ಬೆಂಗಳೂರಿನಲ್ಲಿ ಮತ್ತೊಂದು ಭೀಕರ ದುರಂತ : ಲಕ್ಕಸಂದ್ರದಲ್ಲಿ ಬಹುಮಹಡಿ ಕಟ್ಟಡ ಕುಸಿತ!

ಬೆಂಗಳೂರಿನಲ್ಲಿ ಮತ್ತೊಂದು ಭೀಕರ ದುರಂತ ಸಂಭವಿಸಿದ್ದು ಲಕ್ಕಸಂದ್ರದಲ್ಲಿ ಬಹುಮಹಡಿ ಕಟ್ಟಡ ಕುಸಿದಿದೆ.

ಇಂದು ಬೆಳಿಗ್ಗೆ 11.30ಕ್ಕೆ ಈ ದುರಂತ ಸಂಭವಿಸಿದೆ. ಲಕ್ಕಸಂದ್ರದ 7ನೇ ಮುಖ್ಯರಸ್ತೆಯಲ್ಲಿ ಇರುವ ನಂಜಪ್ಪ ಅವರಿಗೆ ಸೇರಿದ 3 ಅಂತಸ್ತಿನ ಕಟ್ಟಡ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು ಮೊಬೈಲ್ ನಲ್ಲಿ ದೃಶ್ಯ ಸೆರೆಯಾಗಿದೆ. ಈ ಕಟ್ಟಡದ ಕೆಳಗೆ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು ಭೂ ಕುಸಿದಿರಬಹುದು ಎನ್ನಲಾಗುತ್ತಿದೆ. 21 ಜನ ವಾಸವಿದ್ದ ಕಟ್ಟಡ ಇದಾಗಿತ್ತು. ಮೆಟ್ರೋ ಕಾಮಗಾರಿಗೆ ಬಂದ ಕಾರ್ಮಿಕರು ಈ ಮನೆಯಲ್ಲಿ ವಾಸವಿದ್ದರು ಎನ್ನಲಾಗುತ್ತಿದೆ. ಬಿಹಾರ್-ಯುಪಿ ಮೂಲಕ ಕಾರ್ಮಿಕರು ಈ ಮನೆಯಲ್ಲಿ ವಾಸವಿದ್ದು ಮನೆಯ ಒಳಗೆ ಕಲ್ಲುಗಳು ಬೀಳುವುದರಿಂದ ಭಯಗೊಂಡು ಹೊರಗೆ ಓಡಿ ಬಂದಿದ್ದಾರೆ.

ಈ ವೇಳೆ ಅಕ್ಕಪಕ್ಕದ ಮನೆಗಳಲ್ಲಿ ಜನ ವಾಸವಾಗಿದ್ದರು.ಈ ಹಳೆ ಕಟ್ಟಡ ವಾಸಮಾಡಲು ಯೋಗ್ಯವಿಲ್ಲದೇ ಇದ್ದರೂ ಇಲ್ಲಿ ಜನ ವಾಸವಾಗಿದ್ದರು. ಇದು ಉರುಳಿ ಬಿದ್ದ ಪರಿಣಾಮ ಎದುರು ಇರುವ ಮನೆಗೆ ಹೆಚ್ಚಿನ ಹಾನಿಯಾಗಿದೆ. ಮಾತ್ರವಲ್ಲದೆ ಕಟ್ಟಡದ ಅಕ್ಕಪಕ್ಕದ ಕಟ್ಟಡಗಳಿಗೂ ಹಾನಿಯಾಗಿದೆ. ಒಂದು ವೇಳೆ ರಾತ್ರಿ ಹೊತ್ತು ಈ ದುರ್ಘಟನೆ ಸಂಭವಿಸಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು.

ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಟ್ಟಡ ಬೀಳುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights