ಶಾಖೋತ್ಪನ್ನ ಸ್ಥಾವರದ ಧೂಳಿನಿಂದ ಬದುಕು ನರಕ : ಜನರು ಅನಾರೋಗ್ಯ!

ರಾಜ್ಯಕ್ಕೆ ಬೆಳಕು ನೀಡುವ ಸ್ಥಾವರದ ಪಕ್ಕದಲ್ಲಿ ವಾಸವಾಗಿರುವವರ ಬದುಕು ನರಕವಾಗಿದೆ, ಆರೋಗ್ಯ ಸಮಸ್ಯೆ, ಧೂಳಿನಿಂದಾಗಿ ಜನರು ತತ್ತರಿಸಿದ್ದಾರೆ, ಒಂದು ಕಡೆ ವಿದ್ಯುತ್ ನೀಡುತ್ತೇವೆ ಎಂಬ ಹೆಮ್ಮೆ ಇದ್ದರೆ ಇನ್ನೊಂದು ಆರೋಗ್ಯ ಸಮಸ್ಯೆಯಿಂದ ನಾವೇಕಾದರೂ ಇಲ್ಲಿದ್ದೇವೆ ಎನ್ನುತ್ತಿದ್ದಾರೆ.

ರಾಜ್ಯಕ್ಕೆ ಶೇ ೪೦ ಬೆಳಕು ನೀಡುವ ಆರ್ ಟಿಪಿಎಸ್ ಸುತ್ತಲಿನ ಗ್ರಾಮಸ್ಥರ ಭವಣೆ, ರಾಯಚೂರು ಶಾಖೋತ್ಪನ್ನ ಸ್ಥಾವರದಿಂದ ಸುತ್ತ ಮುತ್ತಲಿ ಗ್ರಾಮಗಳಾದ ದೇವಸಗೂರು, ಶಕ್ತಿನಗರ, ಯದ್ಲಾಪುರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಆರೋಗ್ಯ ಸಮಸ್ಯೆ ಇದೆ, ಹಲವು ಕಡೆ ಅಸ್ತಮಾ, ಕೆಲವು ಮಕ್ಕಳಲ್ಲಿ ಬೆಳವಣಿಗೆ ಇಲ್ಲದೆ ಇರೋದು, ಕ್ಯಾನ್ಸರ್ ನಂಥ ಕಾಯಿಲೆಗಳು ಕಾಡುತ್ತಿವೆ.

ಇದಕ್ಕೆಲ್ಲ ಕಾರಣ ಆರ್ ಟಿಪಿಎಸ್ ನಿಂದ ಹೊರ ಬರುವ ಹಾರು ಬೂದಿ ಹಾಗು ಬೂದಿ ಹೊಂಡದಿಂದ ಎಂದು ಜನರು ಆರೋಪಿಸುತ್ತಿದ್ದಾರೆ.

ಆರ್ ಟಿಪಿಎಸ್ ನಿಂದ ವಾರ್ಷಿಕ ೨.೩೨ ಮೇಟ್ರಿಕ್ ಟನ್ ಹಾರು ಬೂದಿ ಉತ್ಪಾದನೆಯಾಗುತ್ತಿದೆ, ಈ ಬೂದಿಯು ಸಿಮೆಂಟ್, ಇಟ್ಟಂಗಿ ತಯಾರಿಕೆಗೆ ಬಳಕೆಯಾಗುತ್ತಿದೆ, ಈ ಮಧ್ಯೆ ಹಸಿ ಬೂದಿಯು ಹೊಂಡದಲ್ಲಿ ಸಂಗ್ರಹವಾಗುತ್ತಿತ್ತು,, ಈ ಬೂದಿಯನ್ನು ಬಳಕೆ ಮಾಡುತ್ತಿದ್ದಿಲ್ಲ ಈ ಮಧ್ಯೆ ಕಳೆದ ತಿಂಗಳನಿಂದ ಹೊಂಡದಲ್ಲಿರುವ ಬೂದಿಯನ್ನು ಸಹ ಬಳಕೆ ಮಾಡಲು ಅವಕಾಶ ನೀಡಿದ್ದರಿಂದ ನಿತ್ಯ ಸಾವಿರಾರು ಲಾರಿಗಳು ತಿರುಗಾಡುತ್ತಿವೆ ಲಾರಿ ತಿರುಗಾಟದ ಧೂಳು, ಮೊದಲೇ ಹಾರುಬೂದಿಯಿಂದ ತತ್ತರಿಸಿದ್ದವರು ಈಗ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ‌.

ಜನರ ಈ‌ ವಾದವನ್ನು ಸಂಸದ ರಾಜಾ ಅಮರೇಶ್ವರ ನಾಯಕ ಸಹ ವಾದಿಸುತ್ತಿದ್ದು, ಈ ಕುರಿತು ಲೋಕಸಭೆಯಲ್ಲಿ ಇತ್ತೀಚಿಗೆ ಗಮನ ಸೆಳೆಯಲು ಯತ್ನಿಸಿದರು. ಕೇಂದ್ರ ಸರಕಾರ ಈ ಬಗ್ಗೆ ಪರಿಶೀಲಿಸುವ ಭರವಸೆ ನೀಡಿದೆ. ಈ ಮಧ್ಯೆ ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ ಸುರೇಂದ್ರಬಾಬು ಹಾರುಬೂದಿಯಿಂದ ಕ್ಷಯ ರೋಗ ಬರುತ್ತಿಲ್ಲ ಆದರೆ ಅಸ್ತಮಾ, ಶ್ವಾಸಕೋಶ ಸಂಬಂಧಿ‌ ಕಾಯಿಲೆಗಳು ಬರುತ್ತಿವೆ, ಜನರಲ್ಲಿ ಆರ್ ಟಿಪಿಎಸ್ ಧೂಳಿನಿಂದ ಕ್ಷಯ ರೋಗ ಬರುತ್ತದೆ ಎಂಬುವದನ್ನು ಅಲ್ಲಗಳೆದರು.

ಈ ಬಗ್ಗೆ ಇತ್ತೀಚಿಗೆ ಆರ್ ಟಿಪಿಎಸ್ ಗೆ ಭೇಟಿ ನೀಡಿದ ಕೆಪಿಸಿ ವ್ಯವಸ್ಥಾಪಕ ನಿರ್ದೇಶಕರನ್ನು ಕೇಳಿದರೆ ಆರ್ ಟಿಪಿಎಸ್ ಧೂಳಿನಿಂದ ಆರೋಗ್ಯ ಮೇಲೆ ಆಗುವ ದುಷ್ಪರಿಣಾಮ ದ ಬಗ್ಗೆ ವರದಿ ಏನು ಎಂಬ ಬಗ್ಗೆ ನೋಡಬೇಕು, ಆದರೂ ಪರಿಸರ ಹಾನಿಯಾಗದಂತೆ ಹಾರುಬೂದಿಯನ್ನು ನಿಯಂತ್ರಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮೊದಲೇ ಬಿಸಿಲು ನಾಡಾಗಿರುವ ರಾಯಚೂರಿನಲ್ಲಿ ಶಾಖೋತ್ಪನ್ನ ಸ್ಥಾವರದಿಂದ ಇನ್ನಷ್ಟು ಶಾಖ ಹೆಚ್ಚಾಗಿದೆ ಎಂಬ ಅಭಿಪ್ರಾಯವಿದೆ, ಶಾಖೋತ್ಪನ್ನ ಸ್ಥಾವರವನ್ನು ಬಂದ್ ಮಾಡಲು ಸಾಧ್ಯವಿಲ್ಲ ಆದರೆ ಇದರಿಂದ ಆಗುವ ಆರೋಗ್ಯ ಸಮಸ್ಯೆ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights