ಎಳೆ ಮಗುವಿಗೆ ಕೇಬಲ್ ವೈರ್‌ನಿಂದ ಥಳಿಸಿದ ಪೋಷಕರು; ಮಗು ದಾರುಣ ಸಾವು
ಅಪ್ರಾಪ್ತ ಮತ್ತು ಎಳೆ ಮಕ್ಕಳಿಗೆ ಹೊಡೆಯುವುದು, ಅವ್ಯಾಚ್ಯವಾಗಿ ನಿಂದಿಸುವುದು ಕಾನೂನು ಬಾಹಿರ. ಆದರೆ, ಸ್ವತಃ ಪೋಷಕರೇ ತಮ್ಮ 03 ವರ್ಷ ಮಗುವಿಗೆ ಅಮಾನವೀಯವಾಗಿ ಥಳಿಸಿ, ಮಗು ಸಾವನ್ನಪ್ಪಿರುವ ಘಟನೆ ಹೈದರಾಬಾದ್‌ನ ಜೀಡಿಮೆಟ್ಲಾದಲ್ಲಿ ನಡೆದಿದೆ.
3 ವರ್ಷದ ಮಗು ಉಮೇಶ ಊಟ ತಿನ್ನುತ್ತಿಲ್ಲವೆಂಬ ಕಾರಣಕ್ಕೆ ಪೋಷಕರು ಮನಸೋ ಇಚ್ಛೆ ಥಳಿಸಿದ್ದಾರೆ. ಮಗುವಿನ ತಾಯಿ ಉದಯಾ ಮತ್ತು ಆಕೆಯ ಪತಿ ಇಬ್ಬರೂ ಮಗುವಿಗೆ ವೈರ್ ಕೇಬಲ್ ನಿಂದ ಹೊಡೆದಿದ್ದಾರೆ. ಮಗು ಪ್ರಜ್ಞೆ ತಪ್ಪಿದೆ. ನಂತರ ಮಗುವನ್ನು ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರಾರದೂ ಆಸ್ಪತ್ರೆಗೆ ತಲುಪುವ ಮುನ್ನವೇ ಮುಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ದಾರುಣ ಘಟನೆಗೆ ಸಂಬಂಧ ಪಟ್ಟಂತೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆ ಮತ್ತು ಸಂಗಾತಿಗೆ ಆ ಮಗು ಇಷ್ಟವಿರಲಿಲ್ಲ. ತಮ್ಮ ಸಂಬಂಧಕ್ಕೆ ಮಗು ಹೊರೆಯಾಗಿದೆ ಎಂದು ಭಾವಿಸಿ, ಮಗುವನ್ನು ದೂರ ಮಾಡಲು ಪ್ರಯತ್ನಿಸಿದಂತೆ ಕಾಣುತ್ತದೆ. ಈ ಸಂಬಂಧ ಅಕ್ಕ ಪಕ್ಕದವರನ್ನು ವಿಚಾರಿಸಿದಾಗ ಮಗು ಕುರಿತು ಮಹಿಳೆ ಮತ್ತು ಆಕೆಯ ಸಂಗಾತಿ ಅತ್ಯಂತ ನಿರ್ಲಕ್ಷ ವಹಿಸುತ್ತಿದ್ದರು ಎಂಬುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮೋದಿಯ ಗಡ್ಡ ತೆಗೆಸಲು 100 ರೂ ಮನಿ ಆರ್ಡರ್ ಮಾಡಿದ ಚಾಯ್ ವಾಲಾ!

