ಕೊರೊನಾಗೆ ಸುಪ್ರೀಂ ಕೋರ್ಟ್‌ನ 77 ವಕೀಲರು ಸಾವು; ಅಗಲಿದವರಿಗೆ ಸುಪ್ರೀಂ ಸಂತಾಪ!

ಕೊರೊನಾದಿಂದಾಗಿ ಸುಪ್ರೀಂ ಕೋರ್ಟ್‌ನ 77 ವಕೀಲರು ಮೃತ ಪಟ್ಟಿದ್ದಾರೆ. ಸಾವನ್ನಪ್ಪಿದ ಎಲ್ಲಾ ವಕೀಲರಿಗೂ ಸುಪ್ರೀಂ ಕೋರ್ಟ್‌ ಸೋಮವಾರ ಸಂತಾಪ ಸೂಚಿಸಿದೆ.

ದಿನದ ವಿಚಾರಣೆಗಳ ಆರಂಭಕ್ಕೂ ಮುನ್ನ, ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ನ್ಯಾಯಪೀಠವು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಪರವಾಗಿ ಸಂತಾಪ ವ್ಯಕ್ತಪಡಿಸಿದೆ.

“ಎಸ್‌ಸಿಬಿಎ ಸದಸ್ಯರಾಗಿದ್ದ 77 ವಕೀಲರು ಕೊರೊನಾಗೆ ಬಲಿಯಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ (ಎಸ್‌ಸಿಬಿಎ) ಕಾರ್ಯದರ್ಶಿ ನಮಗೆ ಮಾಹಿತಿ ನೀಡಿದ್ದಾರೆ. ನಾವು ಆ ಎಲ್ಲಾ ವಕೀಲರಿಗೂ ಸಂತಾಪವನ್ನು ಸಲ್ಲಿಸುತ್ತೇವೆ. ಅಗಲಿದ ಆತ್ಮಗಳಿಗೆ ನಾವು ಎರಡು ನಿಮಿಷಗಳ ಮೌನಾಚರಣೆಯನ್ನು ಆಚರಿಸುತ್ತೇವೆ ”ಎಂದು ಮುಖ್ಯ ನ್ಯಾಯಮೂರ್ತಿ ರಮಣ ಹೇಳಿದ್ದಾರೆ.

ಅನೇಕ ನ್ಯಾಯಾಲಯದ ಸಿಬ್ಬಂದಿಗಳು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ನಮಗೆ ತಿಳಿದಿದೆ, ಅಗಲಿದ ಆತ್ಮಗಳಿಗೆ ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಎಸ್‌ಸಿಬಿಎ ಅಧ್ಯಕ್ಷರಾಗಿರುವ ಹಿರಿಯ ವಕೀಲ ವಿಕಾಸ್ ಸಿಂಗ್, ಪ್ರಾಣ ಕಳೆದುಕೊಂಡ ವಕೀಲರಿಗೆ ಗೌರವ ಸಲ್ಲಿಸುವ ನ್ಯಾಯಾಲಯದ ಸೂಚನೆಯನ್ನು ಬಾರ್ ಸದಸ್ಯರು ಗೌರವಿಸುತ್ತೇವೆ ಎಂದು ಹೇಳಿದ್ದಾರೆ.

ಬೇಸಿಗೆ ರಜೆಯ ನಂತರ ಸುಪ್ರೀಂ ಕೋರ್ಟ್ ಸೋಮವಾರ ಮತ್ತೆ ಆರಂಭವಾಗಿದೆ.

ಇದನ್ನೂ ಓದಿ: ಬತ್ತಿಹೋದ ಸರಸ್ವತಿ ನದಿಯ ಹುಡುಕಾಟಕ್ಕೆ ಹರಿಯುತ್ತಿದೆ ಹಣದ ಹೊಳೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights