ಐಪಿಎಲ್‌ 2ನೇ ಇನ್ನಿಂಗ್ಸ್‌ ಆರಂಭ; ಭಾನುವಾರ ಮುಂಬೈ ಮತ್ತು ಚೆನೈ ತಂಡಗಳ ನಡುವೆ ಹಣಾಹಣಿ!

ಕೊರೊನಾ 2ನೇ ಅಲೆಯ ಕಾರಣದಿಂದಾಗಿ ಅರ್ಧಕ್ಕೆ ನಿಂತುಹೋಗಿದ್ದ ಐಪಿಎಲ್‌-2021ರ ಇದೀಗ ಮತ್ತೆ ಆರಂಭವಾಗುತ್ತಿದೆ ಮೇ ತಿಂಗಳ ಆರಂಭದಲ್ಲಿ ಐಪಿಎಲ್‌ ಪಂದ್ಯಗಳು ಅರ್ಧಕ್ಕೆ ನಿಂತು ಹೋಗಿದ್ದವು. ನಾಲ್ಕು ತಿಂಗಳ ನಂತರ ಈಗ ಯುಎಇನಲ್ಲಿ ಮತ್ತೆ ಐಪಿಎಲ್‌ ಟೂರ್ನಿ ಮುಂದುವರೆಯುತ್ತಿದ್ದು, ಇಂದು (ಭಾನುವಾರ) ಮುಂಬೈ ಮತ್ತು ಚೆನೈ ತಂಡಗಳ ನಡುವೆ ದುಬೈನಲ್ಲಿ ಸಂಜೆ 7:30ಕ್ಕೆ ಪಂದ್ಯ ನಡೆಯಲಿದೆ.

ಅರ್ಧಕ್ಕೆ ನಿಂತಿದ್ದ ಪಂದ್ಯಗಳ ಪೈಕಿ ಇನ್ನೂ 31 ಪಂದ್ಯಗಳು ನಡೆಯಬೇಕಿದೆ. ಈ ಪಂದ್ಯಗಳು ದುಬೈ, ಶಾರ್ಜಾ, ಅಬುಧಾಬಿಯಲ್ಲಿ ನಡೆಯಲಿದ್ದು, ಫೈನಲ್‌ ಪಂದ್ಯ ಅಕ್ಟೋಬರ್ 15 ರಂದು ನಡೆಯಲಿದೆ.

ಮೇ 2ರಂದು ಅಹ್ಮದಾಬಾದ್‌ನಲ್ಲಿ ಪಂಜಾಬ್‌-ಡೆಲ್ಲಿ ನಡುವಿನ ಮುಖಾಮುಖೀ ಬಳಿಕ ಕೊರೊನಾ ಕಾರಣದಿಂದಾಗಿ ಪಂದ್ಯಾವಳಿಯನ್ನು ನಿಲ್ಲಿಸಲಾಗಿತ್ತು. ಈಗ ಕೊರೊನಾ ಅಲೆ ಇಳಿಮುಖ ಕಂಡಿರುವ ಹಿನ್ನೆಲೆಯಲ್ಲಿ ಯುಎಇಯಲ್ಲಿ ಪಂದ್ಯಗಳು ನಡೆಯುತ್ತಿವೆ. ಮೊದಲಿದ್ದ ವೇಳಾಪಟ್ಟಿಯನ್ನು ಬದಲಿಸಲಾಗಿದೆ. ಇಲ್ಲಿನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ಎದುರಾಗಲಿವೆ.

ಕೆಲವು ಸ್ಟಾರ್‌ ವಿದೇಶಿ ಆಟಗಾರರು ಹಿಂದೆ ಸರಿದರೂ ಕೂಟದ ಆಕರ್ಷಣೆಯೇನೂ ಕಡಿಮೆ ಆಗದೆಂಬುದೊಂದು ಲೆಕ್ಕಾಚಾರ. ಡೇವಿಡ್‌ ಮಲಾನ್‌, ಕ್ರಿಸ್‌ ವೋಕ್ಸ್‌, ಜಾನಿ ಬೇರ್‌ಸ್ಟೊ, ಜಾಸ್‌ ಬಟ್ಲರ್‌, ಜೋಫ್ರ ಆರ್ಚರ್‌, ರಿಲೀ ಮೆರೆಡಿತ್‌, ಜೇ ರಿಚರ್ಡ್‌ಸನ್‌, ಪ್ಯಾಟ್‌ ಕಮಿನ್ಸ್‌ ಮೊದಲಾದ ವಿದೇಶಿ ಆಟಗಾರರು ಐಪಿಎಲ್‌ನಿಂದ ಹೊರಗುಳಿದ್ದಾರೆ.

2019ರ ಬಳಿಕ ಪ್ರೇಕ್ಷಕರಿಗೆ ಬಾಗಿಲು ತೆರೆಯುವ ಕಾರಣಕ್ಕಾಗಿಯೂ ಯುಎಇ ಆವೃತ್ತಿಯ ಐಪಿಎಲ್‌ ಆಕರ್ಷಣೆ ಹೆಚ್ಚಿದೆ. ಸ್ಟೇಡಿಯಂ ಸಾಮರ್ಥ್ಯದ ಶೇ. 50 ವೀಕ್ಷಕರಿಗೆ ಅವಕಾಶ ಕಲ್ಪಿಸಲಾಗುವುದು. ಇವರು ಎರಡೂ ಡೋಸ್‌ ಕೋವಿಡ್‌ ಲಸಿಕೆ ಪಡೆದಿರಬೇಕು. ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲೇ ಖರೀದಿಸಬೇಕೆಂದು ಸೂಚಿಸಲಾಗಿದೆ.

ಭಾರತದಲ್ಲಿ ಆಡಲಾದ 29 ಪಂದ್ಯಗಳಲ್ಲಿ 2020ರ ರನ್ನರ್ ಅಪ್‌ ಡೆಲ್ಲಿ ಕ್ಯಾಪಿಟಲ್ಸ್‌ 12 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ಆಡಿದ 8 ಪಂದ್ಯಗಳಲ್ಲಿ ಆರನ್ನು ಗೆದ್ದಿದೆ.

ಚೆನ್ನೈ ಮತ್ತು ಆರ್‌ಸಿಬಿ ತಲಾ 10 ಅಂಕ ಗಳಿಸಿವೆ. ಆದರೆ ರನ್‌ರೇಟ್‌ನಲ್ಲಿ ಮುಂದಿರುವ ಧೋನಿ ಪಡೆ ದ್ವಿತೀಯ ಸ್ಥಾನದಲ್ಲಿದೆ. ಕೊಹ್ಲಿ ಟೀಮ್‌ಗೆ 3ನೇ ಸ್ಥಾನ. ಭಾನುವಾರದ ಮೊದಲ ಪಂದ್ಯವನ್ನು ಗೆದ್ದರೆ ಚೆನ್ನೈ ಅಗ್ರಸ್ಥಾನಕ್ಕೆ ಜಿಗಿಯಲಿದೆ.

ಇದನ್ನೂ ಓದಿ: ಭಾರತ v/s ಆಸ್ಟ್ರೇಲಿಯಾ: ಮೊದಲ ಟೆಸ್ಟ್‌ನಲ್ಲೇ ಹೀನಾಯ ಸೋಲುಂಡ ಭಾರತ ತಂಡ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights