ವಿಶ್ವದ ದೊಡ್ಡಣ್ಣನಿಗೆ ದೊಡ್ಡ ಪೆಟ್ಟು : ಕೊರೊನಾ ಅಟ್ಟಹಾಸಕ್ಕೆ ತತ್ತರಿಸಿದ ಅಮೆರಿಕ!

ಜಗತ್ತಿನಾದ್ಯಂತ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಇದರಿಂದ ವಿಶ್ವದ ದೊಡ್ಡಣ್ಣನಿಗೆ ಭಾರೀ ಪ್ರಮಾಣದ ಪೆಟ್ಟು ಬಿದ್ದಿದೆ.  ಕೊರೊನಾ ಸೋಂಕು ಹರಡಿರುವ ರಾಷ್ಟ್ರಗಳ ಪೈಕಿ ಅಮೆರಿಕಾ ಮುಂಚುಣಿಯಲ್ಲಿದ್ದು, ಕೊರೊನಾ ವೈರಸ್ ಹುಟ್ಟೂರಾದ ಚೀನಾಕ್ಕಿಂತಲೂ ದೊಡ್ಡ ಪ್ರಮಾಣದ ಸಾವು ನೋವುಗಳು       ಅಮೆರಿಕಾದಲ್ಲಿ ಕಾಣ ಸಿಗುತ್ತಿವೆ.

ಹೌದು…  ಅಮೆರಿಕದಲ್ಲಿ 20 ಜನರು ಕೊರೋನಾದಿಂದ ಮೃತಪಟ್ಟಿದ್ದು, ವಿಶ್ವದಲ್ಲಿ ಸಾವಿನ ಸಂಖ್ಯೆಯಲ್ಲಿ ಅಮೆರಿಕ ಮೊದಲ ಸ್ಥಾನಕ್ಕೇರಿದೆ. 24 ಗಂಟೆಯಲ್ಲಿ 911 ಜನರು ಮೃತಪಟ್ಟಿದ್ದಾರೆ. ಶನಿವಾರ 26 ಸಾವಿರ ಹೊಸ ಪ್ರಕರಣ ದಾಖಲಾಗಿದ್ದು, ಸೋಂಕಿತರ ಸಂಖ್ಯೆ 5.3 ಲಕ್ಷ ದಾಟಿದ್ದು, ಬರೋಬ್ಬರಿ 20,577 ಜನರು ಮೃತಪಟ್ಟಿದ್ದಾರೆ. ಇದಕ್ಕೆ ಕಾರಣ ಅಮೆರಿಕಾ ಕೊರೊನಾ ವೈರಸ್ ಬಗ್ಗೆ ತೋರಿದ ನಿರ್ಲಕ್ಷ್ಯವೇ ಕಾರಣ.

ಚೀನಾದಲ್ಲಿ ಮೊದಲು ಕೊರೊನಾ ವೈರಸ್ ಕಾಣಿಸಿಕೊಂಡಾಗ ಅಮೆರಿಕಾ ಮುಂಜಾಗೃತ ಕ್ರಮ ವಹಿಸಿಕೊಂಡಿರಲಿಲ್ಲ. ಇದೇ ತಪ್ಪಿನಿಂದಾಗಿ ಅಮೆರಿಕಾ ಸದ್ಯ ವೈರಸ್ ಮುಂದೆ ಮಂಡಿಯೂರಬೇಕಾದಂತ ಸ್ಥಿತಿ ನಿರ್ಮಾಣವಾಗಿದೆ. ಅತಿ ಜನ ನಿಬಿಡ ನಗರಗಳಾದ ನ್ಯೂಯಾರ್ಕ್​ ಸೇರಿ ಹಲವು ಕಡೆಗಳಲ್ಲಿ ಕೊರೋನಾ ಕಾಣಿಸಿಕೊಂಡಿದ್ದು, ಹೀಗಾಗಿ ಈ ವೈರಸ್​ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ.

ಸ್ಪೇನ್​ ಕೂಡ ಈ ಭೀಕರ ವೈರಸ್​ ದಾಳಿಗೆ ತತ್ತರಿಸಿದೆ. 1.63 ಲಕ್ಷ ಜನರಲ್ಲಿ ಕೊರೋನಾ ಸೋಂಕು ಇದೆ. 16 ಸಾವಿರ ಮಂದಿ ಸತ್ತಿದ್ದಾರೆ. ಇಟಲಿಯಲ್ಲಿ 15 ಲಕ್ಷ ಜನರಿಗೆ ಸೋಂಕು ಅಂಟಿದ್ದು, 19 ಸಾವಿರ ಮಂದಿ ಅಸುನೀಗಿದ್ದಾರೆ.

ಆರಂಭದಲ್ಲಿ ಕೊರೋನಾ ಕಾಣಿಸಿಕೊಂಡಿದ್ದ ಚೀನಾದಲ್ಲಿ ಕೊರೋನಾ ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಕೊರೋನಾ ಮುಕ್ತ ರಾಷ್ಟ್ರ ಆಗುವ ಭರವಸೆಯನ್ನು ಚೀನಾ ವ್ಯಕ್ತಪಡಿಸಿದೆ. ಇನ್ನು ವಿಶ್ವಾದ್ಯಂತ 17.30 ಲಕ್ಷ ಜನರಿಗೆ ಕೊರೋನಾ ಅಂಟಿದೆ. 1.08 ಲಕ್ಷ ಜನರು ಈ ವೈರಸ್​ಗೆ ಅಸುನೀಗಿದ್ದಾರೆ.

ಆದರೆ ಮುಂಜಾಗೃತಿ ವಹಿಸದ ಹಿನ್ನೆಲೆಯಲ್ಲಿ ಅಮೆರಿಕಾ ಇಂದು ಚೀನಾವನ್ನೇ ಮೀರಿಸಿ ನಿಂತಿದೆ. ಆರಂಭದಲ್ಲಿ ವೈರಸ್ ಬಗ್ಗೆ ಗಂಭೀರವಾಗಿ ತೆಗೆದುಕೊಂಡಿದ್ದರೆ ಬಹುಶ: ಅಮೆರಿಕಾ ಇಂತಹ ಸ್ಥಿತಿ ತಲುಪುತ್ತಿರಲಿಲ್ಲವೆನೋ. ಆದರೆ ಸದ್ಯ ಪರಿಸ್ಥಿತಿ ಇನ್ನೂ ಕೈ ಮೀರಿ ಹೋಗುವ ಮುನ್ನ ಅಮೆರಿಕಾ ಕೊರೊನಾ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳಬೇಕಾಗಿದೆ. ಇಲ್ಲವಾದರೆ ಅಮೆರಿಕಾ ಸಂಪೂರ್ಣವಾಗಿ ವುಹಾನ್ ಪ್ರಾಂತ್ಯ ಆಗೋದ್ರಲ್ಲಿ ಅನುಮಾನವೇ ಇಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights