5ರೂ. ಕೇಳಿದ ಪತ್ನಿ : 20 ತಿಂಗಳ ಮಗಳನ್ನು ಕೊಂದ ತಂದೆ…!

ಮಗುವಿಗೆ ಸಿಹಿ ಖರೀದಿಸಲು ಪತ್ನಿ ಪತಿಗೆ 5 ರೂ. ಕೇಳಿದ್ದಕ್ಕೆ ತಂದೆ ತನ್ನ 20 ತಿಂಗಳ ಮಗುವನ್ನು ಕೊಂದ ಘಟನೆ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ನಡೆದಿದೆ.

28 ವರ್ಷದ ವಿವೇಕ್ ಉಯಿಕೆ ಮಗುವನ್ನು ಕೊಂದ ಆರೋಪಿ. ಫೆಬ್ರವರಿ 2 ರಂದು ಮುಂಬೈನಿಂದ 900 ಕಿ.ಮೀ ದೂರದಲ್ಲಿರುವ ಲೋನಾರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಗು ಅಳುತ್ತಿದೆ ,’ಖಜಾ’ (ಗೋಧಿ ಹಿಟ್ಟಿನಿಂದ ಮಾಡಿದ ಸಿಹಿ ತಿಂಡಿ) ಕೇಳುತ್ತಿದೆ ಎಂದು ಪತಿಯನ್ನು ಪತ್ನಿ ಕೇಳಿದ್ದಾಳೆ. ಅಷ್ಟೇ ಮುಗಿತು ಕೋಪಗೊಂಡ ಪತಿ ಮಗುವನ್ನು ಎತ್ತಿಕೊಂಡು ಬಾಗಿಲ ಮೇಲೆ ಪದೇ ಪದೇ ಒಡೆದಿದ್ದಾನೆ.

“ನನ್ನ ಪತಿ ಸಂಜೆ ಮನೆಗೆ ಮರಳಿದಾಗ ನನ್ನ ಮಗಳು ವೈಷ್ಣವಿ ಅಳುತ್ತಿದ್ದಳು. ನಾನು ಅವಳಿಗೆ ಖಾಜಾವನ್ನು ಖರೀದಿಸಲು 5 ರೂ. ಕೇಳಿದೆ. ಆಗ ಪತಿ ವಿವೇಕ್ ಕೋಪಗೊಂಡರು. ಮಗುವನ್ನು ಎತ್ತಿಕೊಂಡು ಅವಳ ತಲೆಯನ್ನು ಬಾಗಿಲು ಮತ್ತು ಮೆಟ್ಟಿಲುಗಳ ಮೇಲೆ ಒಡೆದನು. ನಾನು ಅವನನ್ನು ತಡೆಯಲು ಪ್ರಯತ್ನಿಸಿದಾಗ ಅವನು ನನ್ನ ಮೇಲೂ ಹಲ್ಲೆ ಮಾಡಿದನು. ನಂತರ ನನ್ನ ಮಗಳು ತಿರೋಡಾ ಉಪ-ಜಿಲ್ಲಾ ಆಸ್ಪತ್ರೆಗೆ ದಾಖಲಾಯಿತು. ಅಷ್ಟರಲ್ಲಾಗಲೇ ಮಗು ತೀರಿ ಹೋಗಿತ್ತು, “ಎಂದು ನೊಂದ ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.

ತಾಯಿ ವರ್ಷಾ ತಿರೋಡಾ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ಧ ದೂರು ದಾಖಲಿಸಿದ್ದು, ಆತನನ್ನು ಬಂಧಿಸಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights