2015ರ ಪಾಕಿಸ್ತಾನದ ವೀಡಿಯೊವನ್ನು ಶಾಹೀನ್ ಬಾಗ್ ಮತ್ತು ಲಾಕ್ ಡೌನ್ ಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ಪಾಕಿಸ್ತಾನದ ಕರಾಚಿಯಲ್ಲಿರುವ ಮಸಾಜ್ ಪಾರ್ಲರ್ ಮೇಲೆ ದಾಳಿಯಾದಾಗ ಬುರ್ಖಾ ಮಹಿಳೆಯರು ದಾಳಿಯಿಂದ ಪಾರಾಗಿರುವುದನ್ನುತೋರಿಸುವ ಸುಮಾರು ಐದು ವರ್ಷ ಹಳೆಯ  ವಿಡಿಯೋವನ್ನು ಭಾರತೀಯ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಲಾಕ್‍ಡೌನ್ ಸಮಯದಲ್ಲಿ, ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೆಹಲಿಯ ಶಾಹೀನ್ ಬಾಗ್‍ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಮಹಿಳೆಯರು ವೇಶ್ಯಾವಾಟಿಕೆ ದಂಧೆ ನಡೆಸುವಾಗ ರೇಡ್ ಮಾಡಲಾಗಿದೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಕ್ಲಿಪ್ ವೈರಲ್‍ ಆಗುತ್ತಿದೆ.

2015ರಲ್ಲಿ ಕರಾಚಿಯಲ್ಲಿ ಈ ವಿಡಿಯೋವನ್ನುಚಿತ್ರೀಕರಿಸಲಾಗಿದೆ ಮತ್ತು ಅದನ್ನು ಶಾಹೀನ್ ಬಾಗ್‍ಗೆ ಲಿಂಕ್ ಮಾಡುವ ಹೇಳಿಕೆಗಳು ಸುಳ್ಳು ಎಂದು ಬೂಮ್‍ ಕಂಡುಹಿಡಿದಿದೆ.

90 ಸೆಕೆಂಡುಗಳ ಉದ್ದದ ವೀಡಿಯೊ ಮಾರುಕಟ್ಟೆ ಪ್ರದೇಶವೆಂದು ತೋರುವ ಕಟ್ಟಡದ ಮೊದಲ ಮಹಡಿಯಿಂದ ಮಹಿಳೆಯರ ಗುಂಪು ತಪ್ಪಿಸಿಕೊಳ್ಳುವುದನ್ನು ತೋರಿಸುತ್ತದೆ. ಕಟ್ಟಡದ ಕೆಳಗೆ ಜಮಾಯಿಸಿದ ನೋಡುಗರು ಕೆಳಗಿಳಿಯಲು ಸಹಾಯ ಮಾಡುವುದನ್ನು ಕಾಣಬಹುದು. ಈ ಹಿನ್ನೆಲೆಯಲ್ಲಿ ಮನುಷ್ಯ ಹಿಂದಿಯಲ್ಲಿ ಮಾತನಾಡುವುದನ್ನು ಕೇಳಬಹುದು.

‘ವೇಶ್ಯಾವಾಟಿಕೆಯಲ್ಲಿ ತೊಡಗಿರುವಾಗ ಶಹೀನ್ ಬಾಗ್ ಸಿಂಹಿಣಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ’ ಎಂದು ಹಿಂದಿ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

ವೀಡಿಯೊವನ್ನು ಕೆಳಗೆ ನೋಡಿ ಮತ್ತುಅದರ ಆರ್ಕೈವ್ ಮಾಡಲಾದ ಆವೃತ್ತಿಯನ್ನುಇಲ್ಲಿ ಪರಿಶೀಲಿಸಿ.

https://www.facebook.com/358115484725965/videos/2352306528206180/

ಅದೇ ವೀಡಿಯೊವನ್ನು ಈಗ ನಡೆಯುತ್ತಿರುವ ಲಾಕ್‍ಡೌನ್‍ಗೆ ಲಿಂಕ್ ಮಾಡುವ ಹಲವಾರು ಬೇರೆ ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗಿದೆ. ಕೆಳಗಿನ ಪೋಸ್ಟ್ ಗಳನ್ನು ಪರಿಶೀಲಿಸಿ.

ಹೇಳಿಕೆ: ನೀವು ಲಾಕ್‍ಡೌನ್‍ನಲ್ಲಿ ಶಾಪಿಂಗ್‍ಗೆ ಹೋದಾಗ ಅವರು ಅಂಗಡಿಯನ್ನು ಸೀಲ್ ಮಾಡುತ್ತಾರೆ.

Shopping in Lockdown

When you go for Shopping in lockdown and they Seal the shop.

Posted by Dubai wąĺy Bhāi Jaņ on Sunday, May 3, 2020

ಹೇಳಿಕೆ: ಲಾಕ್‍ಡೌನ್ ಸಮಯದಲ್ಲಿ ಶಾಪಿಂಗಿಗೆ ಹೋಗಬೇಕೆಂಬ ಹಂಬಲಕ್ಕೆ ಸಿಕ್ಕ ಈ ಪ್ರತಿಕ್ರಿಯೆ

ಫ್ಯಾಕ್ಟ್ ಚೆಕ್

ನಾವು ವೀಡಿಯೊವನ್ನು ಕೀ ಫ್ರೇಮ್‍ಗಳಾಗಿ ಭಾಗಿಸಿದ್ದೇವೆ ಮತ್ತು ರಶ್ಯಾದ ಸರ್ಚ್‍ ಎಂಜಿನ್‍ ಇಂಡೆಕ್ಸ್ ನಲ್ಲಿ ರಿವರ್ಸ್‍ ಇಮೇಜ್ ಸರ್ಚ್ ಮೂಲಕ ಇತರ ಪೋಸ್ಟ್ ಳನ್ನು ಕಂಡುಕೊಂಡಿದ್ದೇವೆ. ಇಂಗ್ಲಿಶ್ ಲಿಪಿಯಲ್ಲಿ ಬರೆದ ಉರ್ದು ಶೀರ್ಷಿಕೆಯೊಂದಿಗೆ ಹಿಂದೆ ಅಡೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವೀಡಿಯೊವನ್ನು ಜೂನ್ 15, 2015ರಂದು ಅಪ್‍ಲೋಡ್ ಮಾಡಲಾಗಿದೆ. ವೀಡಿಯೊದ ಶೀರ್ಷಿಕೆ, ಉರ್ದುವಿನಲ್ಲಿ, ‘ಕರಾಚಿಯಲ್ಲಿ ಎಫ್‍ಐಎ ವೇಶ್ಯಾಗೃಹದ ಮೇಲೆ ರೇಡ್, ವೇಶ್ಯೆಯರು ಹೇಗೆ ಓಡಿ ಹೋಗುತ್ತಿದ್ದಾರೆ ನೋಡಿ’.

ಕೀವರ್ಡ್ ಹುಡುಕಾಟದ ನಂತರ, ಜೂನ್ 17, 2015ರಂದು ಅಪ್‍ಲೋಡ್ ಮಾಡಲಾದ ಮತ್ತೊಂದು ವೀಡಿಯೊವನ್ನು ಬೂಮ್‍ ಕಂಡುಹಿಡಿದಿದೆ, ಅದು ‘ಮಸಾಜ್ ಪಾರ್ಲರ್, ಖಡ್ಡಾ ಮಾರುಕಟ್ಟೆ ಕರಾಚಿ ಪಾಕಿಸ್ತಾನಲ್ಲಿ ಎಫ್‍ಐಎ ದಾಳಿಗಳನ್ನು ವೀಕ್ಷಿಸಿ (ಸಿಕ್)’ ಎಂದು ಬರೆಯಲಾಗಿದೆ.

Fia chapa in khadda market

Posted by Jibran Waghani on Saturday, June 13, 2015

ಜೂನ್ 13, 2015 ರಂದು ‘ಖಡ್ಡಾ ಮಾರುಕಟ್ಟೆಯಲ್ಲಿ ಫಿಯಾ ಚಪಾ’ ಎಂಬ ಶೀರ್ಷಿಕೆಯೊಂದಿಗೆ ಅದೇ ವೀಡಿಯೊವನ್ನು ಹಂಚಿಕೊಳ್ಳುವ ಫೇಸ್‍ಬುಕ್‍ ಪೋಸ್ಟ್‌ ಅನ್ನು ಬೂಮ್‍ ಕಂಡುಹಿಡಿದಿದೆ.

ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಮಹಿಳೆಯರು ತಪ್ಪಿಸಿಕೊಳ್ಳುತ್ತಿರುವ ಕಟ್ಟಡದ ಗೋಡೆಯ ಮೇಲೆ ಚಿತ್ರಿಸಿದ ಝೆನ್‍ಅಕಾಡೆಮಿಯ ಹೆಸರನ್ನು ಬೂಮ್ ನೋಡಿದೆ.

ನಾವು ಗೂಗಲ್ ನಕ್ಷೆಗಳಲ್ಲಿ ಹೆಸರನ್ನು ಪರಿಶೀಲಿಸಿದ್ದೇವೆ ಮತ್ತುಝೆನ್‍ಅಕಾಡೆಮಿಯನ್ನು ಕರಾಚಿಯ ಖಡ್ಡಾ ಮಾರುಕಟ್ಟೆಯಲ್ಲಿದೆ ಎಂದು ತಿಳಿಯಲಾಗಿದೆ.

ಅದೇ ವೀಡಿಯೊದಿಂದ ಸ್ಕ್ರೀನ್‍ಶಾಟ್ ಇರುವ ಅವಾಮಿ ಪಾಲಿಟಿಕ್ಸ್ ಎಂಬ ವೆಬ್ ಪೋರ್ಟಲ್‍ನಲ್ಲಿ ಪ್ರಕಟವಾದ ಲೇಖನವನ್ನೂ ಬೂಮ್‍ ಕಂಡುಹಿಡಿದಿದೆ. ಲೇಖನವನ್ನು ಜೂನ್ 14, 2015ರಂದು ಪ್ರಕಟಿಸಲಾಯಿತು.

(ಮೂಲ) ಬೂಮ್ ಲೈವ್

(ಕನ್ನಡಕ್ಕೆ): ದಿವ್ಯ ಶರ್ಮ

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights