ರೈತರಿಗೆ ಲಿಖಿತ ಪ್ರಸ್ತಾಪ ಕಳಿಸಿದ ಕೇಂದ್ರ; ರೈತ ನಾಯಕರ ಪ್ರತಿಕಾಗೋಷ್ಠಿಯ ಮುಖ್ಯಾಂಶಗಳು!

ಕಳೆದ ಒಂದು ವರ್ಷದಿಂದ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಹೋರಾಟ ಯಶಸ್ವಿಯಾಗಿದೆ. ರೈತರ ಬೇಡಿಕೆಯಲ್ಲಿ ಒಂದಾಗಿದ್ದ, ಮೂರು ರೈತ ವಿರೋಧಿ ಕಾಯ್ದೆಗಳು ರದ್ದಾಗಿವೆ. ಇನ್ನೂ ಹಲವು ಬೇಡಿಕೆಗಳು ಉಳಿದಿದ್ದು, ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ. ಈ ನಡುವೆ ಸರ್ಕಾರವು ರೈತರಿಗೆ ಲಿಖಿತ ಪ್ರಸ್ತಾಪವನ್ನು ಕಳಿಸಿದೆ. ಈ ಬಗ್ಗೆ, ಪತ್ರಿಕಾಗೋಷ್ಟಿ ನಡೆಸಿ ಹಲವು ವಿಚಾರಗಳನ್ನು ತಿಳಿಸಿದ್ದಾರೆ.

ಪತ್ರಿಕಾಗೋಷ್ಟಿಯ ಪ್ರಮುಖ ಅಂಶಗಳು ಹೀಗಿವೆ:

  1. ಸರ್ಕಾರವು ಮಂಗಳವಾರ ಮಧ್ಯಾಹ್ನ ಲಿಖಿತವಾಗಿ ಪ್ರಸ್ತಾಪವನ್ನು ಎಸ್‌ಕೆಎಂಗೆ ಕಳಿಸಿದೆ. ಅದನ್ನು ಪರಿಗಣಿಸಲಾಗಿದೆ, ವಿಸ್ತೃತ ಚರ್ಚೆ ನಡೆಸುತ್ತದೆ ಮತ್ತು ಎಸ್‌ಕೆಎಂ ತನ್ನ ಉತ್ತರವನ್ನು ಸರ್ಕಾರಕ್ಕೆ ಕಳುಹಿಸುತ್ತದೆ.
  2. ನಾಳೆಯೊಳಗೆ ಸರ್ಕಾರವು ಪ್ರತಿಕ್ರಿಯೆ ನೀಡಿದರೆ ನಂತರ ಹೋರಾಟ ಅಂತ್ಯಗೊಳಿಸುವ ಕುರಿತು ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ಎಸ್‌ಕೆಂ ಭಾವಿಸುತ್ತೇವೆ.
  3. ಎಂಎಸ್‌ಪಿ ಸಮಿತಿ ಬಗ್ಗೆ ಎಸ್‌ಕೆಎಂ ಸ್ಪಷ್ಟೀಕರಣವನ್ನು ಬಯಸುತ್ತದೆ. ಆ ಸಮಿತಿಯಲ್ಲಿ ಕೃಷಿ ಕಾನೂನುಗಳನ್ನು ಬೆಂಬಲಿಸಿದ ರೈತ ಸಂಘಟನೆಗಳನ್ನು ಒಳಗೊಳ್ಳಬಾರದು. ಡಬ್ಲುಟಿಓ ಪರವಾಗಿರುವರು ಸಹ ಇರಬಾರದು. ಕೇವಲ ಎಸ್‌ಕೆಎಂ ಪ್ರತಿನಿಧಿಗಳಿರಬೇಕು.
  4. ಕೃಷಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ದೇಶಾದ್ಯಂತ ರೈತರ ಮೇಲೆ ಪ್ರಕರಣಗಳು ದಾಖಲಾಗಿವೆ. ಪ್ರತಿಭಟನೆ ಅಂತ್ಯಗೊಳಿಸಿದ ನಂತರ ಅವರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯುವುದಾಗಿ ಸರ್ಕಾರ ಹೇಳುತ್ತಿದೆ. ಇದನ್ನು ಎಸ್‌ಕೆಎಂ ಒಪ್ಪುವುದಿಲ್ಲ. ಪ್ರಕರಣಗಳನ್ನು ವಾಪಸ್ ತೆಗೆದುಕೊಂಡ ನಂತರವೇ ಪ್ರತಿಭಟನೆ ಅಂತ್ಯವಾಗಲಿದೆ. ರೈತರೊಂದಿಗೆ ಕಲಾವಿದರು, ಚಿತ್ರನಟರು, ಸಾಮಾಜಿಕ ಕಾರ್ಯಕರ್ತರು ಮತ್ತು ವಿದೇಶಿ ವ್ಯಕ್ತಿಗಳ ಮೇಲಿನ ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕು.
  5. ವಿದ್ಯುತ್ ತಿದ್ದುಪಡಿ ಮಸೂದೆ ಸಂಸತ್ತಿನಲ್ಲಿ ಮಂಡನೆಯಾಗಬಾರದು.
  6. ಕೃಷಿ ತ್ಯಾಜ್ಯ ಸುಟ್ಟ ಪ್ರಕರಣಗಳನ್ನು ಎದುರಿಸುತ್ತಿರುವವರಿಗೆ ಹಣಕಾಸಿನ ದಂಡದ ಶಿಕ್ಷೆ ನೀಡಬಾರದು.
  7. ಪಂಜಾಬ್ ಸರ್ಕಾರದ ಮಾದರಿಯಲ್ಲಿ ರೈತ ಹೋರಾಟದಲ್ಲಿ ಮೃತಪಟ್ಟ ರೈತ ಕುಟುಂಬಕ್ಕೆ ಪರಿಹಾರ ನೀಡಬೇಕು. ಪ್ರತಿ ಕುಟುಂಬಕ್ಕೆ 5 ಲಕ್ಷ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡಬೇಕು.

Read Also: MSP ಕಾಯಿದೆಯಾಗದೆ- ವಿದ್ಯುತ್ ಮಸೂದೆ ರದ್ದಾಗದೇ ರೈತ ವಿಜಯ ಅಪೂರ್ಣ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights