ತಮಿಳುನಾಡು ವಾಯುಪಡೆ ಅಧಿಕಾರಿ ಮೇಲೆ ಅತ್ಯಾಚಾರದ ಆರೋಪ, ಬಂಧನ!

ತಮಿಳುನಾಡಿನಲ್ಲಿ ವಾಯುಪಡೆ ಅಧಿಕಾರಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಕೇಳಿಬಂದಿದ್ದು ಆತನನ್ನು ಬಂಧಿಸಲಾಗಿದೆ.

ಸಹೋದ್ಯೋಗಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಭಾರತೀಯ ವಾಯುಪಡೆಯ ಅಧಿಕಾರಿಯನ್ನು ಭಾನುವಾರ ಕೊಯಮತ್ತೂರಿನಲ್ಲಿ ಬಂಧಿಸಲಾಗಿದೆ.
ಹತ್ತು ದಿನಗಳ ಹಿಂದೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.

ತನಿಖಾಧಿಕಾರಿಗಳು ಹೇಳುವಂತೆ ಆರೋಪಿತ ಅಧಿಕಾರಿ 29 ವರ್ಷದ ಫ್ಲೈಟ್ ಲೆಫ್ಟಿನೆಂಟ್ ಎಂದು ಹೇಳಲಾಗಿದೆ. ರೇಸ್ ಕೋರ್ಸ್ ಬಳಿಯ ವಾಯುಪಡೆಯ ತರಬೇತಿಗಾಗಿ ಛತ್ತೀಸ್‌ಗಢದಿಂದ ಬಂದಿದ್ದರು.

“ಹೌದು, ನಿನ್ನೆ ಅವರನ್ನು ಬಂಧಿಸಲಾಯಿತು ಮತ್ತು ಎರಡು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ದೀಪಕ್ ಡಾಮನ್ ಸುದ್ದಿಗಾರರಿಗೆ ದೃಢಪಡಿಸಿದ್ದಾರೆ.

ಸೆಕ್ಷನ್ 376 ರ ಅಡಿಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights