ಬೆಂಗಳೂರು ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ ಮುಖಸ್ಥ ಸ್ಥಾನಕ್ಕೆ ಅರ್ಜಿ ಆಹ್ವಾನ..!

ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ ಮುಖಸ್ಥ ಸ್ಥಾನಕ್ಕೆ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಪ್ರಸ್ತುತ ಆ ಸ್ಥಾನದಲ್ಲಿ ಕನ್ನಡಿಗ ರಾಹುಲ್ ದ್ರಾವಿಡ್​ ಇದ್ದು, ಮತ್ತೆ ಅರ್ಜಿ ಸಲ್ಲಿಸಬಹುದು ಎನ್ನಲಾಗುತ್ತಿದೆ.

ಅಂಡರ್​ 19 ಮತ್ತು ಎ ತಂಡಗಳ ಮುಖ್ಯ ಕೋಚ್​ ಆಗಿ ಭಾರತ ಕ್ರಿಕೆಟ್​ನ ಬೆಂಚ್​ ಬಲಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕನ್ನಡಿಗ ರಾಹುಲ್ ದ್ರಾವಿಡ್ ಪ್ರಸ್ತುತ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ ಮುಖಸ್ಥ ಸ್ಥಾನದಲ್ಲಿದ್ದು ಈ ಸ್ಥಾನಕ್ಕಾಗಿ ಬಿಸಿಸಿಐ ಅರ್ಜಿ ಆಹ್ವಾನಿಸಿದೆ.

2019ರಲ್ಲಿ ರಾಹುಲ್ ದ್ರಾವಿಡ್ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯ ಮುಖ್ಯಸ್ಥರಾಗಿ ನೇಮಕವಾಗಿದ್ದರು. 2 ವರ್ಷದ ಒಪ್ಪಂದದಲ್ಲಿ ದ್ರಾವಿಡ್ ಅವಧಿ ಪೂರ್ಣಗೊಂಡಿದೆ ಎಂದು  ಬಿಸಿಸಿಐ ತಿಳಿಸಿದೆ.ಹಾಗಾಗಿ, ಬಿಸಿಸಿಐ ಅರ್ಜಿಗಳನ್ನು ಆಹ್ವಾನಿಸಿದೆ. ಆದರೆ ಆಗಸ್ಟ್ 15ರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು ದ್ರಾವಿಡ್​ ಮತ್ತೆ ಎರಡು ವರ್ಷಗಳ ವಿಸ್ತರಣೆಗಾಗಿ ಮತ್ತೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.

ರಾಹುಲ್​ ದ್ರಾವಿಡ್​ ಎನ್​ಸಿಎ ಮುಖ್ಯಸ್ಥ ಸ್ಥಾನಕ್ಕೆ ಮರು ಅರ್ಜಿ ಸಲ್ಲಿಸಬಹುದು. ಆದರೆ, 2021ರ ಟಿ20 ವಿಶ್ವಕಪ್​ ನಂತರ ಭಾರತ ತಂಡದ ಮುಖ್ಯ ಕೋಚ್​ ಆಗಿರುವ ರವಿಶಾಸ್ತ್ರಿ ಅವರ ಅವಧಿ ಮುಕ್ತಾಯವಾಗಲಿದೆ. ಹಾಗಾಗಿ, ದ್ರಾವಿಡ್​ ಭಾರತ ತಂಡದ ಮುಖ್ಯ ಕೋಚ್​ ಆಗುವ ಎಲ್ಲಾ ಸಾಧ್ಯತೆಯಿದೆ. ಕೊನೆಗೆ ದ್ರಾವಿಡ್​ ಸಂಸ್ಥೆಯ ಯಾವುದೇ ಒಂದು ಭಾಗವಾಗಿ ಉಳಿಯುವ ಸಾಧ್ಯತೆ ಹೆಚ್ಚಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ದ್ರಾವಿಡ್ ಇತ್ತೀಚೆಗೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತ ತಂಡದ ಭಾಗವಾಗಿದ್ದರು. ಶ್ರೀಲಂಕಾದಲ್ಲಿ ನಡೆದ ಆರು ಪಂದ್ಯಗಳ ಮುಕ್ತಾಯದ ನಂತರ, ದೀರ್ಘಾವಧಿಯ ಆಧಾರದ ಮೇಲೆ ಭಾರತದ ಮುಖ್ಯ ಕೋಚ್​ ಆಗಲು ಬಯಸುತ್ತೀರಾ ಎಂದು ಕೇಳಿದ್ದಕ್ಕೆ, ತಾವೂ ಅಂತಹ ಹೈ ಪ್ರೊಫೈಲ್ ಹುದ್ದೆಗೆ ಬದ್ಧರಾಗಿಲ್ಲ ಎಂದಿದ್ದರು.

ಬಿಸಿಸಿಐ ಮುಖ್ಯ ಕೋಚ್ ಆಗಲು ಬಿಸಿಸಿಐ 60 ವರ್ಷ ವಯೋಮಿತಿ ನಿಗದಿ ಮಾಡಿದೆ. ಶಾಸ್ತ್ರಿಗೆ 59 ವರ್ಷಗಳಾಗಿರುವುದರಿಂದ, ಟಿ20 ವಿಶ್ವಕಪ್​ ನಂತರ ಮುಖ್ಯ ಕೋಚ್​ ಸ್ಥಾನಕ್ಕೆ ದ್ರಾವಿಡ್​ ಹೆಸರು ಹೆಚ್ಚು ಕೇಳಿ ಬರುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights