ಪಶ್ಚಿಮ ಬಂಗಾಳ: ಕೋಲ್ಕತ್ತಾ ಪಾಲಿಕೆಯ 144 ಸ್ಥಾನಗಳಲ್ಲಿ 134 ಗೆದ್ದ ಟಿಎಂಸಿ; 3 ಸ್ಥಾನಕ್ಕಿಳಿದ ಬಿಜೆಪಿ!

ಪಶ್ಚಿಮ ಬಂಗಾಳದ ಕೊಲ್ಕತ್ತಾ ಮುನ್ಸಿಪಲ್‌‌ ಕಾರ್ಪೊರೇಶನ್‌‌ ಚುನಾವಣೆಯಲ್ಲಿ ಪಾಲಿಕೆಯ ಆಡಳಿತರೂಢ ಪಕ್ಷ ಟಿಎಂಸಿ ಅಭೂತ ಪೂರ್ವ ಗೆಲುವು ಸಾಧಿಸಿದೆ. 144 ವಾರ್ಡ್‌ಗಳಲ್ಲಿ ಟಿಎಂಸಿ ಬರೋಬ್ಬರಿ 134 ವಾರ್ಡ್‌ಗಳನ್ನು ತನ್ನದಾಗಿಸಿಕೊಂಡಿದೆ. ಬಿಜೆಪಿ ಹೀನಾಯ ಸೋಲು ಕಂಡಿದೆ.

ಕೊಲ್ಕತ್ತಾ ಪಾಲಿಕೆಯಲ್ಲಿ ಬಿಜೆಪಿ ಕೇವಲ 3 ವಾರ್ಡ್‌‌ಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಉಳಿದಂತೆ ಸಿಪಿಐಎಂ 1 ವಾರ್ಡ್‌, ಸಿಪಿಐ ಒಂದು ವಾರ್ಡ್‌, ಕಾಂಗ್ರೆಸ್‌ 2 ಮತ್ತು ಪಕ್ಷೇತರ ಅಭ್ಯರ್ಥಿಗಳು ಮೂರು ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: ಚುನಾವಣಾ ಕಾನೂನು (ತಿದ್ದುಪಡಿ) ಮಸೂದೆ ಲೋಕಸಭೆಯಲ್ಲಿ ಮಂಡನೆ: ವಿಪಕ್ಷಗಳ ವಿರೋಧದ ನಡುವೆಯೂ ಅಂಗೀಕಾರ!

ಡಿಸೆಂಬರ್ 19 ರಂದು ಪಾಲಿಕೆಯ 144 ವಾರ್ಡ್‌ಗಳಿಗೆ ಚುನಾವಣೆ ನಡೆದಿತ್ತು. 144 ಕಾರ್ಪೊರೇಟರ್‌ಗಳ ಸ್ಥಾನಕ್ಕೆ ಒಟ್ಟು 950 ಅಭ್ಯರ್ಥಿಗಳು ಕಣದಲ್ಲಿದ್ದರು. ಪಾಲಿಕೆಯ ಈ ಹಿಂದಿನ ಚುನಾವಣೆಗಳು 2015 ರಲ್ಲಿ ನಡೆದಿದ್ದವು.

2015 ರ ಪಾಲಿಕೆ ಚುನಾವಣೆಯಲ್ಲಿ ಟಿಎಂಸಿ 114 ವಾರ್ಡ್‌ಗಳಲ್ಲಿ, ಸಿಪಿಎಂ 10, ಬಿಜೆಪಿ 7, ಕಾಂಗ್ರೆಸ್‌ 5, ಸಿಪಿಐ 2, ಐಎನ್‌ಡಿ 3, ಆರ್‌ಎಸ್‌ಪಿ 2 ಮತ್ತು ಎಐಎಫ್‌ಬಿ 1 ಗೆದ್ದಿದ್ದವು. ಆದರೆ ಈ ಬಾರಿ ಟಿಎಂಸಿ ಬಹುತೇಕ ಏಕಮೇವ ಪಕ್ಷವಾಗಿ ಹೊರಹೊಮ್ಮಿದೆ.

ಸುಮಾರು 40.5 ಲಕ್ಷ ಮತದಾರರಲ್ಲಿ ಶೇಕಡಾ 63 ರಷ್ಟು ಮತದಾರರು ಪಾಲಿಕೆ ಚುನಾವಣೆಯಲ್ಲಿ ಮತ ಚಲಾಯಿಸಿದ್ದರೂ ಸಹ, ಎರಡು ಬೂತ್‌ಗಳಲ್ಲಿ ಬಾಂಬ್‌ಗಳನ್ನು ಎಸೆಯುವುದು ಸೇರಿದಂತೆ ಹಿಂಸಾಚಾರದ ಘಟನೆಗಳು ನಡೆದಿದ್ದವು.

ಇದನ್ನೂ ಓದಿ: ಹೈಟಿಯಲ್ಲಿ ಭೀಕರ ದುರಂತ: ಟ್ರಕ್‌ ಸ್ಪೋಟಗೊಂಡು 60ಕ್ಕೂ ಹೆಚ್ಚು ಜನರು ಸಾವು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights