ದೇಶಾದ್ಯಂತ 31,533 ಹೊಸ ಕೊರೊನಾ ಕೇಸ್ : 412 ಜನ ಬಲಿ!

ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 31,533 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 412 ಸೋಂಕಿತರು ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳಿಂದ ತಿಳಿದಿದೆ.

ಭಾರತದಲ್ಲಿ ಒಂದೇ ದಿನ 31,522 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 97,67,372ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಸೋಂಕಿಗೆ 412 ಜನ ಬಲಿಯಾಗಿದ್ದು ಈ ಮೂಲಕ ಸಾವಿನ ಸಂಖ್ಯೆ 1,41,772 ಕ್ಕೆ ತಲುಪಿದೆ.

ಕಳೆದ 24 ಗಂಟೆಗಳಲ್ಲಿ 37,725 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು ಈವರೆಗೆ ಒಟ್ಟು ಬಿಡುಗಡೆಯಾದ ಪ್ರಕರಣಗಳ ಸಂಖ್ಯೆ 92,53,306 ಆಗಿದೆ. ದೇಶದ 97 ಲಕ್ಷ ಕೊರೊನಾವೈರಸ್ ಪ್ರಕರಣಗಳಲ್ಲಿ ಸದ್ಯ 3,72,293 ಕೋವಿಡ್ -19 ಸಕ್ರಿಯ ಪ್ರಕರಣಗಳು ಇವೆ.

ಮಹಾರಾಷ್ಟ್ರದಲ್ಲಿ ಬುಧವಾರ ಕೋವಿಡ್ -19 ಪ್ರಕರಣಗಳ ಸಂಖ್ಯೆ 18,64,348 ಕ್ಕೆ ಏರಿಕೆಯಾಗಿದ್ದು, 4,981 ಹೊಸ ಪ್ರಕರಣಗಳನ್ನು ದಾಖಲಿಸಿದೆ. 75 ಹೊಸ ಸಾವುನೋವುಗಳೊಂದಿಗೆ ಮಹಾರಾಷ್ಟ್ರದಲ್ಲಿ ಸಾವಿನ ಸಂಖ್ಯೆ 47,902 ತಲುಪಿದೆ. ಒಟ್ಟು 5,111 ರೋಗಿಗಳನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದ್ದು, ರಾಜ್ಯದಲ್ಲಿ ಚೇತರಿಸಿಕೊಂಡ ಪ್ರಕರಣಗಳ ಸಂಖ್ಯೆ 17,42,191 ಕ್ಕೆ ತಲುಪಿದೆ. ಮಹಾರಾಷ್ಟ್ರದಲ್ಲಿ ಈಗ 73,166 ಸಕ್ರಿಯ ರೋಗಿಗಳಿದ್ದಾರೆ.

ದೆಹಲಿಯಲ್ಲಿ ಬುಧವಾರ 2,463 ಹೊಸ ಕೊರೊನಾವೈರಸ್ ಪ್ರಕರಣಗಳು ದಾಖಲಾಗಿದ್ದು, 72,000 ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದ್ದು, ದೆಹಲಿಯಲ್ಲಿ ಬುಧವಾರ 50 ಸೋಂಕಿತರ ಸಾವು ಸಂಭವಿಸಿದೆ. ಇದು ನವೆಂಬರ್ 1 ರ ನಂತರದ ಅತಿ ಕಡಿಮೆ ಎಂದು ಸರ್ಕಾರ ತಿಳಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights