ಪತ್ರಿಕಾ ನೀತಿ ಉಲ್ಲಂಘಿಸಿ ಮೃತದೇಹದ ಚಿತ್ರ ಪ್ರಕಟಿಸಿ ಸಮರ್ಥಿಸಿಕೊಂಡ ಪತ್ರಿಕೆ

ಆತ್ಮಹತ್ಯೆಯಿಂದ ಹತನಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹದ ಚಿತ್ರವನ್ನು ಮುಖಪದಲ್ಲಿ ಪ್ರಕಟಿಸಿದ್ದ ”ಗುಜರಾತ್ ಸಮಾಚಾರ್’‌ ಪತ್ರಿಕೆಯು, ತನ್ನ ತಪ್ಪನ್ನೂ  ಸಮರ್ಥಿಸಿಕೊಂಡಿದೆ.

ದಿನಪತ್ರಿಕೆಯು ತನ್ನ ಮೊದಲ ಪುಟದಲ್ಲಿ ಸುಶಾಂತ್ ಸಿಂಗ್ ಅವರ ಮೃತ ದೇಹ ಹಾಸಿಗೆಯ ಮೇಲೆ ಮಲಗಿರುವ ಗಾಬರಿಗೊಳಿಸುವಂತಹ ಚಿತ್ರವನ್ನು ಪ್ರಕಟಿಸಿ “ಸುಶಾಂತ್ ಖಿನ್ನತೆಯಿಂದ ಬಳಲುತ್ತಿದ್ದು, ಕಳೆದ ಆರು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂಬ ಉಪಶೀರ್ಷಿಕೆಯೊಂದಿಗೆ ವರದಿಯೊಂದನ್ನು ಅದು ಪ್ರಕಟಿಸಿದೆ.

ನಟನ ದೇಹದ ಗಾಬರಿಗೊಳಿಸುವಂತಹ ಚಿತ್ರಗಳನ್ನು ಪ್ರಸಾರ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಮಹಾರಾಷ್ಟ್ರ ಪೊಲೀಸರು ಎಚ್ಚರಿಕೆ ನೀಡಿದ್ದರು. ಅಲ್ಲದೆ ಅತಂಹ ಚಿತ್ರಗಳನ್ನು ಪ್ರಕಟಿಸಬಾರದು ಎಂದು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾರ್ಗಸೂಚಿಗಳನ್ನು ಉಲ್ಲೇಖಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ’ಗುಜರಾತ್ ಸಮಾಚಾರ್‌’ನ ವ್ಯವಸ್ಥಾಪಕ ಸಂಪಾದಕ ಶ್ರೇಯಾನ್ಶ್ ಷಾ, “ಇಂತವುಗಳಲ್ಲಿ ಅಭಿಪ್ರಾಯದ ವ್ಯತ್ಯಾಸವಿದೆ ಆದರೆ ನಾವು ಸರಿಯಾದ ದಾರಿಯಲ್ಲಿದ್ದೇವೆ. ಕೆಲವು ಓದುಗರು ಅದು ಸರಿ ಎಂದು ಭಾವಿಸಿದರೆ, ಇತರರು ಅದು ಅಗತ್ಯವಿಲ್ಲ ಎಂದು ಭಾವಿಸುತ್ತಾರೆ. ಈ ವಿಷಯದ ಬಗ್ಗೆ ಮತ್ತಷ್ಟು ಚರ್ಚಿಸಲು ಬಯಸುವುದಿಲ್ಲ. ನಾವು ಅಂತಹ ಚಿತ್ರಗಳನ್ನು ಪ್ರಕಟಿಸಬೇಕೇ ಅಥವಾ ಬೇಡವೇ ಎಂದು ಸಂಪಾದಕೀಯ ತಂಡವು ನಿರ್ಧರಿಸುತ್ತದೆ” ಎಂದು ಹೇಳಿದ್ದಾರೆ.

ಮುಂಬೈಯ ವಕೀಲರಾದ ರೋಹನ್ ನಹರ್ ಅವರು “ಈ ಎಲ್ಲಾ ಫೋಟೋಗಳನ್ನು ಪೊಲೀಸರು ಹೊರಗಡೆಗೆ ಸೋರಿಕೆ ಮಾಡಿದ್ದಾರೆ. ಅವರ ವಿರುದ್ದ ವಿಚಾರಣೆ ಆರಂಭಿಸಬೇಕು. ಇಂತಹಾ ಚಿತ್ರಗಳನ್ನು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಡುವುದು ನಿಜಕ್ಕೂ ಭಯಾನಕವಾಗಿದೆ, ಅಲ್ಲದೆ ತನಿಖೆಗೆ ಕೂಡಾ ಅಡ್ಡಿಯಾಗುತ್ತದೆ. ಭಾರತದಲ್ಲಿ ಅನೇಕ ಆತ್ಮಹತ್ಯೆ ನಡೆಯುತ್ತದೆ, ಆದರೆ ಸಾರ್ವಜನಿಕ ವ್ಯಕ್ತಿಗಳ ಪ್ರಕರಣದಲ್ಲಿ ಇಂತಹ ತಪ್ಪುಗಳು ನಡೆಯುತ್ತದೆ. ಇದೊಂದು ಪ್ರಮುಖ ಸಮಸ್ಯೆಯಾಗಿದೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಕೆಣಕಿ ಅಪಹಾಸ್ಯಕ್ಕೊಳಗಾದ TV9 ರಂಗನಾಥ್ ಭಾರಧ್ವಜ್!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights