ಅರ್ನಾಬ್‌ನ ರಿಪಬ್ಲಿಕ್ ಟಿವಿ – ಮೋದಿಗೆ ಪ್ರಚಾರದ ಭೇಟೆ ನಾಯಿ: ಅಧ್ಯಯನ ವರದಿ
ಅರ್ನಾಬ್ ನ ಆರ್ಭಟಕ್ಕೆ ಭಾರತದಲ್ಲಿ ಸುಪ್ರೀಂಕೋರ್ಟೇ ಮಣಿಯುತ್ತದೆ. ಆದರೆ ಮೊನ್ನೆ ಅವನ ರಿಪಬ್ಲಿಕ್ ಭಾರತ್ ಚಾನೆಲ್ಲು, ಪಾಕಿಸ್ತಾನದಲ್ಲಿ ಹುಟ್ಟುವ ಪ್ರತಿಯೊಂದು ಮಗುವೂ ಟೆರರಿಸ್ಟಾಗಿರುತ್ತದೆ ಎಂದು ‘ಡಿಬೇಟು’ ಮಾಡಿದ್ದಕ್ಕೆ ಬ್ರಿಟನ್ನಿನ ಟಿವಿ ನಿಯಂತ್ರಣ ಪ್ರಾಧಿಕಾರ ಛೀಮಾರಿ ಹಾಕಿ ೨೦ ಲಕ್ಷ ದಂಡ ವಿಧಿಸಿದೆ.
ಇಲ್ಲಿ ತಾನು ಮಾಡಿದ್ದೇ ಸರಿ ಎನ್ನುವ ಅರ್ನಾಬ್ ಅಲ್ಲಿ ಮಾತ್ರ 279 ಬಾರಿ ಕ್ಷಮೆ ಕೋರಿದ್ದಾನೆ.
ಇರಲಿ.. ಹಮಾರ ಕುತ್ತಾ ಹಮಾರ ಗಲ್ಲಿ ಮೇ ಶೇರ್ ..
ಅಂಗೈ ಹುಣ್ಣಿಗೆ ಕನ್ನಡಿ ಬೇಡ.
ಆರ್ನಾಬ್ ನ ರಿಪಬ್ಲಿಕ್ ಚಾನೆಲ್ಲು ಹಿಸ್ ಮಾಸ್ಟರ್ ಆದ ಮೋದಿಯ ವಾಯ್ಸ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ..
ಆದರೂ ಆರ್ನಾಬ್ ಗೋಸ್ವಾಮಿಯ ರಿಪಬ್ಲಿಕ್ ಟಿವಿ ಬಗ್ಗೆ ಪ್ರಖ್ಯಾತ ಸಂಶೋಧಕ- ವಿದ್ವಾಂಸ ಕ್ರಿಸ್ಟೋಫರ್ ಜಾಫರ್ಲೆ ಮತ್ತು ವಿಹಂಗ್ ಜುಮ್ಲೆ ಒಂದು ಗಂಭೀರ ಅಧ್ಯಯನ ಮಾಡಿದ್ದಾರೆ.
ಅವರ ವರದಿಯು ಹೇಗೆ ಅರ್ನಾಬ್ ಚಾನೆಲ್ಲು, ಯಾವ ಎಗ್ಗೂ ಸಿಗ್ಗೂ ಇಲ್ಲದೆ, ಯಾವ ಮಾಧ್ಯಮ ನೀತಿ-ನಿಯತ್ತುಗಳನ್ನು ಇಟ್ಟುಕೊಳ್ಳದೆ ಬಿಜೆಪಿಯ ಸಾಕುನಾಯಿ- ಬೇಟೆ ನಾಯಿಯ ಪಾತ್ರವಹಿಸಿದೆ ಎಂಬುದನ್ನು ಅಂಕಿಅಂಶಗಳ ಮೂಲಕ ಸ್ಪಷ್ಟಪಡಿಸಿದೆ.
ಈ ವಿದ್ವಾಂಸರು ರಿಪಬ್ಲಿಕ್ ಟಿವಿ ಪ್ರಾರಂಭವಾದಾಗಿನಿಂದ ಅಂದರೆ 2017ರ ಮೇ ಯಿಂದ 2020ರ ಏಪ್ರಿಲ್ ವರೆಗೆ ನಡೆಸಿದ ಪ್ರೈಮ್ ಡಿಬೇಟ್ ನ ವಸ್ತುಗಳನ್ನೂ, ಹ್ಯಾಷ್ ಟ್ಯಾಗ್ ಕ್ಯಾಂಪೇನ್ ಗಳನ್ನೂ ಅಧ್ಯಯನ ಮಾಡಿದ್ದಾರೆ.
ಅದರ ಸಂಪೂರ್ಣ ವಿವರ ಇದರ ಜೊತೆಗೆ ಲಗತ್ತಿಸಿರುವ ಟೇಬಲ್ ನಲ್ಲಿದೆ. ಕಡ್ಡಾಯವಾಗಿ ಗಮನಿಸತಕ್ಕದ್ದು..
ರಿಪಬ್ಲಿಕ್ ಟಿವಿಯು 2017ರ ಮೇ-2020ರ ಮೇ ವರೆಗೆ 1799 ಡಿಬೇಟ್ ಗಳನ್ನು ನಡೆಸಿದೆ.
ಆ ಪ್ರತಿಯೊಂದು ಡಿಬೇಟುಗಳಲ್ಲೂ ಅದು ಕಡ್ಡಾಯವಾಗಿ ಮೋದಿ ಪರ, ಬಿಜೆಪಿ ಪರ ಮತ್ತು ಬಿಜೆಪಿಯ ರಾಜಕೀಯ-ಸೈದ್ಧಾಂತಿಕ ನಿಲುವುಗಳ ಪರವಾದ ನಿಲುವುಗಳನ್ನು ತೆಗೆದುಕೊಂಡಿದೆ.
ಉಳಿದಂತೆ 600 ಡಿಬೇಟುಗಳು ನೇರಾನೇರಾ ವಿರೋಧಪಕ್ಷಗಳ ವಿರುದ್ಧವಾಗಿದ್ದರೆ, ಕೇವಲ 49 ಡಿಬೇಟುಗಳು ಮಾತ್ರ ಬಿಜೆಪಿ ವಿರುದ್ಧ.. ಅದೂ ಮೋದಿ ವಿರುದ್ಧವಲ್ಲ. ಯೋಗಿ, ಪ್ರಗ್ಯಾ ಅಂಥವರ ವಿರುದ್ಧ.
ಸುಮಾರು 300 ಕಾರ್ಯಕ್ರಮಗಳು ನೇರಾನೇರ ಬಿಜೆಪಿ ಬೆಂಬಲವಾಗಿ ನಡೆಸಿದ್ದರೆ ಒಂದೇ ಒಂದೂ ‘ಡಿಬೇಟೂ’ ವಿರೋಧಪಕ್ಷದ ಪರವಾಗಿರಲಿಲ್ಲ.
ಸಿಎಎ, ರಾಷ್ಟವಾದ, ರಾಷ್ಟ್ರೀಯ ಭದ್ರತೆ, ರಾಮಮಂದಿರದಂಥ ವಿಷಯಗಳನ್ನೇ ಹೆಚ್ಚು ಚರ್ಚಾವಸ್ತು ಮಾಡಿಕೊಂಡು ಬಿಜೆಪಿಯ ಸೈದ್ಧಾಂತಿಕ ನಿಲುವುಗಳನ್ನು ಪ್ರಚಾರ ಈ ಬಿಜೆಪಿ ಬೊಗಳು ಚಾನೆಲ್ಲು ಪ್ರಚಾರ ಮಾಡಿದೆ.
ಆದರೆ, ಕುಸಿಯುತ್ತಿರುವ ದೇಶದ ಆರ್ಥಿಕತೆಯ ಬಗ್ಗೆ ಕಳೆದ ಮೂರು ವರ್ಷಗಳಲ್ಲಿ ಅದು ನಡೆಸಿರುವುದು ಕೇವಲ 7 ಡಿಬೇಟುಗಳು.
ಹದಗೆಟ್ಟ ಶಿಕ್ಷಣ ವ್ಯವಸ್ಥೆಯ ಬಗ್ಗೆ ಕೇವಲ ಕೇವಲ ಎರಡು!!
ಉಳಿದಂತೆ ಅಡಕದಲ್ಲಿರುವ ಟೇಬಲ್ ನೋಡಿ..
ಮಾಧ್ಯಮವನ್ನು ಪ್ರಜಾತಂತ್ರದ ಕಾವಲು ನಾಯಿ ಎನ್ನುತ್ತಾರೆ. ಈ ನಾಯಿಯನ್ನು ಏನೆಂದು ಕರೆಯುವುದು?
ಬಿಜೆಪಿಯ ಬೊಗಳು ನಾಯಿ?
ಬಿಜೆಪಿಯ ಸಾಕು ನಾಯಿ?
ಬಿಜೆಪಿಯ ಬೇಟೆನಾಯಿ?
ಜಸ್ಟ್ ಆಸ್ಕಿಂಗ್
– ಶಿವಸುಂದರ್
ಇದನ್ನೂ ಓದಿ: ಭೂಮಾಲೀಕರ ದರ್ಪ, ಭೂ ಹೀನ ದಲಿತರ ದೈನ್ಯತೆ ತೊಲಗಲು ಭೂಮಿ ರಾಷ್ಟ್ರೀಕರಣವಾಗಬೇಕು: ಅಂಬೇಡ್ಕರ್