ರೂಫ್ ಮೇಲೆ ಪತ್ನಿ ಕಾರಿನೊಳಗೆ ಪತಿಯಿಂದ ಅಪಯಕಾರಿ ಸ್ಟಂಟ್ : ವೀಡಿಯೋ ವೈರಲ್!
ಇತ್ತೀಚೆಗೆ ಚಿತ್ರ ವಿಚಿತ್ರವಾದ ಸ್ಟಂಟ್ ಗಳನ್ನು ಮಾಡುವ ಜನ ಅತೀ ಹೆಚ್ಚು ಕಾಣಸಿಗುತ್ತಿದ್ದಾರೆ. ದೇಶ ವಿದೇಶದಿಂದಲೂ ಇಂಥಹ ವೀಡಿಯೋಗಳು ಭಾರೀ ವೈರಲ್ ಆಗುತ್ತಿವೆ. ಇಂಥಹದ್ದೇ ಒಂದು ಟ್ರಸ್ಟ್ ಟೆಸ್ಟ್ ಸ್ಟಂಟ್ ಎಂಬ ಹೆಸರಿನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ರಷ್ಯಾ ಮೂಲದ ವ್ಯಕ್ತಿ ತನ್ನ ಪತ್ನಿಯೊಂದಿಗಿನ ವಿಲಕ್ಷಣ ಸಾಹಸದಿಂದ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ. ಸೆರ್ಗೆ ಕೊಸೆಂಕೊ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಕಾರಿನ ಛಾವಣಿ ಮೇಲೆ ತನ್ನ ಗೆಳತಿಯನ್ನು ಮಲಗಿಸಿ ಟೇಪ್ ಸುತ್ತಿದ್ದಾನೆ. ಜೊತೆಗೆ ಆಕೆಯ ಒಂದು ಕೈಗೆ ತನ್ನ ಕೈಯೊಂದಿಗೆ ಬೇಡಿ ಹಾಕಿಕೊಂಡು ಮತ್ತೊಂದು ಕೈಯಿಂದ ಮಾಸ್ಕೋ ಸುತ್ತಲೂ ಕಾರು ಓಡಿಸಿದ್ದಾನೆ.
ಸ್ಥಳೀಯ ಸುದ್ದಿವಾಹಿನಿ ಲೈಫ್ ಪ್ರಕಾರ, ಕೋಸೆಂಕೊ ದಂಪತಿಗಳು ಒಟ್ಟಾಗಿ ನಡೆಸುತ್ತಿರುವ ಹಲವು ಟ್ರಸ್ಟ್ ಪರೀಕ್ಷೆಗಳಲ್ಲಿ ಈ ಸ್ಟಂಟ್ ಒಂದು ಎಂದು ವಿವರಿಸಿವೆ.
ಸೋಮವಾರ ಈ ವೀಡಿಯೋ ಹಂಚಿಕೊಳ್ಳಲಾಗಿದ್ದು ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ 1.4 ಮಿಲಿಯನ್ ಜನ ವೀಕ್ಷಿಸಿದ್ದಾರೆ. ಅನೇಕರು ಕ್ಲಿಪ್‌ನೊಂದಿಗೆ ಖುಷಿಪಟ್ಟರೆ, ಇತರರು ಅಪಾಯಕಾರಿ ಸ್ಟಂಟ್ ಬಗ್ಗೆ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.
ರಷ್ಯಾದ ಟ್ರಾಫಿಕ್ ಪೋಲಿಸ್ ಈಗ ಈ ಘಟನೆಯ ತನಿಖೆ ನಡೆಸುತ್ತಿದೆ ಎಂದು ಲ್ಯಾಡ್‌ಬಿಬಲ್ ವರದಿ ಮಾಡಿದೆ.