2 ದಲಿತ ಬಾಲಕಿಯರ ಸಾವು ಪ್ರಕರಣ : ಪೋಷಕರಿಂದ ಕೊಲೆ ಆರೋಪ- ಎಫ್‌ಐಆರ್ ದಾಖಲು!

ಉತ್ತರ ಪ್ರದೇಶದ ಉನ್ನಾವೊದಲ್ಲಿ ಹೊಲವೊಂದರಲ್ಲಿ ಬುಧವಾರ ಶವವಾಗಿ ಪತ್ತೆಯಾದ ಇಬ್ಬರು ದಲಿತ ಬಾಲಕಿಯರ ಕುಟುಂಬ ಸದಸ್ಯರ ದೂರಿನ ಆಧಾರದ ಮೇಲೆ ಯುಪಿ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.

ಅಶೋಹಾದ ಬಾಬುಹರಾ ಗ್ರಾಮದ ಹೊಲವೊಂದರಲ್ಲಿ ಮೂವರು ಅಪ್ರಾಪ್ತ ದಲಿತ ಬಾಲಕಿಯರು ಬುಧವಾರ ಪತ್ತೆಯಾಗಿದ್ದಾರೆ. ಇವರಲ್ಲಿ ಇಬ್ಬರು ಮೃತಪಟ್ಟರೆ, ಮೂರನೆಯವರ ಸ್ಥಿತಿ ಗಂಭೀರವಾಗಿದ್ದು, ಪ್ರಸ್ತುತ ಕಾನ್ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉನ್ನಾವೊದಲ್ಲಿ ಮೂವರು ವೈದ್ಯರ ಸಮಿತಿಯು ನಡೆಸಿದ ಪ್ರಾಥಮಿಕ ಮರಣೋತ್ತರ ವರದಿಯಿಂದ ದೃಢಪಡಿಸಿದಂತೆ ಇದು ವಿಷದ ಪ್ರಕರಣ ಎಂದು ಪೊಲೀಸರು ನಂಬಿದ್ದಾರೆ.

ಆದರೆ, ಮರಣೋತ್ತರ ವರದಿಗಾಗಿ ಪೊಲೀಸರು ಕಾಯುತ್ತಿದ್ದ ಕಾರಣ ಈ ಪ್ರಕರಣದಲ್ಲಿ ಈವರೆಗೆ ಯಾವುದೇ ಎಫ್‌ಐಆರ್ ದಾಖಲಿಸಿರಲಿಲ್ಲ. ಆದರೆ ಪೋಷಕರೇ ದೂರು ಕೊಟ್ಟಿದ್ದಾರೆ.

ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಪ್ರತಿಪಕ್ಷಗಳು ಈ ಪ್ರಕರಣ ರಾಜಕೀಯ ವಿವಾದಕ್ಕೆ ತಿರುಗಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಆದೇಶಿಸಿ ಡಿಜಿಪಿಯಿಂದ ವಿವರವಾದ ವರದಿಯನ್ನು ಕೋರಿದ್ದಾರೆ.

15, 14 ಮತ್ತು 16 ವರ್ಷ ವಯಸ್ಸಿನ ಮೂವರು ಬಾಲಕಿಯರನ್ನು ಲಖನೌದಿಂದ ದಕ್ಷಿಣಕ್ಕೆ 36 ಕಿ.ಮೀ ದೂರದಲ್ಲಿರುವ ಅಶೋಹಾದ ಬಾಬುಹರಾ ಗ್ರಾಮದಲ್ಲಿ ಹೊಲವೊಂದರಲ್ಲಿ ಸಿಕ್ಕಿದ್ದಾರೆ. ಬುಧವಾರ ಸಂಜೆ ಗ್ರಾಮಸ್ಥರು ಮೇವು ತೆಗೆದುಕೊಳ್ಳಲು ಮನೆ ಬಿಟ್ಟ ನಂತರ ಅವರು ಹಿಂತಿರುಗಲಿಲ್ಲ.

ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿ ಬಾಲಕಿಯರನ್ನು ಪತ್ತೆ ಹಚ್ಚಿದರು. ಬಳಿಕ ಅವರ ಸ್ಥಿತಿ ಕಂಡು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಇಬ್ಬರು ಮೃತಪಟ್ಟಿದ್ದಾರೆಂದು ಘೋಷಿಸಲ್ಪಟ್ಟರೆ, ಇನ್ನೊಬ್ಬನನ್ನು ಉನ್ನಾವ್ ಆಸ್ಪತ್ರೆಗೆ ಸಾಗಿಸಿ ನಂತರ ಕಾನ್ಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಲಾಗುತ್ತಿದೆ.

ಬಾಲಕಿಯರ ತಾಯಿ ಮತ್ತು ಸಹೋದರರ ಹೇಳಿಕೆಗಳಲ್ಲಿ ಬಾಲಕಿಯರನ್ನು ಕೊಲ್ಲಲಾಗಿದೆ ಎಂದು ಹೇಳುತ್ತಿದ್ಧಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights