FACT CHECK | ಅಮೆರಿಕಾ ಸಚಿವೆಯೊಬ್ಬರು ಪ್ಯಾಲಿಸ್ತೀನಿಯರನ್ನು ಕೊಲ್ಲಬೇಕು ಎಂದಿದಕ್ಕೆ ಮುಸ್ಲಿಂ ಪತ್ರಕರ್ತ ದಾಳಿ ನಡೆಸಿದನೇ?

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅಮೆರಿಕಾದ ಸಚಿವೆಯೊಬ್ಬರು ಇಸ್ರೇಲ್ ಪರವಾಗಿ, ಪ್ಯಾಲಿಸ್ತೇನಿಯರ ವಿರುದ್ದವಾಗಿ ಹೇಳಿಕೆ ನೀಡಿದಕ್ಕೆ, ಮುಸ್ಲಿಂ ಪತ್ರಕರ್ತನಿಂದ ದಾಳಿ ನಡೆದಿದೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

“ಅಮೇರಿಕಾದ ಮಂತ್ರಿಯೊಬ್ಬಳು ಎಲ್ಲಾ ಫೆಲೆಸ್ತೀನೀಯರನ್ನು ಕೊಲ್ಲಬೇಕು ಎಂದು ಹೇಳಿದ್ದಕ್ಕೆ ಮುಸ್ಲಿಂ ಪತ್ರಕರ್ತನೊಬ್ಬ ಸಿಂಹದ ಹಾಗೆ ಹಾರಿ ಅವಳ ಮೇಲೆ ಹಲ್ಲೆ ಗೈಯುವ ದ್ರಶ್ಯವಿದು ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ವಿಡಿಯೋ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 30 ವರ್ಷ ವಯಸ್ಸಿನ ಆರೋಪಿ, ಲಾಸ್ ವೇಗಾಸ್ ನ್ಯಾಯಾಲಯದಲ್ಲಿ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ಕ್ಲಾರ್ಕ್ ಕೌಂಟಿ ಜಿಲ್ಲಾ ನ್ಯಾಯಾಧೀಶರಾದ ಮೇರಿ ಕೇ ಹೋಲ್ತಸ್ ಅವರ ಮೇಲೆ ದಾಳಿ ನಡೆಸಿದ್ದಾನೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

30 ವರ್ಷದ ಡಿಯೋಬ್ರಾ ರೆಡ್ಡೆನ್ ಎಂಬ ವ್ಯಕ್ತಿ, ನ್ಯಾಯಾಧೀಶ ಮೇರಿ ಕೇ ಹೋಲ್ತಸ್ ಅವರಿದ್ದ ಪೀಠದ ಮೇಲೆ ಜಿಗಿದು ಲಾಸ್ ವೇಗಾಸ್‌ನ ಕ್ಲಾರ್ಕ್ ಕೌಂಟಿ ನ್ಯಾಯಾಲಯದಲ್ಲಿ ದಾಳಿ ಮಾಡಿದ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ.

 

ಬ್ಯಾಟರಿ ಮೂಲಕ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ವಿಧಿಸುವ ಸಂದರ್ಭದಲ್ಲಿ, ತೀಪು ನೀಡುತಿದ್ದ ನ್ಯಾಯಾದೀಶರ ಮೇಲೆ ಆರೋಪಿ ಡಿಯೋಬ್ರಾ ರೆಡ್ಡೆನ್ ದಾಳಿ ನಡೆಸಿದ್ದಾನೆ.

ನ್ಯಾಯಾಧೀಶರಾದ ಹೊಲ್ತಸ್ ಕುಳಿತಿದ್ದ ಪೀಠದ ಮೇಲೆ ಹಾರಿ  ಆಕ್ರಮಣವನ್ನು ಮಾಡಿದ್ದಾನೆ. ಈ ಅನೀರೀಕ್ಷಿತ ಘಟನೆಯಿಂದ ವಿಚಲಿತರಾದ ಕೋರ್ಟ್‌ನ ಸಿಬ್ಬಂದಿ ತಕ್ಕಷಣಕ್ಕೆ ನ್ಯಾಯಾದೀಶರ ನೆರವಿಗೆ ದಾವಿಸಿ, ಹೆಚ್ಚಿನ ಹಾನಿ ಆಗದಂತೆ ಕಾಪಾಡಿದ್ದು,  ರೆಡ್ಡೆನ್‌ನನ್ನು ನಿಯಂತ್ರಿಸಲು ಹೋದ ಮಾರ್ಷಲ್ ಗೆ ಸಣ್ನ ಪುಟ್ಟ ಗಾಯಗಳಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿತ್ತು ಎಂದು ವರದಿಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬ ನ್ಯಾಯಾಧೀಶರ ಮೇಲೆ ನಡೆಸಿದ ದಾಳಿಯನ್ನು, ಅಮೇರಿಕಾದ ಸಚಿವೆಯೊಬ್ಬರು ಎಲ್ಲಾ ಫ್ಯಾಲೆಸ್ತೀನೀಯರನ್ನು ಕೊಲ್ಲಬೇಕು ಎಂದು ಹೇಳಿದ್ದಕ್ಕೆ  ಮುಸ್ಲಿಂ ಪತ್ರಕರ್ತನೊಬ್ಬ ಸಿಂಹದ ಹಾಗೆ ಹಾರಿ ಅವರ ಮೇಲೆ ದಾಳಿ ನಡೆಸಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರಂಜಾನ್ ಆಚರಣೆಗಾಗಿ ಸರ್ಕಾರಿ ಶಾಲೆಯ ಸಮಯವನ್ನೇ ಬದಲಾವಣೆ ಮಾಡಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights