ಯೋದರ ಹತ್ಯೆ ಬಗ್ಗೆ ಮೋದಿ ಮೌನವೇಕೆ? ದೇಶದ ಜನರನ್ನು ಕಾಡುತ್ತಿದೆ ಪ್ರಶ್ನೆ!

ಸೋಮವಾರ ರಾತ್ರಿ ಚೀನಾ ಸೇನೆಯ ಸೈನಿಕರು ಭಾರತೀಯ ಸೇನಾ ಅಧಿಕಾರಿ ಮತ್ತು ಇಬ್ಬರು ಯೋಧರನ್ನು ಹತ್ಯೆ ಮಾಡಿದ್ದರು. ಅದು ಮಂಗಳವಾರ ರಾತ್ರಿಯ ವೇಳೆಗೆ 20 ಭಾರತೀಯ ಸೈನಿಕರ ಹತ್ಯೆಯಾಗಿದೆ ಎಂದು ತಿಳಿದು ಬಂದಿದೆ. ಭಾರತದ ಗಡಿಯಲ್ಲಿ ಯೋಧರ ಹತ್ಯೆಯ ಬಗ್ಗೆ ಮೋದಿಯವರು ಮಾತನಾಡದೇ ಇರುವುದು ದೇಶದ ಜನರಲ್ಲಿ ಪ್ರಧಾನಿ ಮೌನಕ್ಕೆ ಕಾರಣವೇನು? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಗಡಿಯಲ್ಲಿ ಸೈನಿಕರ ಹತ್ಯೆಯಾಗಿರುವ ಸನ್ನಿವೇಶವನ್ನು ದೇಶದ ಜನರ ಮುಂದೆ ಬಹಿರಂಗಪಡಿಸಬೇಕು ಮತ್ತು ಮಂಗಳವಾರ ಮಧ್ಯಾಹ್ನ ಸರ್ಕಾರ ನೀಡಿದ ಹೇಳಿಕೆಯನ್ನು ಕೇವಲ 16 ನಿಮಿಷಗಳಲ್ಲೇ ಬದಲಾಯಿಸಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಅಲ್ಲದೆ, ಭಾರತೀಯ ಗಡಿಯಲ್ಲಿ ಏನು ನಡೆಯುತ್ತಿದೆ, ಮುಂದಿನ ವಿದ್ಯಾಮಾನಗಳೇನು ಎಂದು ದೇಶದ ಜನರ ಎದುರು ಬಹಿರಂಗ ಪಡಿಸಿ ಎಂದು ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು ಆಗ್ರಹಿಸಿದ್ದಾರೆ.

India-China border 'face-off': All you need to know in 500 words ...

ನಮ್ಮ ಬಲಿಷ್ಠ ಸೈನಿಕರ ಹತ್ಯೆಯಾಗಿರುವ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವರು ಮೌನ ವಹಿಸಲು ಕಾರಣವೇನು ಎಂಬುದು ಸೇರಿದಂತೆ ಈ ಕೆಳಗಿನ ಪ್ರಶ್ನೆಗಳು ಕೇಂದ್ರ ಸರ್ಕಾರದ ಮುಂದೆ ಇಡಲಾಗಿದೆ.

  • ಗಾಲ್ವಾನ್ ಕಣಿವೆಯಲ್ಲಿ ಚೀನಿಯರು ಭಾರತೀಯ ಸೇನೆಯ ಸೈನಿಕರನ್ನು ಕೊಂದಿದ್ದರೂ  ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಮೌನ ಕಾಪಾಡಿಕೊಳ್ಳುತ್ತಿರುವುದು ಏಕೆ?
  • ಗಾಲ್ವಾಣ್ ಕಣಿವೆಯಲ್ಲಿ ಉದ್ವಿಗ್ನ ಪ್ರಕ್ರಿಯೆ ನಡೆಯುತ್ತಿರುವುದರಿಂದ ನಿನ್ನೆ ರಾತ್ರಿ ಭಾರತೀಯ ಸೇನಾಧಿಕಾರಿ ಮತ್ತು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆಯ ವರದಿ ಸೂಚಿಸುತ್ತದೆ. ಗಾಲ್ವಾನ್ ಕಣಿವೆಯಲ್ಲಿರುವ ಚೀನಿಯರು ನಮ್ಮ ಭೂಪ್ರದೇಶದಿಂದ ಹಿಂದೆ ಸರಿಯುತ್ತಿದ್ದಾರೆಂದು ವರದಿಯಾಗಿದೆ. ಹಾಗಾದರೆ ನಮ್ಮ ಅಧಿಕಾರಿ ಮತ್ತು ಸೈನಿಕರನ್ನು ಹೇಗೆ ಕೊಲ್ಲಬಹುದು? ಈ ಬಗ್ಗೆ ಪ್ರಧಾನಿ ಮತ್ತು ರಕ್ಷಣಾ ಸಚಿವರು ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆಯೇ? ಹೇಗೆ ಮತ್ತು ಯಾವ ಸಂದರ್ಭಗಳಲ್ಲಿ ನಮ್ಮ ಅಧಿಕಾರಿ ಮತ್ತು ಸೈನಿಕರು ಹುತಾತ್ಮರಾದರು?
  • ನಮ್ಮ ಅಧಿಕಾರಿ ಮತ್ತು ಸೈನಿಕರು ನಿನ್ನೆ ರಾತ್ರಿ ಹತ್ಯೆಯಾಗಿದ್ದರೆ ಇಂದು ಮಧ್ಯಾಹ್ನ 12.52ಕ್ಕೆ ಹೇಳಿಕೆ ಏಕೆ ನೀಡಲಾಯಿತು. ಮತ್ತು 16 ನಿಮಿಷಗಳ ನಂತರ ಅಂದರೆ 1.08ಗಂಟಗೆ ಹೇಳಿಕೆಯನ್ನು ಏಕೆ ಬದಲಾಯಿಸಲಾಯಿತು?
  • ಪ್ರಧಾನಿ ಮತ್ತು ರಕ್ಷಣಾ ಸಚಿವರು ಏಪ್ರಿಲ್ ಮತ್ತು ಮೇ ತಿಂಗಳಿನಿಂದ ಚೀನೀಯರು ನಮ್ಮ ಭೂಪ್ರದೇಶವನ್ನು ಆಕ್ರಮಿಸಿಕೊಂಡಿರುವ ಬಗ್ಗೆ ಪದೇಪದೇ ಒಂದು ಕುತೂಹಲಕಾರಿ ಮೌನವನ್ನು ಕಾಯ್ದುಕೊಂಡಿದ್ದಾರೆ. ಹಾಗೆಯೇ ಸಾರ್ವಜನಿಕ ವಲಯದಲ್ಲಿ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದಾರೆ. ಪ್ರಧಾನಿ ಮತ್ತು ರಕ್ಷಣಾ ಸಚಿವರು ಈಗ ಹೇಳಲು ಮುಂದೆ ಬರುತ್ತಾರೆಯೇ?
  • ಏಪ್ರಿಲ್ ಮತ್ತು ಮೇ 2020ರ ನಂತರ ನಮ್ಮ ಭೂಪ್ರದೇಶವನ್ನು ಅಕ್ರಮವಾಗಿ ಎಷ್ಟು ಅತಿಕ್ರಮಣ ಮಾಡಿದ್ದಾರೆ? ನಮ್ಮ ಧೈರ್ಯಶಾಲಿ ಅಧಿಕಾರಿ ಮತ್ತು ಸೈನಿಕರನ್ನು ಚೀನಿಯರು ಹತ್ಯೆಗೈಯಲು ಕಾರಣವಾದ  ಸಂದರ್ಭಗಳು ಯಾವುವು? ಚೀನಿಯರನ್ನು ಬಲವಂತವಾಗಿ ಒತ್ತಾಯಿಸುವ ಬದಲು ವಾಸ್ತವ ನಿಯಂತ್ರಣ ರೇಖೆಯಲ್ಲಿ ಅವರ ಮೂಲ ಸ್ಥಾನಕ್ಕೆ ಹಿಮ್ಮೆಟ್ಟಿಸಲು ಪ್ರಧಾನಿ ಮುಂದೆ ಬಂದು ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆಯೇ?
  • ಭಾರತದ ರಾಷ್ಟ್ರೀಯ ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಗಂಭೀರವಾದ ಬದಲಾವಣೆಗಳನ್ನು ಹೊಂದಿರುವ ಈ ಸವಾಲಿನ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಹೇಗೆ ಪ್ರಸ್ತಾಪಿಸುತ್ತದೆ ಎಂದು ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ದೇಶಕ್ಕೆ ತಿಳಿಸುವರೇ?

ಇತ್ಯಾದಿ ಪ್ರಶ್ನೆಗಳನ್ನು ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳು, ದೇಶದ ಜನರು, ಜನ ಪ್ರತಿನಿಧಿಗಳು ಕೇಳಿದ್ದಾರೆ. ಅಲ್ಲದೇ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ.

“ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅಧಿಕಾರಿಗಳು ಮತ್ತು ಸೈನಿಕರನ್ನು ನೆನೆದು ನಾನು ಅನುಭವಿಸುವ ನೋವನ್ನು ಪದಗಳಿಂದ ವಿವರಿಸಲು ಸಾಧ್ಯವಿಲ್ಲ. ಅವರ ಎಲ್ಲ ಪ್ರೀತಿಪಾತ್ರರಿಗೆ ನನ್ನ ಸಂತಾಪ. ಈ ಕಷ್ಟದ ಸಮಯದಲ್ಲಿ ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ” ಎಂದು ರಾಹುಲ್‌ ಗಾಂಧಿ ಬರೆದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights