ಫ್ಯಾಕ್ಟ್‌ಚೆಕ್: ಸಂಸ್ಕೃತ ಭಾಷೆಯ ಆಧಾರದ ಮೇಲೆ ಸೂಪರ್ ಕಂಪ್ಯೂಟರ್ ರಚನೆ ಮಾಡುವ ಬಗ್ಗೆ NASA ವಿಜ್ಞಾನಿಗಳು ಹೇಳಿದ್ದಾರೆಯೇ?

ಅಮೇರಿಕದವರು 6ನೇ ಮತ್ತು 7ನೇ ಆವೃತ್ತಿಯ ಸೂಪರ್ ಕಂಪ್ಯೂಟರ್‌ಗಳನ್ನು ಸಂಸ್ಕೃತ ಭಾಷೆಯ ಆಧಾರದ ಮೇಲೆ ರಚನೆಮಾಡಲಾಗುತ್ತದೆ ಎಂಬ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ವೈರಲ್ ಆಗುತ್ತಿದೆ.  6ನೇ ಆವೃತ್ತಿಯ ಕಂಪ್ಯೂಟರನ್ನು 2025ರ ವೇಳೆಗೆ ಮತ್ತು 7ನೇ ಆವೃತ್ತಿಯ ಕಂಪ್ಯೂಟರನ್ನು 2034ರ ವೇಳೆಗೆ ಬಿಡುಗಡೆಗೊಳಸಲಿದ್ದಾರೆ ಎಂದು ಪ್ರತಿಪಾದಿಸಲಾಗಿದೆ. ಇದು ನಿಜವೇ ಪರಿಶೀಲಿಸೋಣ.
ಅಮೇರಿಕವು 6ನೇ ಮತ್ತು 7ನೇ ಅವೃತ್ತಿಯ ಸೂಪರ್ ಕಂಪ್ಯೂಟರ್‌ಗಳನ್ನು ಸಂಸ್ಕೃತ ಭಾಷೆಯ ಆಧಾರದ ಮೇಲೆ ಬಿಡುಗಡೆಮಾಡಲಾಗುತ್ತದೆ ಎಂದು NASA ವಿಜ್ಞಾನಿಗಳು ವರದಿ ಮಾಡಿದ್ದಾರೆ ಎಂಬ ಪೋಸ್ಟ್ 2016ರಿಂದಲೇ ವೈರಲ್ ಆಗುತ್ತಿದೆ. ಅವುಗಳನ್ನು  ಇಲ್ಲಿ ಮತ್ತು ಇಲ್ಲಿ ನೋಡಬಹುದು. ನಾವು NASA ಅವರ ಅಧಿಕೃತ ವೆಬ್ ಸೈಟ್ ಪರಿಶೀಲಿಸಿದಾಗ ಮೇಲಿನ ಪ್ರತಿಪಾದನೆ ರೀತಿಯ ಯಾವುದೇ ರೀತಿಯ ಮಾಹಿತಿಗಳು ನಮಗೆ ಸಿಕ್ಕಿಲ್ಲ. NASA ಅವರ ಸೂಪರ್ ಕಂಪ್ಯೂಟರ್ ವಿಭಾಗದ ವೈಬ್ ಸೈಟನಲ್ಲಿ ಕೂಡ ಈ ಸಂಸ್ಕೃತ ಭಾಷೆ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ನಾಸಾ ವರದಿಯ ಮಾಡಿರುವ ಬಗ್ಗೆ ಯಾವುದೇ ಅಧಿಕೃತ ಪತ್ರಿಕಾ ವರದಿಗಳು ಕಂಡುಬಂದಿಲ್ಲ. ಸಂಸ್ಕೃತ ಭಾಷೆ ಮತ್ತು NASA ಗೆ ಸಂಬಂಧಿಸಿದಂತೆ, 1985 ರಲ್ಲಿ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ ಪುಸ್ತಕದಲ್ಲಿ ರಿಕ್ ಬ್ರಿಗ್ಸ್ ಅವರು “Knowledge Representation in Sanskrit and Artificial Intelligence (ಜ್ಞಾನದ ದೃಷ್ಟಿಯಿಂದ ಸಂಸ್ಕೃತ ಮತ್ತು ಕೃತಕ ಬುದ್ದಿಮತ್ತೆ” ಎಂಬ ಬರಹ ಬರೆದಿದ್ದಾರೆ). ಅದರಲ್ಲಿ 2025 ಮತ್ತು 2034ರ ವೇಳೆಗೆ ಸಂಸ್ಕೃತ ಭಾಷೆಯ ಆಧಾರದ ಮೇಲೆ  6ನೇ ಮತ್ತು 7ನೇ ಅವೃತ್ತಿಯ ಸೂಪರ್ ಕಂಪ್ಯೂಟರ್ ತಯಾರುಮಾಡುವ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಆ ಬರಹದಲ್ಲಿ ಸಂಸ್ಕೃತದಂತಹ 1000 ವರ್ಷಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಭಾಷೆಗಳನ್ನು ಕೃತಕ ಬುದ್ದಿಮತ್ತೆ ಸಂಬಂಧಿತ ಕಂಪ್ಯೂಟರ್ ಪ್ರಕ್ರಿಯೆಯಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಮಾತ್ರ ಬರೆಯಲಾಗಿದೆ. ಕೇಂದ್ರ ಗೃಹ ಸಚಿವ ರಾಜನಾಥ್  ಸಿಂಗ್  2015 ರಲ್ಲಿ ಸಂಸ್ಕೃತ ಭಾಷೆಯ ಉಪಯುಕ್ತತೆ ಕುರಿತು ಮಾತನಾಡುತ್ತ, “NASA ಅವರು ಸೂಪರ್ ಕಂಪ್ಯೂಟರ್ ನಿರ್ಮಿಸುತ್ತಿದ್ದಾರೆ, ಅದಕ್ಕೆ ಸಂಸ್ಕೃತ ಭಾಷೆಯು ಅತ್ಯಂತ ಸೂಕ್ತವಾಗಿದೆ ಎಂದಿದ್ದರು. ಆ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹದು. ಆದರೆ 2025 ಮತ್ತು 2034 ರ ವೇಳೆಗೆ ಸಂಸ್ಕೃತ ಭಾಷೆಯ ಆಧಾರದ ಮೇಲೆ 6ನೇ ಮತ್ತು 7ನೇ ಅವೃತ್ತಿಯ ಸೂಪರ್‌ ಕಂಪ್ಯೂಟರ್‌ಗಳನ್ನು ರಚಿಸುವ ಯಾವುದೇ ಯೋಜನೆಯ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ಇದಕ್ಕೂ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ.
IIT  ಪ್ರಾಧ್ಯಾಪರಾದ  ಡಾ. ಪವನ್ ಗೋಯಲ್‌ರವರು ನಾಸಾ ಲ್ಯಾಬ್‌ಗಳಲ್ಲಿ ರಹಸ್ಯವಾಗಿ ಸಂಸ್ಕೃತ ಕಲಿಸಲಾಗುತ್ತಿದೆ ಎಂಬ ಪ್ರತಿಪಾದನೆಯನ್ನು ನಿರಾಕರಿಸಿದ್ದಾರೆ. ಅದೆಲ್ಲವೂ ಕಟ್ಟು ಕತೆ ಎಂದು ಟೀಕಿಸಿದ್ದಾರೆ. ಸ್ವರಾಜ್ಯ ಮ್ಯಾಗಜಿನ್‌ನವರು ಅವರ ಬಳಿ ಕೃತಕ ಬುದ್ದಿಮತ್ತೆಯಲ್ಲಿ ಸಂಸ್ಕೃತದ ಬಳಕೆ ಕುರಿತು ರಿಕ್ ಬ್ರಿಗ್ಸ್‌ ವರದಿಯ ಬಗ್ಗೆ ಕೇಳಿದಾಗ “ಅದು ಬಹಳ ಆಸಕ್ತಿದಾಯಕ ಲೇಖನವಾಗಿತ್ತು, ಇದು ಭಾರತೀಯ ವ್ಯಾಕರಣ ಸಂಪ್ರದಾಯದ ಪರಿಕಲ್ಪನೆಗಳನ್ನು ಕೃತಕ ಬುದ್ಧಿವಂತಿಕೆ ಸಂಶೋಧನೆಯಲ್ಲಿ ಜ್ಞಾನದ ಪ್ರಾತಿನಿಧ್ಯಕ್ಕಾಗಿ ಹೇಗೆ ಬಳಸಬಹುದು ಎಂಬುದರ ಬಗ್ಗೆ ತಿಳಿಸಲಾಗಿದೆ. ಲೇಖನವು ಕಠಿಣ ಮತ್ತು ಆಸಕ್ತಿದಾಯಕವಾಗಿದೆ. ಆದರೆ ಸೋಷಿಯಲ್  ಮೀಡಿಯಾದಲ್ಲಿ ತಡೆಯಾಗಲಷ್ಟು ತಪ್ಪು ಮಾಹಿತಿ ಹರಡಿದೆ. ’’ಸಂಸ್ಕೃತವು ಕಂಪ್ಯೂಟರ್ ಪ್ರೋಗ್ರಾಮಿಂಗ್‌ಗೆ ಅಂತಿಮ ಭಾಷೆಯಾಗಿದೆ, ಇದನ್ನು  NASA ಪ್ರಯೋಗಾಲಯಗಳಲ್ಲಿ ಅಧ್ಯಯನ ಮಾಡಲಾಗಿದೆ ಎಂದು ಹೇಳುವಷ್ಟರ ಮಟ್ಟಿಗೆ ಸುಳ್ಳು ಹರಡಿದೆ.  ಇಂಗ್ಲಿಷ್ ಅಥವಾ ಹಿಂದಿಯಂತಹ ಯಾವುದೇ ನೈಸರ್ಗಿಕ ಭಾಷೆಯಂತೆ ಸಂಸ್ಕೃತವನ್ನು ಪ್ರೋಗ್ರಾಮಿಂಗ್ ಭಾಷೆಯಾಗಿ ನೇರವಾಗಿ ಬಳಸಲಾಗುವುದಿಲ್ಲ. ಈ ವದಂತಿಗಳು ಪ್ರಾಚೀನ ವಿಜ್ಞಾನ ವ್ಯಾಕರಣಕ್ಕೆ  ಹಾನಿಕಾರಕವಾಗಿದೆ” ಎಂದಿದ್ದಾರೆ.  ಡಾ ಪವನ್ ಗೋಯಲ್ ಅವರು ಕಂಪ್ಯೂಟರ್ ವಿಜ್ಞಾನಿಯಾಗಿದ್ದು, ಅವರು ಸ್ವಯಂಚಾಲಿತ ಕಂಪ್ಯೂಟೇಶನಲ್ ಪ್ರೊಸೆಸಿಂಗ್ ತಂತ್ರಗಳ ಸಹಾಯದಿಂದ ಸಂಸ್ಕೃತ ಪಠ್ಯಗಳನ್ನು ಹೆಚ್ಚು ಪ್ರವೇಶಿಸುವಂತೆ ಮಾಡಲು ಕೆಲಸ ಮಾಡುತ್ತಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, 2025 ಮತ್ತು 2034 ರ ವೇಳೆಗೆ ಸಂಸ್ಕೃತ ಭಾಷೆಯನ್ನು ಆಧರಿಸಿ 6ನೇ ಮತ್ತು 7ನೇ ತಲೆಮಾರಿನ ಸೂಪರ್‌ ಕಂಪ್ಯೂಟರ್‌ಗಳನ್ನು ರಚಿಸುವ ಅಮೇರಿಕದ ಯೋಜನೆಯು NASA ವಿಜ್ಞಾನಿಗಳ ವರದಿ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights