ದೆಹಲಿಯಿಂದ ಏಕಾಂಗಿಯಾಗಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ 5 ವರ್ಷದ ಬಾಲಕ!
ಕೊರೊನಾ ವೈರಸ್ ಲಾಕ್‌ಡೌನ್ ಕಾರಣ ಎರಡು ತಿಂಗಳ ನಂತರ ಇಂದು ಭಾರತದಲ್ಲಿ ವಿಮಾನಗಳು ಪುನರಾರಂಭಗೊಂಡಂತೆ, ದೆಹಲಿಯಿಂದ ಏಕಾಂಗಿಯಾಗಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ “ವಿಶೇಷ ವರ್ಗ” ಟಿಕೆಟ್ ತೆಗೆದುಕೊಂಡಿದ್ದ ಚಿಕ್ಕ ಹುಡುಗನೊಬ್ಬನ ದೃಶ್ಯ ಈ ದಿನದ ಅತ್ಯಂತ ಹೃದಯಸ್ಪರ್ಶಿ ದೃಶ್ಯಗಳಲ್ಲಿ ಒಂದಾಗಿದೆ.
ಐದು ವರ್ಷದ ವಿಹಾನ್ ಶರ್ಮಾ ದೆಹಲಿಯಿಂದ ಏಕಾಂಗಿಯಾಗಿ ಪ್ರಯಾಣ ಬೆಳೆಸಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಮ್ಮ ತಾಯಿಯ ಮಡಿಲು ಸೇರಿದ್ದಾನೆ.
“ನನ್ನ ಐದು ವರ್ಷದ ಮಗ ವಿಹಾನ್ ದೆಹಲಿಯಿಂದ ಏಕಾಂಗಿಯಾಗಿ ಪ್ರಯಾಣಿಸಿದ್ದಾನೆ, ಅವನು ಮೂರು ತಿಂಗಳ ನಂತರ ಮತ್ತೆ ಬೆಂಗಳೂರಿಗೆ ಬಂದಿದ್ದಾನೆ” ಎಂದು ಅವರ ತಾಯಿ ಸಂತೋಷ ಹಂಚಿಕೊಂಡಿದ್ದಾರೆ. ಪುಟ್ಟ ಬಾಲಕ ವಿಹಾನ್ ಹಳದಿ ಬಣ್ಣದ ಮ್ಯಾಚಿಂಗ್ ಮಾಸ್ಕ್, ನೀಲಿ ಗೌಸ್ ಧರಿಸಿದ್ದರು.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಕರು ತೆರಳಿದ್ದು, ಈವರೆಗೆ ಎರಡು ವಿಮಾನಗಳು ವಿಮಾನ ನಿಲ್ದಾಣದಲ್ಲಿ ಇಳಿದಿವೆ. ಮಗನನ್ನು ಸ್ವೀಕರಿಸಲು ಬಂದ ತಾಯಿ, “ನನ್ನ 5 ವರ್ಷದ ಮಗ ವಿಹಾನ್ ಶರ್ಮಾ ದೆಹಲಿಯಿಂದ ಏಕಾಂಗಿಯಾಗಿ ಪ್ರಯಾಣಿಸಿದ್ದಾರೆ, ಅವರು 3 ತಿಂಗಳ ನಂತರ ಬೆಂಗಳೂರಿಗೆ ಮರಳಿದ್ದಾರೆ” ಎಂದಿದ್ದಾರೆ.
ಮಾರ್ಚ್ ಅಂತ್ಯದ ನಂತರ ಕೊರೋನವೈರಸ್ ಹರಡುವುದನ್ನು ತಡೆಗಟ್ಟಲು ದೇಶವು ಲಾಕ್‌ಡೌನ್ ಮೊರೆ ಹೋದ ಬಳಿಕ ಮೊದಲ ಬಾರಿಗೆ ದೇಶೀಯ ವಿಮಾನಗಳು ಸೋಮವಾರದಿಂದ ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ವಿಮಾನಗಳನ್ನು ನಿಲ್ಲಿಸಿದಾಗ ಅನೇಕರು ತಾವು ಭೇಟಿ ನೀಡುತ್ತಿದ್ದ ನಗರಗಳಲ್ಲಿ ಸಿಲುಕಿಕೊಂಡರು.
ಇಂದು ಬೆಳಿಗ್ಗೆ 9 ಗಂಟೆಯವರೆಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನಗಳು ಹಾರಾಟ ಶುರುವಾಗಿದೆ.. ಈ ಪೈಕಿ ವಿಹಾನ್ ಅವರ ವಿಮಾನವೂ ಇದರಲ್ಲಿತ್ತು.

