ದೇಶದ ಎಲ್ಲಾ ಹೆಲ್ತ್ ವಾರಿಯರ್ಸ್ಗೆ ಭಾರತದ ಮೂರು ಸಶಸ್ತ್ರ ಪಡೆಗಳಿಂದ ವಿಶೇಷ ಗೌರವ!

ಕೊರೊನಾ ವಿರುದ್ಧ ಹೋರಾಡುತ್ತಿರುವವರ ಪೈಕಿ ಹೆಲ್ತ್ ವಾರಿಯರ್ಸ್ ಪ್ರಮುಖ ಪಾತ್ರ ವಹಿಸಿದ್ದು, ನಮ್ಮನ್ನು ರಕ್ಷಿಸಲು, ಕೊರೊನಾ ಹಿಮ್ಮೆಟ್ಟಿಸಲು ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ನಡೆಸುತ್ತಿರುವ ಹೆಲ್ತ್ ವಾರಿಯರ್ಸ್‌ಗೆ ಈಗಾಗಲೇ ಚಪ್ಪಾಳೆ ತಟ್ಟುವ ಮೂಲಕ ಜನರು ಗೌರವ ಸಲ್ಲಿಸಿದ್ದಾರೆ. ಆದರೆ ಇಂದು ಇಡೀ ದೇಶವನ್ನೇ ಕಾಯುವ ಮೂರು ಸೇನೆಗಳು ಹೆಲ್ತ್ ವಾರಿಯರ್ಸ್‌ಗೆ ವಿಶೇಷ ಗೌರವ ಸಲ್ಲಿಸಲಾಗಿದೆ.

ಹೌದು… ಇಡೀ ದೇಶವನ್ನು ಫುಲ್ ಟೈಂ ಕಾಯುವ ಮೂರು ಸೇನೆಗಳು ಹೆಲ್ತ್ ವಾರಿಯರ್ಸ್‌ಗೆ ವಿಶೇಷ ಗೌರವ ಸಲ್ಲಿಸಿವೆ. ಭೂಸೇನೆ, ವಾಯುಸೇನೆ ಹಾಗೂ ನೌಕಾ ಸೇನೆ ಇಂದು ದೇಶದ ಎಲ್ಲ ಹೆಲ್ತ್ ವಾರಿಯರ್ಸ್‌ಗೆ ಗೌರವ ಸಲ್ಲಿಸಿದೆ.

ಮಹಾಮಾರಿ ಕೊರೊನಾ ವಿರುದ್ಧ ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತಿರುವ  ಆರೋಗ್ಯ ಯೋಧ‍ರಿಗೆ ಇಂದು ದೇಶದ ಉದ್ದಗಲಕ್ಕೂ ಭಾರತೀಯ ಮೂರು ಸಶಸ್ತ್ರ ಪಡೆಗಳು ಗೌರಸ ಸಲ್ಲಿಸಿದೆ. ವಿಮಾನಗಳಿಂದ ಫ್ಲೈ ಪಾಸ್ಟ್, ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ, ಹಡುಗುಗಳಲ್ಲಿ ದೀಪ ಬೆಳಗುವುದು, ಮತ್ತಿತರ ಕಾರ್ಯಕ್ರಮಗಳನ್ನು ಎಲ್ಲೆಡೆ ಆಯೋಜಿಸಲಾಗಿದೆ. ಕೊರೊನಾ ವಿರುದ್ಧ ಹೋರಾಡುತ್ತಿರುವ ಯೋಧರಾದ ವೈದ್ಯರು, ಶುಶ್ರೂಷಕರು, ಪೊಲೀಸರು ಹಾಗೂ ನೈರ್ಮಲ್ಯ ಕೆಲಸಗಾರರು ಮುಂತಾಗಿ  ಮುನ್ನೆಲೆಯಲ್ಲಿ ನಿಂತು ಹೋರಾಡುತ್ತಿರುವ ಆರೋಗ್ಯ ವೀರರಿಗೆ ಗೌರವ ಸಲ್ಲಿಸಲು ದೇಶದ ಸಶಸ್ತ್ರ ಪಡೆಗಳು ಹಾಕಿಕೊಂಡಿರುವ ಯೋಜನೆ ಇದು.

ಭಾರತೀಯ ಸೇನೆ, ಭಾರತೀಯ ವಾಯುಪಡೆ , ಮತ್ತು ಭಾರತೀಯ ನೌಕಾಪಡೆ ಇಂದು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ಶುಕ್ರವಾರ ಸಂಜೆ ನಡೆದ ಮೂರೂ ರಕ್ಷಣಾ ಪಡೆಗಳ ಮುಖ್ಯಸ್ಥರ ಸುದ್ದಿಗೋಷ್ಠಿಯಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್‌ ರಾವತ್‌ ಈ ಕುರಿತು ಮಾಹಿತಿ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮತ್ತು ಈಶಾನ್ಯದ ಅಸ್ಸಾಂನಿಂದ ಗುಜರಾತ್‌ನ ಕಚ್‌ವರೆಗೆ ವಾಯು ಪಡೆ ವಿಮಾನಗಳಿಂದ ಗೌರವ ಹಾರಾಟ ನಡೆಯಲಿದೆ. ಜತೆಗೆ ದೇಶದ ಕರಾವಳಿ ತೀರದುದ್ದಕ್ಕೂ ನಿಂತಿರುವ ಹಡಗುಗಳ ದೀಪಗಳನ್ನು ಬೆಳಗಿಸುವ ಮೂಲಕ ನೌಕಾ ಪಡೆ ವಿಶೇಷ ಗೌರವ ಸಲ್ಲಿಸಿದೆ.

ಮೂರು ರಕ್ಷಣಾ ಸೇವೆಗಳ ಈ ಮಹತ್ವದ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. “ ರಕ್ಷಣಾ ಸಿಬ್ಬಂದಿಯ ಈ ಕಾರ್ಯವನ್ನು ನಾನು ಇಂದು ಸ್ವಾಗತಿಸುತ್ತೇನೆ. ಆರೋಗ್ಯ ಯೋಧರು ಕಾಳಜಿ ವಹಿಸಿದ್ದರಿಂದಲೇ ಭಾರತವು ಕೋವಿಡ್ 19 ವಿರುದ್ಧ ಬಗವಾದ ಹೋರಾಟ ನಡೆಸಿದೆ. ಅವರ ಸೇವೆಯನ್ನು ಎಮದೂ ಮರೆಯಲಾಗದು. ಭಾರತ ಆರೋಗ್ಯ ಯೋಧರನ್ನು ಮತ್ತು ಅವರ ಕುಟುಂಬವನ್ನು ಶ್ಲಾಘಿಸುತ್ತದೆ’’ ಎಂದು ಟ್ವೀಟ್ ಮಾಡಿದ್ದಾರೆ.

https://twitter.com/narendramodi/status/1256263168310915072

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights