ಪತ್ರಕರ್ತರಿಗೂ ಉಚಿತ ಕೊರೊನಾ ಚಿಕಿತ್ಸೆ ನೀಡಿ ಎಂದ ಹೆಚ್‌ಡಿಕೆ; ತರಾಟೆಗಿಳಿದ ಟ್ವೀಟಿಗರು!

ದೇಶವು ಕೊರೊನಾ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಪತ್ರಕರ್ತರನ್ನು ಕೇವಲ ಹೆಸರಿಗೆ ಮಾತ್ರ ಕೊರೊನಾ ವಾರಿಯರ್ಸ್ ಎಂದು ಘೋಷಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ದೃಶ್ಯ ಮತ್ತು ಮುದ್ರಣ ಮಾಧ್ಯಮದ ಕಾರ್ಯನಿರತ ಪತ್ರಕರ್ತರನ್ನು ಕೋವಿಡ್ ವಿಮೆ ವ್ಯಾಪ್ತಿಗೆ ಒಳಪಡಿಸಬೇಕು. ಕೊರೊನಾ ಸೋಂಕು ತಗುಲಿದ ಪತ್ರಕರ್ತರಿಗೂ ಖಾಸಗಿ ಆಸ್ಪತ್ರೆಗಳಲ್ಲಿಯೂ ಉಚಿತವಾಗಿ ಚಿಕಿತ್ಸೆ ಒದಗಿಸಲು ರಾಜ್ಯಸರ್ಕಾರ ತಕ್ಷಣವೇ ನಿರ್ಧಾರ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕುಮಾರಸ್ವಾಮಿಯವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕೆಲವು ಟ್ವೀಟಿಗರು, ದೇಶದಲ್ಲಿ ಪ್ರತಿಯೊಬ್ಬರೂ ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ. ಅಲ್ಲದೆ, ಎಲ್ಲರೂ ಅವರವರ ಹೊಟ್ಟೆ ಪಾಡಿಗಾಗಿ ದುಡಿಯುತ್ತಿದ್ದಾರೆ. ಪತ್ರಕರ್ತರು ಬಕೆಟ್‌ ಹಿಡಿಯುವುದರಲ್ಲಿ ಬಿಸಿ ಆಗಿದ್ದಾರೆ ಎಂದಿದ್ದಾರೆ.

ಕುಮಾರಸ್ವಾಮಿಯವರು ಟ್ವೀಟ್‌ಗೆ ಸುಂದರ್‌ ಎಂಬುವವರು ಪ್ರತಿಕ್ರಿಯಿಸಿದ್ದು, ಎಲ್ಲರೂ ಅವರವರ ಹೊಟ್ಟೆ ಪಾಡಿಗೆ, ಕುಟುಂಬಕ್ಕಾಗಿ, ಸ್ವಂತಕ್ಕಾಗಿ ಬೇರೆ ಬೇರೆ ರೀತಿ ಉದ್ಯೋಗ ಮಾಡಿಕೊಂಡು ಕಷ್ಟಪಡುವದು. ಯಾರೂ ಬೇರೆಯವರನ್ನು, ರಾಜ್ಯ, ದೇಶ, ಉದ್ಧಾರ ಮಾಡಲು ಹೋರಾಟ ಮಾಡಲ್ಲ. ಈ ದೇಶದ ಪ್ರತಿಯೊಬ್ಬರು ಕೊರೊನಾ ವಾರಿಯರ್ಸ್. ಎಲ್ಲರಿಗೂ ಉಚಿತ ಸೇವೆ ಕೊಡುವ ಬಗ್ಗೆ ಸರಕಾರಕ್ಕೆ, ಸಲಹೆ ನೀಡಿ ಸ್ವಾಮಿ ಎಂದು ಕುಮಾರಸ್ವಾಮಿಯವರನ್ನು ಕಿಚಾಯಿಸಿದ್ದಾರೆ.

ಮತ್ತೊಬ್ಬ, ಕೆ.ಆರ್.ಮಹದೇವ್‌ ಎಂಬುವವರು ಪ್ರತಿಕ್ರಿಸಿದ್ದು, ಈ ವಿಚಾರದಲ್ಲಿ ನಾನು ನಿಮ್ಮ ಹೇಳಿಕೆ ಒಪ್ಪಿಕೊಳ್ಳುವುದಿಲ್ಲ, ಪತ್ರ ಕರ್ತರು ಹೆಸರಿಗಷ್ಟೇ ಸಂವಿದಾನದ ನಾಲ್ಕನೇ ಅಂಗ, ಅವರ್ಯಾರೂ ಸರಿಯಾಗಿ ವೃತ್ತಿ ಧರ್ಮ ಫಾಲೋ ಮಾಡ್ತಿಲ್ಲ. ಬರೇ ಬಕೆಟ್ ಹಿಡಿಯೋದು ಬಿಟ್ಟು. ಅವರಿಗೇನು ಬಿಜೆಪಿಯಿಂದ ಪೇಮೆಂಟ್ ಬರುತ್ತೆ. ಇಲ್ಲೂ ಬೇರೆ ಕೊಡ್ತಾರ??” ಎಂದು ಪತ್ರಕರ್ತರ ಅನೈತಿಕ ಪತ್ರಿಕಾ ನಿಷ್ಠೆಯನ್ನು ಪ್ರಶ್ನಿಸಿ, ಆಕ್ರೋಷ ವ್ಯಕ್ತ ಪಡಿಸಿದ್ದಾರೆ.

https://twitter.com/krMahadev6/status/1276820900545851392?s=20

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights