ದೆಹಲಿ : ಶನಿವಾರ ದೇಶಾದ್ಯಂತ ರಸ್ತೆ ತಡೆಗೆ ರೈತ ಮುಖಂಡರಿಂದ ಕರೆ…!
ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಶನಿವಾರ ದೇಶಾದ್ಯಂತ “ಚಕ್ಕಾ ಜಾಮ್” ಪ್ರತಿಭಟನೆಗೆ ಕರೆ ನೀಡಿದ್ದಾರೆ. ಮೂರು ಗಂಟೆಗಳವರೆಗೆ ಪ್ರತಿಭಟನೆಯ ಅವಧಿ ನಿಗಧಿ ಮಾಡಲಾಗಿದ್ದು ಈ ಸಮಯದಲ್ಲಿ ರೈತರು ಹೆದ್ದಾರಿಗಳಲ್ಲಿ ಸಾರಿಗೆಯನ್ನು ನಿರ್ಬಂಧಿಸಲು ಯೋಜಿಸಿದ್ದಾರೆ. ರೈತರು ವಾಸ್ಥವ್ಯ ಹೂಡಿದ ಸ್ಥಳಗಳ ಸಮೀಪವಿರುವ ಪ್ರದೇಶಗಳಲ್ಲಿ ಇಂಟರ್ನೆಟ್ ನಿಷೇಧ, ಅಧಿಕಾರಿಗಳಿಂದ ಕಿರುಕುಳ, ಅವರ ಪ್ರತಿಭಟನಾ ಸ್ಥಳಗಳಲ್ಲಿ ವಿದ್ಯುತ್ ಮತ್ತು ನೀರನ್ನು ಮೊಟಕುಗೊಳಿಸುವುದು ಮತ್ತು ಇತರ ವಿಷಯಗಳ ವಿರುದ್ಧವೂ ಈ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.
ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ರೈತರು ಜನವರಿ 26 ರಂದು ನಡೆದ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಹಿಂಸಾತ್ಮಕ ಬೆಳವಣಿಗೆಗೆ ಬೆಲೆ ಕಟ್ಟಬೇಕಾಯ್ತು. ಸೋಶಿಯಲ್ ಮೀಡಿಯಾದಲ್ಲಿ ಪ್ರತಿಭಟನಾಕಾರರನ್ನು ಅನೇಕರು ಖಂಡಿಸಿದರು. ಉತ್ತರ ಪ್ರದೇಶ ಮತ್ತು ಹರಿಯಾಣದಂತಹ ರಾಜ್ಯಗಳಿಂದ ಬಂದ ರೈತರು ಹೋಗಬೇಕೆಂದು ಸ್ಥಳೀಯರು ಬಯಸುತ್ತಿದ್ದಾರೆ.
ಇದಾದ ನಂತರ ನಂತರ ಪ್ರತಿಭಟನಾ ಸ್ಥಳದಲ್ಲಿ ಇಂಟರ್ನೆಟ್ ನಿಷೇಧ, ಅಧಿಕಾರಿಗಳಿಂದ ಕಿರುಕುಳ, ಅವರ ಪ್ರತಿಭಟನಾ ಸ್ಥಳಗಳಲ್ಲಿ ವಿದ್ಯುತ್ ಮತ್ತು ನೀರನ್ನು ಮೊಟಕುಗೊಳಿಸಲಾಗುತ್ತಿದೆ. ಇದೆಲ್ಲದರ ವಿರುದ್ಧ ರೈತರು ಶನಿವಾರ ದೇಶಾದ್ಯಂತ ರಸ್ತೆ ತಡೆಗೆ ಮುಂದಾಗಲಿದ್ದಾರೆ.

