ಜರ್ಮನ್ ವೈದ್ಯರ ವಿಶೇಷ ಪ್ರತಿಭಟನೆ : ನಗ್ನವಾಗಿ ಅಸಮಧಾನ ಹೊರಹಾಕಿದ ಡಾಕ್ಟರ್ಸ್!
ಕೊರೊನಾ ಸೋಂಕಿತ ರಾಷ್ಟ್ರಗಳಲ್ಲಿ ಒಂದಾದ ಜರ್ಮನ್ ನಲ್ಲಿ ವೈದ್ಯರು ನಗ್ನ ಪ್ರತಿಭಟನೆ ಮಾಡಿದ್ದಾರೆ. ಇದಕ್ಕೆ ಕಾರಣ ಕೇಳಿದ್ರೆ ಶಾಕ್ ಆಗೋದಂತು ಗ್ಯಾರೆಂಟಿ.
ಹೌದು… ಕೋವಿಡ್-19 ವಿರುದ್ಧ ಹೋರಾಟ ಮಾಡೋದಕ್ಕೆ ಇಡೀ ವಿಶ್ವವೇ ಪಣತೊಟ್ಟು ನಿಂತಿದೆ. ಈ ಯುದ್ಧದಲ್ಲಿ ವಾರಿಯರ್ಸ್, ಪೊಲೀಸರು ವಿಶೇಷವಾಗಿ ವೈದ್ಯರು ಮುಂಚುಣಿಯಲ್ಲಿದ್ದಾರೆ. ಆದರೆ ದುರಾದೃಷ್ಟ ಎಂದರೆ ಅದೇಷ್ಟೋ ದೇಶಗಳಲ್ಲಿ ಕೊರೊನಾ ವಿರುದ್ಧ ಹೋರಾಡಲು ಮುಂದಿರುವ ವೈದ್ಯರಿಗೆ ರಕ್ಷಣಾ ಕವಚಗಳೇ ಇಲ್ಲ. ಹೀಗಾಗಿ ತಮಗೆ ಅಗತ್ಯ ವಸ್ತುಗಳ ಪೂರೈಸುವಂತೆ ಜರ್ಮನ್ ಡಾಕ್ಟರ್ಸ್ ನಗ್ನ ಹೋರಾಟ ಮಾಡಿದ್ದಾರೆ.
ಕೊರೊನಾ ತಡೆಗೆ ವಿಶ್ವದೆಲ್ಲೆಡೆ ನಾನಾ ಕಸರತ್ತುಗಳನ್ನ ಮಾಡಲಾಗುತ್ತಿದೆ. ಆದ್ರೆ ಕೊರೊನಾ ಅನ್ನೋ ಕಾಡಿಗಿಚ್ಚಿನಿಂದ ಸಂಪೂರ್ಣವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹ ಕಿಲ್ಲರ್ ಕೊರೊನಾಗೆ ವಿಶ್ವದಾದ್ಯಂತ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 30 ಲಕ್ಷಕ್ಕಿಂತ ಅಧಿಕ ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಜನರ ಪಾ್ರಣ ರಕ್ಷಣೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳು ತಮ್ಮ ಪ್ರಾಣ ಪಣಕ್ಕಿಡುತ್ತಿದ್ದಾರೆ.
ಈ ಹೋರಾಟದಲ್ಲಿ ನೂರಾರು ವೈದ್ಯರು ಪ್ರಾಣತ್ಯಾಗ ಮಾಡಿದ್ದಾರೆ.ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಜರ್ಮನ್ ವೈದ್ಯರು ವಿಶೇಷವಾಗಿ ಪ್ರತಿಭಟನೆ ಮಾಡಿದ್ದಾರೆ. ಸೋಂಕಿತರಿಗೆ ಚಿಕಿತ್ಸೆ ನೀಡಬೇಕು ಅಂದ್ರೆ ವೈದ್ಯರು ಅಥವಾ ಇನ್ನಿತರ ಸಿಬ್ಬಂದಿ ಬಳಿ ಪಿಪಿಇ ಕಿಟ್ ಅಂದ್ರೆ ಮಾಸ್ಕ್, ಹ್ಯಾಂಡ್ ಗ್ಲೌಸ್, ಉಡುಪು, ಸ್ಪೆಕ್ಟ್, ಹೆಡ್ ಕ್ಯಾಪ್ ಸೇರಿದಂತೆ ಇನ್ನಿತರ ಸಾಮಾಗ್ರಿಗಳು ಲಭ್ಯವಾಗುತ್ತಿಲ್ಲ. ಹೀಗಾಗಿ ಅಲ್ಲಿನ ಸರ್ಕಾರದ ಗಮನ ಸೆಳೆಯಲು ಜರ್ಮನ್ನ ಒಂದು ಗುಂಪಿನ ವೈದ್ಯರು ನಗ್ನ ಪ್ರತಿಭಟನೆ ಮಾಡಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.


