ಮುಖ್ಯಮಂತ್ರಿ ಬಿಎಸ್‌ವೈ ಖುರ್ಚಿಗಿಲ್ಲ ಸಂಚಕಾರ: ಆರ್. ಅಶೋಕ್‌

ಬಿಜೆಪಿಯಲ್ಲಿ ಬಣಗಳು ಶುರುವಾಗಿದ್ದು, ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದವರ ಗುಂಪು ಸಿಎಂ ಬಿಎಸ್‌ವೈ ಅವರನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಲು ಯತ್ನಿಸುತ್ತಿದೆ ಎಂಬ ಮಾತು ಹಲವಾರು ದಿನಗಳಿಂದ ಕೇಳಿಬರುತ್ತಿವೆ. ಈ ಬಗ್ಗೆ ಮಾತನಾಡಿರುವ ಆರ್‌ ಅಶೋಕ್‌ ಅವರು ಮುಂದಿನ ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರೇ ಮುಂದುವರೆಯಲಿದ್ದಾರೆ. ಯಾವುದೇ ರೀತಿಯ ಬದಲಾವಣೆ ಆಗುವುದಿಲ್ಲ. ಇದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಹೇಳಿದ್ದಾರೆ.

ರಾಜಕಾರಣದಲ್ಲಿ ನುರಿತಿರುವ ಅವರು ಎಂತಹುದೇ ಪರಿಸ್ಥಿತಿಯನ್ನು ಜಾಣ್ಮೆಯಿಂದ ನಿಭಾಯಿಸಬಲ್ಲರು. ಅವರರಿಗೇ ವೇಗವಾಗಿ ಬೌಲ್‌ ಮಾಡಲಿ, ವೈಡ್‌, ಸ್ಪಿನ್‌ ಯಾವುದೇ ರೀತಿಯ ಬಾಲ್‌ ಹಾಕಿದರೂ ಫೋರ್‌, ಸಿಕ್ಸ್‌ ಹೊಡೆಯುವ ತಾಕತ್ತು ಅವರಿಗಿದೆ ಎಂದು ಅಶೋಕ್‌ ಹೇಳಿದ್ದಾರೆ.

ಸಂಪುಟ ವಿಸ್ತರಣೆ ವಿಚಾರದಲ್ಲಿ ಮುಖ್ಯಮಂತ್ರಿಯರಿಗೇ ಪರಮಾಧಿಕಾರವಿದೆ. ಸಮಯ ಸಂದರ್ಭ ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳುತ್ತಾರೆ. ಬಿಜೆಪಿ ಸರ್ಕಾರ ರಚನೆಗೆ ಸಹಕರಿಸಿದವರನ್ನು ಕೈಬಿಡುವ ಪ್ರಶ್ನೆ ಇಲ್ಲ. ಅವರನ್ನು ಸಚಿವರನ್ನು ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಅಶೋಕ ಹೇಳಿದರು.

ರಾಜಧಾನಿ ಬೆಂಗಳೂರಿನ ಮೇಲೆ ಅಧಿಕಾರದ ಹಿಡಿತ ಸಾಧಿಸುವ ಉದ್ದೇಶ ಯಾರಿಗೂ ಇಲ್ಲ. ಬೆಂಗಳೂರಿನ ಉಸ್ತುವಾರಿಗಾಗಿ ಸಚಿವರ ನಡುವೆ ಪೈಪೋಟಿಯೂ ಇಲ್ಲ. ಸದ್ಯ ಮುಖ್ಯಮಂತ್ರಿಗಳೇ ಬೆಂಗಳೂರಿನ ಉಸ್ತುವಾರಿ ಹೊತ್ತಿದ್ದಾರೆ. ಹಾಗೇ ಮುಂದುವರೆಯಲಿದೆ. ಬೇರಾವುದೇ ತಿಕ್ಕಾಟವಿಲ್ಲ ಎಂದೂ ಅಶೋಕ್‌ ಹೇಳಿದ್ದಾರೆ.


ಇದನ್ನೂ ಓದಿ:  ಹಿಂದಿ ರಾಷ್ಟ್ರಭಾಷೆಯಲ್ಲ; ಕರ್ನಾಟಕದಲ್ಲಿ ಹಿಂದಿ ಹೇರಿಕೆ ಸರ್ಕಾರ ಅಂದುಕೊಂಡಿರುವಷ್ಟು ಸುಲಭವಲ್ಲ: ಹೆಚ್‌ಡಿಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights