ನಿರ್ಭಯಾ ಹಂತಕರ ಅಂತಿಮ ರಾತ್ರಿ : ಅಪರಾಧಿಗಳ ಕೊನೆಯ ಆಸೆ ಏನಾಗಿತ್ತು ಗೊತ್ತಾ..?
ನೆನ್ನೆ ಕ್ರೂರಿ ಕೊರೊನಾ ಭೀತಿ ನಡುವೆಯೂ ದೇಶ ಸಂಭ್ರಮಿಸಿದೆ. ಯಾಕೆ ಗೊತ್ತಾ…? ನಿರ್ಭಯಾ.. ನಿರ್ಭಯಾದ್ದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಪ್ರಕರಣ. 2012ರಲ್ಲಿ ನಿರ್ಭಯಾಳ ಮೇಲೆ ಅತ್ಯಾಚಾರವೆಸಗಿ ಕ್ರೂರತನದಿಂದ ಕೊಲೆ ಮಾಡಿದ ಪ್ರಕರಣ. ಈ ಪ್ರಕರಣದಲ್ಲಿ ಅಪರಾಧಿಗಳಾದ ವಿನಯ್, ಅಕ್ಷಯ್, ಮುಖೇಶ್ ಮತ್ತು ಪವನ್ ಗೆ ಗಲ್ಲು ಶಿಕ್ಷೆಗೆ ಒಳಗಾಗಿ ಹೆಣ್ಣು ಕುಲವೇ ಸಂಭ್ರಮಿಸಿದ ದಿನ.
ಹೌದು… ನಿರ್ಭಾಯದ ಪ್ರಕರಣಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ. ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗಿ, ನಿರ್ಭಯಾ ಆತ್ಮಕ್ಕೆ ಶಾಂತಿ ಸಿಕ್ಕಂತಾಗಿದೆ. ಅಷ್ಟಕ್ಕೂ ಗಲ್ಲು ಶಿಕ್ಷೆಗೆ ಒಳಗಾಗದ ಅಪರಾಧಿಗಳ ಆ ಕೊನೆ ರಾತ್ರಿ ಹೇಗಿತ್ತು ಗೊತ್ತಾ..?
ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳು ಗಲ್ಲು ಶಿಕ್ಷೆಯಿಂದ ಪಾರಾಗಲು ಎಲ್ಲಾ ಕಾನೂನು ತಂತ್ರಗಳು ನಡೆಸಿ ಕೊನೆಗೂ ಶುಕ್ರವಾರ ಬೆಳಿಗ್ಗೆ ಸುಮಾರು 5.30ಕ್ಕೆ ದಿಲ್ಲಿಯ ತಿಹಾರ್ ಜೈಲಿನಲ್ಲಿ ನೇಣುಗಂಬಕ್ಕೆ ಕೊರಳೊಡ್ಡಿ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ವಿಶ್ವಾದ್ಯಂತ ಜನ ಕೊರೊನಾ ಭೀತಿಗೆ ನಡುಗುತ್ತಿದೆ. ಹೀಗಿದ್ದರು ಕೊನೆಗೂ ನಿರ್ಭಯಾ ಪ್ರಕರಣಕ್ಕೆ ನ್ಯಾಯ ಸಿಕ್ಕ ಸಂತೋಷವನ್ನು ತಿಹಾರ್ ಜೈಲಿನ ಮುಂದೆ ಸಂಭ್ರಮಿಸಿದ್ದಾರೆ. ನೂರಾರು ಜನ ತ್ರಿವರ್ಣ ಹಿಡಿದು ಹಿಡಿದ ಜನ ನಿರ್ಭಯಾ ಜಿಂದಾಬಾದ್ ಎಂದು ಘೋಷಣೆ ಕೂಗಿದ್ರು.

ಇನ್ನೂ ನಿರ್ಭಯಾ ತಾಯಿಯಂತೂ ನೆನ್ನೆ ಕಂಡ ಸಾರ್ಥಕತೆ ಆನಂದವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಈ ದಿನಕ್ಕಾಗಿ ಒಂದಲ್ಲಾ ಎರೆಡಲ್ಲ 7 ವರ್ಷ ನಿರ್ಭಾಯಾ ತಾಯಿ ಆಸಾದೇವಿ ಹೋರಾಟ ಮಾಡಿದ್ದಾರೆ. ಯಾಕಂದ್ರೆ ಈ ಪ್ರಕರಣ ಇಡೀ ದೇಶವೇ ತಲೆ ತಗ್ಗಿಸುವಂತೆ ಮಾಡಿ. ಎದೆ ನಡುಗಿಸಿತ್ತು. ಗಲ್ಲು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಅಪರಾಧಿಗಳು ಬರೋಬ್ಬರಿ 12 ಬಾರಿ ಪ್ರಯತ್ನ ಮಾಡಿದ್ರು. ಆದ್ರೆ 13ನೇ ಬಾರಿ ಅಪರಾಧಿಗಳು ತಪ್ಪಿಸಿಕೊಳ್ಳಲು ಆಗಲೇ ಇಲ್ಲ. ಎಷ್ಟೇ ಸತ ಪ್ರಯತ್ನ ಮಾಡಿದ್ರೂ ಶುಕ್ರವಾರ ರಾತ್ರಿ ಅಪರಾಧಿಗಳಿಗೆ ಸಾವಿನ ಮುನ್ಸೂಚನೆ ಸಿಕ್ಕುಬಿಟ್ಟಿತ್ತು.
ಅಂತಿಮ ರಾತ್ರಿ ಹೇಗೆ ಕಳೆದ್ರು ಗೊತ್ತಾ…? ಅಪರಾಧಿಗಳಿಗೆ ಗಲ್ಲು ಶಿಕ್ಷೆ ಹೇಗಿತ್ತು..? ಕೊನೆ ಆಸೆ ಏನಾಗಿತ್ತು..? ಮಧ್ಯ ರಾತ್ರಿ ಸುಪ್ರಿಂ ಕೋರ್ಟ್ ಕೊಟ್ಟ ತೀರ್ಪು ಏನು..?
ಗುರುವಾರ ರಾತ್ರಿಯಿಡಿ ಇವರು ನಾಲ್ಕು ಜನ ನಿದ್ದೆ ಮಾಡಿರಲಿಲ್ಲ. ಶುಕ್ರವಾರ ಬೆಳಿಗ್ಗೆ ಉಪಾಹಾರ ಸೇವಿಸಿಲ್ಲ. ಸಾವು ಖಚಿತ ಎನ್ನುವುದು ಎಲ್ಲರಿಗೂ ಗೊತ್ತಾಗಿ ಹೋಗಿತ್ತು. ಪತ್ಯೇಕ ವಾರ್ಡ್ ನಲ್ಲಿದ್ದ ಈ ನಾಲ್ವರು ಬೆವತು ಹೋಗಿದ್ದರು. ಆದರೂ ಅಪರಾಧಿಗಳ ಪರ ವಕೀಲರು ಗಲ್ಲು ಶಿಕ್ಷೆಯನ್ನು ಮುಂದೂಡಲು ಸಾಕಷ್ಟು ಪ್ರಯತ್ನಗಳನ್ನ ರಾತ್ರಿ ಇಡಿ ಮಾಡುತ್ತಲೇ ಇದ್ದರು. ಶುಕ್ರವಾರ ತಡರಾತ್ರಿ 2 ಗಂಟೆಯಲ್ಲೂ ಅಪರಾಧಿಗಳ ಪರ ವಕೀಲ ಸುಪ್ರೀ ಕೋರ್ಟ್ ನಲ್ಲಿ ಎಪಿ ಸಿಂಗ್ ವಾದ ಮಾಡಿದ್ರು.

ಅಕ್ಷಯ್ ಪತ್ನಿ ವಿಚ್ಚೇದನ ಅರ್ಜಿ ಸಲ್ಲಿಸಿದ್ದಾರೆ, ಈ ರೀತಿ ವಿಚಾರಣೆಯಾಗಬೇಕಾದ ಅರ್ಜಿಗಳು ಅಧಿಕ ಇವೆ. ಕೊರೊನಾ ವೈರಸ್ ನಿಂದ ಯಾವ ದಾಖಲಾತಿಗಳು ನೀಡಲು ಆಗುತ್ತಿಲ್ಲ. ನನ್ನ ಬಳಿ ಎಲ್ಲಾ ದಾಖಲಾತಿಗಳು ಇವೆ. ಇದಲ್ಲವನ್ನೂ ನಾನು ನೀಡುತ್ತೇನೆ, ಸ್ವಲ್ಪ ಸಮಯವಾಕಾಶಕ್ಕೆ ಮನವಿ ಮಾಡಿದ್ರು. ಆದರೆ ಇವರ ಮನವಿಗೆ ನ್ಯಾ. ಮನಮೋಹನ್, ನ್ಯಾ ಭಾನುಮುತಿ ತ್ರೀ ಸದಸ್ಯ ಪೀಠ ಒಪ್ಪಲೇ ಇಲ್ಲ. ಅಪರಾಧಿಗಳು ಸಲ್ಲಿಸಿದ ಅರ್ಜಿಗಳು ತಿರಸ್ಕಾರಗೊಂಡಿವೆ. 32ರ ಪ್ರಕಾರ ಮರುಪರಿಶೀಲನೆ ಸಾಧ್ಯವಿಲ್ಲ. ಯಾವ ನೆಲೆಮೇಲೆ ಕ್ಷಮಾಧಾನ ಅರ್ಜಿ ಕೇಳುತ್ತಿದ್ದೀರಿ ಎಂದು ಪ್ರಶ್ನೆ ಮಾಡಿತ್ತು ತ್ರಿಸದಸ್ಯ ಪೀಠ. ಪಾಟಿಯಾಲಾ ಹೌಸ್ ಈಗಾಗಲೇ ಡೆತ್ ವಾರೆಂಟ್ ಕಳುಹಿಸಿ ಆಗಿದೆ. ಇವುಗಳಿಗೆ ಸ್ವಲ್ಪನಾದ್ರೂ ಗೌರವನ್ನು ನೀಡಬೇಕು ಎಂದೇಳಲಾಯಿತು. ಎಪಿ ಸಿಂಗ್ ಏನೇ ಕಸರತ್ತು ಮಾಡಿದರೂ ಪ್ರಯೋಜನವಾಗಲಿಲ್ಲ.
ಕೊನೆಯ ಆಸೆ ಏನು ಎಂದು ಕೇಳಿದಾಗ ನಿರ್ಭಯಾ ಅತ್ಯಾಚಾರಿಗಳು ಹೇಳಿದ್ದೇನು..?
ರಾತ್ರಿ ಪೂರ್ತಿ ಚಡಪಡಿಸಿದ್ದ ಅಪರಾಧಿಗಳ ಗಲ್ಲಿಗೂ ಮುನ್ನ ತಿಹಾರ್ ಜೈಲಿನಲ್ಲಿ ಚಟುವಟಿಕೆ ತೀರ್ವಗೊಂಡಿತ್ತು. ಗಲ್ಲು ಶಿಕ್ಷೆಗೂ ಒಂದು ಗಂಟೆಗೂ ಮುನ್ನ ಅತ್ಯಾಚಾರಿಗಳನ್ನು ಎಬ್ಬಿಸಲಾಗಿತ್ತು. ಅತ್ಯಾಚಾರಿಗಳು ಸ್ನಾನ ಮಾಡಲು ತಿಳಿಸಿದರೂ ಸ್ನಾನ ಮಾಡಿರಲಿಲ್ಲ. ಪ್ರಾರ್ಥನೆ ಕೂಡ ಮಾಡಿಲ್ಲ. ಬೆಳಿಗ್ಗೆ ನೀಡಿದ ಉಪಾಹಾರ ನಿರಾಕರಿಸಿದ್ರು. ನಂತರ ವೈದ್ಯರು ಇವರ ಆರೋಗ್ಯದ ಬಗ್ಗೆ ಖಚಿತಪಡಿಸಿಕೊಂಡಿದ್ದಾರೆ. ಮುಖಕ್ಕೆ ಕಪ್ಪು ಬಟ್ಟೆ ಹಾಕಿ, ಎರಡು ಕೈಗಳನ್ನ ಕಟ್ಟಲಾಗುತ್ತದೆ.

ಈ ವೇಳೆ ಕೊನೆ ಆಸೆ ಕೇಳಿದಾಗ ಅಕ್ಷಯ್, ಒಂದು ವೇಳೆ ನನಗೆ ಇವತ್ತು ನೇಣು ಹಾಕಿದರೆ ನಾನು ಬಿಡಿಸಿದ ಪೇಟಿಂಗ್ ಗಳಲ್ಲಿ ಒಂದನ್ನು ಜೈಲಿನ ಸೂಪರಿಟೆಂಡೆಂಟ್ ಅವರಿಗೆ ನೀಡಬೇಕು. ಉಳಿದ ಎಲ್ಲ ಪೇಟಿಂಗ್, ಹನುಮಾನ್ ಚಾಲೀಸ್ ಮತ್ತು ವಸ್ತುಗಳನ್ನು ತಾಯಿಗೆ ನೀಡಬೇಕು ಎಂದು ಹೇಳಿದ್ದನು.
ಇನ್ನೂ ಮುಖೇಶ್ ತನ್ನ ದೇಹವನ್ನು ದಾನ ಮಾಡಬೇಕು ಎಂದು ಹೇಳಿಕೊಂಡಿದ್ದಾನೆ ಎನ್ನಲಾಗುತ್ತಿದೆ. ನಾಲ್ಕು ಜನರ ಪೈಕಿ ಇನ್ನಿಬ್ಬರು ಯಾವುದೇ ಕೊನೆ ಆಸೆಯನ್ನು ಹೇಳಿಕೊಂಡಿಲ್ಲ. ಆ ಬಳಿಕ ನಾಲ್ವರಿಗೆ ಗಲ್ಲು ಶಿಕ್ಷೆಗೆ ಒಳಪಡಿಸಲಾಗಿದೆ. ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ವೈದ್ಯರು ಈ ಬಗ್ಗೆ ಖಚಿತ ಪಡಿಸಿದ್ದಾರೆ.
ಒಟ್ಟಿನಲ್ಲಿ ಇಡೀ ಹೆಣ್ಣು ಕುಲವೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ನ್ಯಾಯ ಸಿಕ್ಕಂತಾಗಿದೆ. ನಿರ್ಭಯಾದಂತಹ ಅದೆಷ್ಟೋ ಪ್ರಕರಣಗಳಿಗೂ ನ್ಯಾಯ ಸಿಗಬೇಕಿದೆ. ಬಲವಂತವಾಗಿ ಹೆಣ್ಣನ್ನು ಮುಟ್ಟುವ ಕ್ರೂರಿಗಳಿಗೆ ಇದು ಪಾಠವಾಗಬೇಕಿದೆ.

