ಫ್ಯಾಕ್ಟ್‌ಚೆಕ್: ಸಾಧು ವೇಷದಲ್ಲಿದ್ದ ಇವರು ಮಕ್ಕಳ ಕಳ್ಳರಲ್ಲ, ಚಿನ್ನ ಕಳ್ಳರು!

ಮಥುರಾ ರೈಲು ನಿಲ್ದಾಣದಿಂದ ಪುಟ್ಟ ಮಗುವನ್ನು ಅಪಹರಿಸಿದ ಘಟನೆ ಆ ಪ್ರದೇಶದ ಜನರಲ್ಲಿ ಸಾಕಷ್ಟು ಭಯವನ್ನು ಉಂಟುಮಾಡಿದೆ. ಆಗಸ್ಟ್ 24 ರಂದು ಮಥುರಾ ರೈಲು ನಿಲ್ದಾಣದಿಂದ ವ್ಯಕ್ತಿಯೊಬ್ಬ 4 ತಿಂಗಳ ಕಂದನನ್ನು ಅಪಹರಿಸಿದ ವಿಡಿಯೋ ವೈರಲ್ ಆಗಿತ್ತು. ನಂತರ ಪೊಲೀಸರು ಬಿಜೆಪಿ ಕೌನ್ಸಿಲರ್ ಮನೆಯಲ್ಲಿ ಮಗುವನ್ನು ಪತ್ತೆ ಮಾಡಿದರು.

sadhu gang in raisen

ಈ ಘಟನೆ ಆದಾಗಿನಿಂದ, ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕೆಲ ವ್ಯಕ್ತಿಗಳನ್ನು ಸಾರ್ವಜನಿಕರು ಹಿಡಿದು ಥಳಿಸಿದ್ದಾರೆ ಎನ್ನುವ ವರದಿಗಳು ಸಾಮಾನ್ಯಾಗಿವೆ. ಅಲ್ಲದೆ ವಾಟ್ಸಾಪ್‌ ಗುಂಪುಗಳಲ್ಲಿ ಕೆಲ ವ್ಯಕ್ತಗಳ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. ಸದ್ಯ ವಿಡಿಯೊವೊಂದು ವೈರಲ್ ಆಗಿದ್ದು ಸಾಧುಗಳ ವೇಷದಲ್ಲಿ ಬಂದಿರುವ ಮಕ್ಕಳ ಕಳ್ಳರು ಎನ್ನವ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

400 ರಿಂದ 500 ಮಕ್ಕಳ ಕಳ್ಳರು ಈ ಪ್ರದೇಶಕ್ಕೆ ಬಂದಿದ್ದು , ಅಂಗಾಂಗ ಕದ್ದು ಮಾರಾಟ ಮಾಡಲು ಮಕ್ಕಳನ್ನು ಅಪಹರಿಸುತ್ತಿದ್ದಾರೆ ಎಂದು ಪೊಲೀಸರು ಘೋಷಿಸಿದ್ದರಿಂದ ಈ ವೀಡಿಯೊಗಳ ಜೊತೆಗೆ, ಆಡಿಯೊ ಕ್ಲಿಪ್ ಅನ್ನು ಸಹ ಹಂಚಿಕೊಳ್ಳಲಾಗುತ್ತಿದೆ, ಇದರಲ್ಲಿ ಒಬ್ಬ ವ್ಯಕ್ತಿ ತಮ್ಮ ಮಕ್ಕಳನ್ನು ಹೊರಗೆ ಕಳುಹಿಸಬೇಡಿ ಎಂದು ಜನರನ್ನು ವಿನಂತಿಸುತ್ತಿದ್ದಾರೆ.  ಜೊತೆಗೆ ಈ ಮಕ್ಕಳ ಕಳ್ಳರು  ತಿನಿಸುಗಳ ವ್ಯಾಪಾರಿಗಳಂತೆ, ಸಾಧುಗಳು ಮತ್ತು ಫಕೀರರಂತೆ ವೇಷ ಹಾಕುತ್ತಿದ್ದಾರೆ ಎಂದು ವಿಡಿಯೋದಲ್ನಿಲಿ ಹೇಳಲಾಗುತ್ತದೆ. “ಆಡಿಯೋ ರೆಕಾರ್ಡಿಂಗ್ ಅಬ್ರಾರ್ ಛೋಟು, ಸೀತಾಪುರ” ಎಂದು ಹೇಳುವ ಮೂಲಕ ರೆಕಾರ್ಡಿಂಗ್ ಕೊನೆಗೊಳ್ಳುತ್ತದೆ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರು ಘಟನೆ ತಪ್ಪುದಾರಿಗೆಳೆಯುವಂತಿದೆ ಎಂದು Alt news ವರದಿ ಮಾಡಿದೆ. ಆಗಸ್ಟ್ 8, 2022 ರಂದು ಈ ಘಟನೆ ನಡೆದಿದ್ದು, ಸಾಧುಗಳ ವೇಷದಲ್ಲಿ ಜನರ ಗುಂಪೊಂದು ಕಳ್ಳತನ ಮಾಡಲು ಪ್ರಯತ್ನಿಸಿದೆ. ನಂತರ ಗ್ರಾಮಸ್ಥರು ದೊಣ್ಣೆಯಿಂದ ಥಳಿಸಿದ್ದಾರೆ, ಎಂದು ಆಲ್ಟ್‌ ನ್ಯೂಸ್‌ ವರದಿಯಲ್ಲಿ ಉಲ್ಲೇಖಿಸಿದೆ.

ನವಭಾರತ್ ಟೈಮ್ಸ್ ಆಗಸ್ಟ್ 7 ರಂದು ಈ ಘಟನೆಯ ಬಗ್ಗೆ ವರದಿ ಮಾಡಿದೆ. ಲೇಖನದ ಪ್ರಕಾರ, ರೈಸನ್ ಜಿಲ್ಲೆಯ ಮಂಡಿದೀಪ್ ಪೊಲೀಸ್ ಠಾಣೆ ವ್ಯಾಪ್ತಿಯ ಪಲೋಹಾದಲ್ಲಿ ಕೆಲವು ಸಾಧುಗಳು ಮಹಿಳೆಯನ್ನು ಪ್ರಜ್ಞೆ ತಪ್ಪಿಸಿ ದರೋಡೆ ಮಾಡಿದ್ದಾರೆ. ಸಾಧುವಿನ ವೇಷದಲ್ಲಿದ್ದ ದುಷ್ಕರ್ಮಿಗಳು ಮಹಿಳೆಯ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ದೋಚಿದ್ದಾರೆ.

ಅವರು ಪಲೋಹಾದ ಪಕ್ಕದ ಪಿಪಾಲಿಯಾ ಗಜ್ಜು ಗ್ರಾಮದಲ್ಲಿ ನೆಲೆಸಿರುವುದನ್ನು ಗ್ರಾಮಸ್ಥರು ಪತ್ತೆ ಮಾಡಿದರು. ಸಾಧುಗಳನ್ನು ಥಳಿಸಿದ ಬಳಿಕ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಂಡಿದೀಪ ಪೊಲೀಸರು ಆರು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆರೋಪಿಗಳು ಉತ್ತರ ಪ್ರದೇಶದ ಚಿತ್ರಕೂಟದ ನಿವಾಸಿಗಳು ಎಂದು ಪೊಲೀಸರು ಹೇಳಿರುವುದಾಗಿ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಒನ್ ಇಂಡಿಯಾ ಕೂಡ ಈ ಘಟನೆಯನ್ನು ವರದಿ ಮಾಡಿದೆ. ಆರೋಪಿಗಳಾದ ಬಚ್ಚು ಜೋಶಿ, ಲವ್ಲೇಶ್ ಗೋಸ್ವಾಮಿ, ಮಿಥಿಲೇಶ್ ಗೋಸ್ವಾಮಿ, ವಿದಾಯಕ್ ಗೋಸ್ವಾಮಿ, ಗುಲಾಬ್ ಜೋಶಿ ಮತ್ತು ರಾಮ್ಸ್ವರೂಪ್ ಗೋಸ್ವಾಮಿ ಉತ್ತರ ಪ್ರದೇಶದ ಬಾಂಧವಗಢ ನಿವಾಸಿಗಳು ಪೋಲಾಹ ಗ್ರಾಮಕ್ಕೆ ಭಿಕ್ಷೆ ಬೇಡಲು ಹೋಗಿದ್ದರು ಎಂದು ಪೊಲೀಸರು ಹೇಳಿರುವುದಾಗಿ ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಲೇಖನದಲ್ಲಿ ಸೇರಿಸಲಾದ ಚಿತ್ರಗಳನ್ನು ನೋಡಿದಾಗ, ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲಾದ ಎರಡೂ ವೀಡಿಯೊಗಳು ರೈಸನ್‌ನಲ್ಲಿನ ಘಟನೆಯಿಂದ ಬಂದವು ಎಂಬುದು ಸ್ಪಷ್ಟವಾಗುತ್ತದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಆಲ್ಟ್ ನ್ಯೂಸ್ ಮಂಡಿದೀಪ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದೆ. ಈ ಆರೋಪಿಗಳು ಸಾಧುಗಳ ವೇಷ ಧರಿಸಿ ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದರು ಎಂದು ಎಸ್‌ಎಚ್‌ಒ ಮನೋಜ್ ಸಿಂಗ್ ತಿಳಿಸಿದ್ದಾರೆ. ಗ್ರಾಮಸ್ಥರು ಅವರನ್ನು ಹಿಡಿದು ಥಳಿಸಿದ್ದಾರೆ. ಆರೋಪಿಗಳನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ ಸದ್ಯ ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿದೆ.

ಆಲ್ಟ್ ನ್ಯೂಸ್ ರೈಸನ್ ಎಸ್ಪಿ ವಿಕಾಸ್ ಕುಮಾರ್ ಸೆಹ್ವಾಲ್ ಅವರೊಂದಿಗೆ ಮಾತನಾಡಿದೆ. ಈ ಘಟನೆಯಲ್ಲಿ ಸಾಧುಗಳು ಮಕ್ಕಳನ್ನು ಅಪಹರಿಸುವ ಪ್ರಯತ್ನ ಮಾಡಿಲ್ಲ, ಈ ಸಾಧುಗಳು ಗ್ರಾಮಕ್ಕೆ ಪೂಜೆ ಸಲ್ಲಿಸಲು ಬಂದಿದ್ದರು. ಪೂಜಾ ಸಮಾರಂಭಕ್ಕಾಗಿ ಮಹಿಳೆಗೆ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕೇಳಿದರು. ಆ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಜೈಲಿಗೆ ಕಳುಹಿಸಿದ್ದಾರೆ.

ಮಕ್ಕಳ ಕಳ್ಳತನಕ್ಕೆ ಸಂಬಂಧಿಸಿದಂತೆ ವೈರಲ್ ಆಡಿಯೋ ಕ್ಲಿಪ್‌ನಲ್ಲಿ ಮಾಡಿದ ಪ್ರತಿಪಾದನೆಗೆ ಯಾವುದೇ ನಿರ್ಧಿಷ್ಟ  ಆಧಾರಗಳಿಲ್ಲ. ಇಂತಹ ವದಂತಿಗಳನ್ನು ಕುರಿತು ಸೀತಾಪುರದ ಎಸ್ಪಿ ವಿಡಿಯೋ ಹೇಳಿಕೆ ನೀಡಿದ್ದಾರೆ. ಮಕ್ಕಳ ಕಳ್ಳತನದ ವದಂತಿಗಳಿಗೆ ಕಿವಿಗೊಡಬೇಡಿ ಮತ್ತು ಅಂತಹ ವದಂತಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ಸ್ಥಳೀಯರಲ್ಲಿ ಮನವಿ ಮಾಡಿದರು.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವಿಡಿಯೋಗಳಲ್ಲಿ, ಸಾಧುಗಳ ವೇಷದಲ್ಲಿ ಕಾಣಿಸಿಕೊಂಡ ವ್ಯಕ್ತಿಗಳು ಮಕ್ಕಳ ಅಪಹರಣ ಮಾಡುವವರಲ್ಲ. ವಾಸ್ತವವಾಗಿ, ರೈಸನ್‌ ಎಂಬ ಗ್ರಾಮದಲ್ಲಿ ದುಷ್ಕರ್ಮಿಗಳು ಮಹಿಳೆಯ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ದೋಚಿದ್ದಾರೆ. ಇದೇ ಸಮಯದಲ್ಲಿ ಸಾಧುಗಳ ವೇಷದಲ್ಲಿದ್ದ ಕಳ್ಳರ ಗುಂಪನ್ನು ಸ್ಥಳೀಯ ಗ್ರಾಮಸ್ಥರು ಹಿಡಿದು ಥಳಿಸಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಬೂರ್ಖಾ ಧರಿಸಿದ್ದ ಮುಸ್ಲಿಂ ಮಹಿಳೆ ‘ಗಣೇಶನ ಮೂರ್ತಿ’ಗಳನ್ನು ಒಡೆದು ಹಾಕಿದ್ದು ನಿಜ ! ಆದರೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights