ನಿರಾಶ್ರಿತರ ಕೇಂದ್ರಗಳಲ್ಲಿ ಓಪನ್ ಥಿಯೇಟರ್ : ಖಾಕಿ ಕಾರ್ಯಕ್ಕೆ ಜೈ ಎಂದ ನೆಟ್ಟಿಗರು

ದೇಶದಲ್ಲಿ ಕೊರೊನಾ ಆತಂಕ ಹೆಚ್ಚಾಗಿದ್ದು ಮಹಾರಾಷ್ಟ್ರದಲ್ಲಿ ನಿರಾಶ್ರಿತರ ಪರಸ್ಥಿತಿ ಹೇಳ ತೀರದಂತಾಗಿದೆ. ನಿರಾಶ್ರಿತರ ಕೇಂದ್ರದಲ್ಲಿರುವ ಜನರ ಆತಂಕ ಕಡಿಮೆ ಮಾಡಲು ಪೊಲೀಸರು ಉತ್ತಮ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ.

ಹೌದು.. ನಾಗ್ಪುರ ಪೊಲೀಸರು ನಿರಾಶ್ರಿತರ ಆತಂಕ ಕಡಿಮೆ ಮಾಡಲು ಹೊಸ ಐಡಿಯಾ ಹುಡಿಕಿ ನಿರಾಶ್ರಿತಿರ ಕೇಂದ್ರಗಳಲ್ಲಿ ಓಪನ್ ಥಿಯೇಟರ್ ವ್ಯವಸ್ಥೆ ಕಲ್ಲಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪೊಲೀಸ್ ಇಲಾಖೆ ಮಾಹಿತಿ  ನೀಡಿದಿದೆ. ನಿರಾಶ್ರಿತರ ಕೇಂದ್ರಗಳಲ್ಲಿ ಓಪನ್ ಥಿಯೇಟರ್ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ  ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಓಪನ್ ಥಿಯೇಟರ್ನಲ್ಲಿ ಮೊದಲ ಸಿನಿಮಾ ಅಜಯ್ ದೇವಗನ್ ಹಾಗೂ ಕಾಜಲ್ ಅಭಿನಯದ ತಾನಾಜಿ ಸಿನಿಮಾ ಪ್ರಸಾರವಾಗಿದೆ. ಅಲ್ಲಿರುವ ಜನ ಸಹ ಮುಖಕ್ಕೆ ಮಾಸ್ಕ್ ಹಾಕಿ ಸಾಮಾಜಿಕ ಅಂತರ ಕಾಪಾಡಿಕೊಂಡು ಸಿನಿಮಾವನ್ನು ಎಂಜಾಯ್ ಮಾಡಿದ್ದಾರೆ.

ಒಂದೇ ಕುಳಿತುಕೊಳ್ಳುವು ಕಷ್ಟ ಸಾಧ್ಯ. ಲಾಕ್ ಡೌನ್ ಮುಗಿಯುವವರೆಗೆ ಜನ ಮನೆ ಬಿಟ್ಟು ಹೊರಬರುವ ಹಾಗೆ. ಹೀಗಾಗಿ ಕೊಂಚಮಟ್ಟಿಗೆ ಜನ ಸಾಮಾಜಿಕ ಅಂತರ ಕಾಯ್ದುಕೊಂಡು ಮುಖಕ್ಕೆ ಮಾಸ್ಕ್ ಹಾಕಿ ಸುಮ್ಮನೆ ಕೂಡಿಸುವುದು ಅಂದರೆ ಕಷ್ಟ ಸಾಧ್ಯ. ಹೀಗಾಗಿ ಇಂತಹದೊಂದು ಐಡಿಯಾ ಮಾಡಿರುವ ಪೊಲೀಸರು ಒಂದೇ ಕಡೆ ಕೂತವರು ಚಲನಚಿತ್ರ ನೋಡುವುದರಿಂದಾಗಿ ಅವರ ಗಮನವನ್ನು ಬೇರೆಡೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಆತಂಕ ಹಾಗೂ ಖಿನ್ನತೆಯಿಂದ ದೂರವಾಗಬಹುದು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ನಿರಾಶ್ರಿತರ ಕೇಂದ್ರಗಳಲ್ಲಿ ಓಪನ್ ಥಿಯೇಟರ್ ವ್ಯವಸ್ಥೆ ಮಾಡಲಾಗಿದೆ ಎಂದು ನಾಗ್ಪುರ ಸಿಟಿ ಪೊಲೀಸ್ ಕಾತೆಯಿಂದ ಟ್ವೀಟ್ ಮಾಡಲಾಗಿದೆ.

ಇಂಹತ ಯೋಚನೆಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಮೆಂಟ್ ಹಾಗೂ ಲೈಕ್ ಮಾಡುವ ಮೂಲಕ ಪ್ರಶಂಸಿದ್ದಾರೆ. ಮಾನಸಿಕ ಖಿನ್ನತೆ ಕುರಿತು ಸಹ ಪೊಲೀಸರು ಯೋಚಿಸಿರುವುದು ತುಂಬಾ ಒಳ್ಳೆಯ ಬೆಳವಣಿಗೆ. ಪೊಲೀಸರಿಂದ ಉತ್ತಮ ಕಾರ್ಯವಾಗಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಮತ್ತೊಬ್ಬರು ಈ ಕರಿತು ಪ್ರತಿಕ್ರಿಯಿಸಿ, ತುಂಬಾ ಒಳ್ಳೆಯ ನಿರ್ಧಾರ ಎಂದು ತಿಳಿಸಿದ್ದಾರೆ. ಹೀಗೆ ನಾಗ್ಪುರ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಏನೇ ಆಗಲಿ ಕೊರೊನಾ ಓಡಿಸೋಕೆ ವೈದ್ಯರು, ಪೊಲೀಸರು, ವಾಲೆಂಟಿಯರ್ಸ್ ಜೀವದ ಹಂಗು ತೊರೆದು ಮಾಡುತ್ತಿರುವ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಲೇಬೇಕು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights