌ಗೆ ಚುನಾವಣೆಗೂ ಮುನ್ನವೇ ಒಂದು ರೀತಿಯಲ್ಲಿ ಹಿನ್ನಡೆಯಾಗಿದೆ.

ಚೆನ್ನೈನ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸಮ್ಮುಖದಲ್ಲಿ ಎಂಎನ್‌ಎಂ ಪ್ರಧಾನ ಕಾರ್ಯದರ್ಶಿ ಎ. ಅರುಣಾಚಲಂ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.

ಅರುಣಾಚಲಂ, ತೂತುಕುಡಿ ಜಿಲ್ಲೆಯ ಒಂದು ಹಳ್ಳಿಯವರಾಗಿದ್ದು, ತಮಿಳುನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ್ ನೀಧಿ ಮಯ್ಯಂಗೆ ಅಡಿಪಾಯ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಚುನಾವಣಾ ಪ್ರಚಾರ ಆರಂಭಿಸಿದ್ದ ವೇಳೆ ಪಕ್ಷದ ಮುಖಂಡ ಕಮಲ್ ಹಾಸನ್, ಪ್ರಚಾರ ಕಾರ್ಯಗಳಲ್ಲಿ ಅರುಣಾಚಲಂ ಅವರಿಗೆ ಪ್ರಾಮುಖ್ಯತೆ ನೀಡಲಾಗಿಲ್ಲ ಮತ್ತು ಕಮಲ್ ಹಾಸನ್ ಪಕ್ಷ ಮುನ್ನಡೆಸುತ್ತಿರುವ ಬಗ್ಗೆ ಇತರರಿಗೆ ಅಸಮಾಧಾನ ಇದೆ ಎಂದು ಮಾಹಿತಿ ದೊರೆತಿದೆ.

Read Also: ಅರ್ನಾಬ್‌ನ ರಿಪಬ್ಲಿಕ್ ಟಿವಿ – ಮೋದಿಗೆ ಪ್ರಚಾರದ ಭೇಟೆ ನಾಯಿ: ಅಧ್ಯಯನ ವರದಿ

ಕಮಲ್ ಹಾಸನ್ ಈ ತಿಂಗಳ ಆರಂಭದಲ್ಲಿ ತಮ್ಮ ಪಕ್ಷದ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರು. ಈಗ ಎರಡನೇ ಹಂತದಲ್ಲಿದೆ ಪ್ರಚಾರ ಕಾರ್ಯ ನಡೆಯುತ್ತಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ವಿರುದ್ಧ ತೀವ್ರ ಟೀಕೆ, ಆರೋಪಗಳನ್ನು ಮಾಡುತ್ತಿದ್ದಾರೆ.

ತಮಿಳುನಾಡು ರಾಜಕೀಯದಲ್ಲಿ ವೇಗದ ಬೆಳವಣಿಗೆಗಳು ನಡೆಯುತ್ತಿವೆ. ಚುನಾವಣೆಗೆ ಕೆಲವೇ ದಿನಗಳಲ್ಲಿ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದ್ದು, ಎಲ್ಲ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯ ಆರಂಭಿಸಿವೆ. ನಟ ರಜನಿಕಾಂತ್ ಇದೇ ತಿಂಗಳ ಅಂತ್ಯದಲ್ಲಿ ತಮ್ಮ ಪಕ್ಷವನ್ನು ಘೋಷಣೆ ಮಾಡಲಿದ್ದಾರೆ.

ರಜನಿಕಾಂತ್ ಮತ್ತು ಕಮಲ್ ಹಾಸನ್ ಇಬ್ಬರೂ ಒಟ್ಟಿಗೆ ಚುನಾವಣೆ ಎದುರಿಸುತ್ತಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಆದರೆ ಇದರ ಬಗ್ಗೆ ಇನ್ನು ಯಾವುದೇ ನಿರ್ಧಾರವನ್ನು ಅಧಿಕೃತವಾಗಿ ತಿಳಿಸಿಲ್ಲ. ಆದರೆ, “ನಮ್ಮ ಸಿದ್ಧಾಂತವು ಹೊಂದಿಕೆಯಾಗುವಂತಿದ್ದರೆ, ನಮ್ಮ ಮೈತ್ರಿಯಿಂದ ಜನರಿಗೆ ಪ್ರಯೋಜನವಾಗುವಂತಿದ್ದರೇ, ನಮ್ಮ ಅಹಂಕಾರವನ್ನು ಬದಿಗಿಟ್ಟು ಪರಸ್ಪರ ಸಹಕರಿಸಲು ನಾವು ಸಿದ್ಧ” ಎಂದು ಕಮಲ್ ಹಾಸನ್ ಸುದ್ದಿಗಾರರಿಗೆ ತಿಳಿಸಿದ್ದರು.


Read Also: ಮಿತ್ರ ಪಕ್ಷಕ್ಕೇ ಆಪರೇಷನ್ ಮಾಡಿದ ಬಿಜೆಪಿ: JDU ಪಕ್ಷದ 06 ಶಾಸಕರು BJPಗೆ ಸೇರ್ಪಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights