Fact Check: ಬಿಜೆಪಿ ವಿರುದ್ಧ ಪ್ರತಿಭಟಿಸುತ್ತಿರುವ ಈ ಜನಸಮೂಹ ಬಿಹಾರ ಚುನಾವಣಾ ಪ್ರಚಾರದಿಂದ ಬಂದವರಲ್ಲ…

ಬಿಗಿ ಭದ್ರತೆ ಮತ್ತು ಕೋವಿಡ್ -19 ಮಾರ್ಗಸೂಚಿಗಳ ಮಧ್ಯೆ ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಬುಧವಾರ (ಅಕ್ಟೋಬರ್ 28) ಮುಕ್ತಾಯಗೊಂಡಿದೆ.

ಎರಡನೇ ಹಂತದ ಬಿಹಾರ ಚುನಾವಣೆಯ ಪ್ರಚಾರ ಆರಂಭಗೊಂಡಿದೆ. ಈ ವೇಳೆ ದೊಡ್ಡ ಜನಸಮೂಹ ಬಿಜೆಪಿ ವಿರೋಧಿ ಘೋಷಣೆಗಳನ್ನು ಜಪಿಸುತ್ತಿರುವುದನ್ನು ತೋರಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೀಡಿಯೊ ಬಿಹಾರದಲ್ಲಿ ನಡೆದ ಚುನಾವಣಾ ಪ್ರಚಾರದಿಂದ ಜನರು ಬಲಪಂಥೀಯ ಗುಂಪನ್ನು ಬೆನ್ನಟ್ಟುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ವೀಡಿಯೊದಲ್ಲಿರುವ ಜನಸಮೂಹ ಕಪ್ಪು ಧ್ವಜಗಳೊಂದಿಗೆ ರಸ್ತೆಯನ್ನು ನಿರ್ಬಂಧಿಸುವುದನ್ನು ಕಾಣಬಹುದು ಮತ್ತು ಪೊಲೀಸರು ಜನಸಮೂಹವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ.

ಈ ವೀಡಿಯೊದ ತಮಿಳು ಭಾಷೆಯಲ್ಲಿನ ಶೀರ್ಷಿಕೆ ಹೀಗಿದೆ, “ಬಿಹಾರ ಜನರು ಬಲಪಂಥೀಯ ಗುಂಪುಗಳನ್ನು ಓಡಿಸುತ್ತಿದ್ದಾರೆ” ಎಂದು ಬರೆಯಲಾಗಿದೆ.

ಇಂಡಿಯಾ ಟುಡೆ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಈ ವಿಚಾರ ಸುಳ್ಳು ಎಂದು ಕಂಡುಹಿಡಿದಿದೆ. ವೀಡಿಯೊ ಬಿಹಾರದಿಂದಲ್ಲ, ಆದರೆ ಹರಿಯಾಣದಿಂದ ರೈತರು ಬಿಜೆಪಿಯ ಕೃಷಿ ಪರ ಬಿಲ್ ಟ್ರಾಕ್ಟರ್ ರ್ಯಾಲಿಯನ್ನು ತಡೆದಿದ್ದದ್ದು. ವೈರಲ್ ವೀಡಿಯೊವನ್ನು ಹತ್ತಿರದಿಂದ ನೋಡಿದರೆ ವೀಡಿಯೊದಲ್ಲಿ ಕಂಡುಬರುವ ಬಿಳಿ ಬಣ್ಣದ ಪೊಲೀಸ್ ಜೀಪಿನ ಮೇಲೆ ಹಿಂದಿಯಲ್ಲಿ “ಹರಿಯಾಣ ಪೊಲೀಸ್” ಎಂದು ಬರೆಯಲಾಗಿದೆ.

ಟ್ರಿಬ್ಯೂನ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವಿಭಿನ್ನ ಕೋನದಿಂದ ಇದೇ ರೀತಿಯ ವೀಡಿಯೊಗಳಿವೆ.

ಅಕ್ಟೋಬರ್ 14 ರಂದು ಅಪ್‌ಲೋಡ್ ಮಾಡಲಾದ ವೀಡಿಯೊಗೆ ಶೀರ್ಷಿಕೆ ಹೀಗಿದೆ, “ರೈತರು ಅಂಬಾಲಾದಲ್ಲಿ ಬಿಜೆಪಿಯ ರ್ಯಾಲಿಯನ್ನು ನಿರ್ಬಂಧಿಸಿ, ಕಪ್ಪು ಧ್ವಜಗಳನ್ನು ತೋರಿಸುತ್ತಿದ್ದಾರೆ”

ವೀಡಿಯೊದ ವಿವರಣೆಯು ಹೀಗಿದೆ, “ನಾರಿಂಘರ್ ದ ಸೈನಿ ಧರ್ಮಶಾಲಾದಿಂದ 150 ಟ್ರಾಕ್ಟರುಗಳೊಂದಿಗೆ ಬಿಜೆಪಿ ರ್ಯಾಲಿಯನ್ನು ಪ್ರಾರಂಭಿಸಿತು. ಈ ವೇಳೆ ಅಂಬಾಲ ಸಂಸದ ರಟ್ಟನ್ ಲಾಲ್ ಕಟಾರಿಯಾ, ಕುರುಕ್ಷೇತ್ರ ಸಂಸದ ನಯಾಬ್ ಸೈನಿ ಮತ್ತು ಅಂಬಾಲ ಬಿಜೆಪಿ ಮುಖ್ಯಸ್ಥ ರಾಜೇಶ್ ಬಟೌರಾ ಸೇರಿದಂತೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರು ನಡೆಸಿದ ಟ್ರ್ಯಾಕ್ಟರ್ ರ್ಯಾಲಿ, ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ನಾರಿಂಘರ್ ದ ರೈತರಿಂದ ಭಾರಿ ಪ್ರತಿಭಟನೆ ಎದುರಿಸಿತು. ”

ಅಕ್ಟೋಬರ್ 19 ರಂದು ಪ್ರಕಟವಾದ ಲೇಖನದಲ್ಲಿ ಟೈಮ್ಸ್ ಆಫ್ ಇಂಡಿಯಾ ನಡೆಸಿದ ಅದೇ ರ್ಯಾಲಿಯ ಇದೇ ಚಿತ್ರವಿದೆ. ವರದಿಯ ಪ್ರಕಾರ, ಅಂಬಾಲಾ ಪೊಲೀಸರು 314 ರೈತರ ವಿರುದ್ಧ ಗಲಭೆ ಮತ್ತು ರಾಷ್ಟ್ರೀಯ ಹೆದ್ದಾರಿಯನ್ನು ತಡೆದ ಪ್ರಕರಣ ದಾಖಲಿಸಿದ್ದಾರೆ. ಹರಿಯಾಣದಲ್ಲಿ ಬಿಜೆಪಿಯ ಇತ್ತೀಚಿನ ಟ್ರಾಕ್ಟರ್ ರ್ಯಾಲಿಗಳಲ್ಲಿ ನಾವು ಅನೇಕ ಮಾಧ್ಯಮ ವರದಿಗಳಿವೆ.

ವರದಿಗಳ ಪ್ರಕಾರ, ಇತ್ತೀಚೆಗೆ ಜಾರಿಗೆ ಬಂದ ಕೃಷಿ ಕಾನೂನುಗಳ ಪ್ರಯೋಜನಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಬಿಜೆಪಿ ಅಕ್ಟೋಬರ್‌ನಲ್ಲಿ ಹರಿಯಾಣದಲ್ಲಿ ಟ್ರ್ಯಾಕ್ಟರ್ ರ್ಯಾಲಿಗಳನ್ನು ನಡೆಸಿತು. ಕೃಷಿ ರ್ಯಾಲಿಗಳ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಹಲವಾರು ರ್ಯಾಲಿಗಳಲ್ಲಿ ರೈತರು ಕಪ್ಪು ಧ್ವಜಗಳನ್ನು ತೋರಿಸಿದರು.

ಹರಿಯಾಣದ ಘಟನೆಯೆಂದು ಅನೇಕ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಹಂಚಿಕೊಂಡಿರುವ ಅದೇ ವೀಡಿಯೊವನ್ನು ನಾವು ಕಾಣಬಹುದು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights