FactCheck: ಪ್ರಿಯಾಂಕಾ ಗಾಂಧಿಯವರು ಮುಸ್ಲೀಂ ಸಂಪ್ರದಾಯದಲ್ಲಿ ವಿವಾಹವಾದರಾ? ಮದುವೆ ಮಾಡಿಸಿದ್ದು ಮುಸ್ಲೀಂ ಮುಲ್ಲಾ?

ಎಎನ್‌ಸಿ (ಕಾಂಗ್ರೆಸ್‌) ಪಕ್ಷದ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಅವರ ಮದುವೆಯನ್ನು ಮುಸ್ಲಿಂ ಸಂಪ್ರದಾಯಗಳ ಪ್ರಕಾರ ಮಾಡಲಾಗಿದ್ದು, ಮದುವೆ ಮಾಡಿಸಿದವರು ಮುಸ್ಲಿಂ ಸಂಸದ ಶಫಿಕೂರ್ ರಹಮಾನ್ ವಿರ್ಕ್ ಎಂದು ಹಲವಾರು ಸಾಮಾಜಿಕ ಜಾಲತಾಣಿಗರು ದೂರಿದ್ದಾರೆ. ಅಲ್ಲದೆ, ಅದಕ್ಕೆ ಸಾಕ್ಷಿ ಎಂಬಂತೆ ಗಡ್ಡಧಾರಿ ಪೂಜಾರಿಯ ಚಿತ್ರವೊಂದನ್ನು ಷೇರ್ ಮಾಡಿದ್ದಾರೆ.

ಸ್ವತಂತ್ರ ಠಾಕೂರ್ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ “ಪ್ರಿಯಾಂಕಾ ಗಾಂಧಿಯವರ ವಿವಾಹದ ಸಮಯದಲ್ಲಿ ಮೌಲಾನಾ ಮತ್ತು ಸಂಸತ್ ಸದಸ್ಯ ಶಫಿಕುರ್ ರಹಮಾನ್ ವಿರ್ಕ್ ಅವರು ಕೆಲವು ಇಸ್ಲಾಮಿಕ್ ಆಚರಣೆಗಳನ್ನು ಮಾಡಲು ಏಕೆ ಆಹ್ವಾನಿಸಲಾಯಿತು?” ಎಂಬ ಆರೋಪ ಮಾಡಲಾಗಿದೆ. ಸ್ವಂತಂತ್ರ ಠಾಕೂರ್ ಬಿಜೆಪಿ ಬೆಂಬಲಿಗ ಎಂದು ತಮ್ಮ ಬಯೋ ನಲ್ಲಿ ಬರೆದುಕೊಂಡಿದ್ದಾರೆ.

https://www.facebook.com/kamal.garg.50159/posts/1367873103399852

ಫ್ಯಾಕ್ಟ್ ಚೆಕ್:

ಛಾಯಾಚಿತ್ರದಲ್ಲಿ ಗಡ್ಡವಿರುವ ವ್ಯಕ್ತಿಯ ಹೆಸರು ಪಂಡಿತ್ ಇಕ್ಬಾಲ್ ಕಿಶೆನ್ ರೆಯು. ಅವರು ಮೊದಲ ಕಾಶ್ಮೀರಿ ಪಂಡಿತ್ ಕ್ರಿಕೆಟ್ ಅಂಪೈರ್ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಂಡಿತ್ ಸ್ವರೂಪ್ ಕಿಶೆನ್ ರೆಯು ಅವರ ಸಹೋದರ. ಕಾಶ್ಮೀರ ಸೆಂಟಿನೆಲ್‌ನ 2009 ರ ಲೇಖನವೊಂದರ ಪ್ರಕಾರ, ಪಂಡಿತ್ ಇಕ್ಬಾಲ್ ಕಿಶೆನ್ ರೆಯು “ರೈಲ್ವೆಯಲ್ಲಿ ಉದ್ಯೋಗದಲ್ಲಿದ್ದರು ಮತ್ತು ಕಾಶ್ಮೀರಿ ಸಂಪ್ರದಾಯಗಳ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿದ್ದರು. ಅವರು ಕುಲ್ ಪುರೋಹಿತ್ ಅಭ್ಯಾಸ ಮಾಡುತ್ತಿದ್ದರು ಮತ್ತು ಅವರ ಜಜ್ಮಾನ್‌ಗಳ ಧಾರ್ಮಿಕ ಆಚರಣೆಗಳನ್ನು ಮಾಡುತ್ತಿದ್ದರು. 1996 ರಲ್ಲಿ ಕೆ.ಪಿ ಅವರ ಸಂಪ್ರದಾಯಗಳ ಪ್ರಕಾರ ರಾಬರ್ಟ್ ವಾದ್ರಾ ಅವರೊಂದಿಗೆ ಪ್ರಿಯಾಂಕಾ ಗಾಂಧಿಯವರ ವಿವಾಹವನ್ನು ಮಾಡಿದ ನಂತರ ಅವರು ಈ ಕೆಲಸವನ್ನು ತೊರೆದರು” ಎಂದು ಪತ್ರಿಕೆ ವರದಿ ಮಾಡಿದೆ. ಕುಲ್ ಪುರೋಹಿತ್ ಎಂದರೆ ಕುಟುಂಬದ ಪೂಜಾರಿ ಎಂದರ್ಥ.

ಕಾಶ್ಮೀರ ಪಂಡಿತ್ ಆದ ಇಕ್ಬಾಲ್ ಕಿಶೆನ್ ಅವರು ಗಾಂಧಿ ಕುಟುಂಬದ ಪೂಜಾರಿಗಳಾಗಿದ್ದು ಹಿಂದೂ ಸಂಪ್ರದಾಯದ ರೀತಿಯಲ್ಲಿಯೇ ವಿವಾಹದ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಅಲ್ಲದೇ ಪ್ರಿಯಾಂಕ ಗಾಂಧಿಯವರು ಜೂನ್ 15 ರಂದು ಹಂಚಿಕೊಂಡಿರುವ ಮದುವೆಯ ಫೋಟೊಗಳಲ್ಲಿ ಅವರು ಹಿಂದೂ ಧರ್ಮದ ಸಂಪ್ರದಾಯಗಳನ್ನು ಪಾಲಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights