ಹುಟ್ಟುಹಬ್ಬದಂದು ಬೀಚ್ ನಲ್ಲಿ ನಗ್ನವಾಗಿ ಓಡಿದ ಬಾಲಿವುಡ್ ನಟ : ಫೋಟೋಸ್ ವೈರಲ್!
ಕೆಲ ಬಾರಿ ಕೆಲವರು ಕೊಂಚ ವಿಭಿನ್ನವಾಗಿ ಹುಟ್ಟುಹಬ್ಬದ ಆಚರಣೆ ಮೂಲಕ ಭಾರೀ ಸುದ್ದಿ ಮಾಡುತ್ತಾರೆ. ಈ ಸಾಲಿನಲ್ಲಿ ಬಾಲಿವುಡ್ ಖ್ಯಾತ ನಟ ಚಿರಯುವಕ ಮಿಲಿಂದ್ ಸೋಮನ್ ಕೂಡ ಒಬ್ಬರು. ಅಷ್ಟಕ್ಕೂ ಅವರು ಹುಟ್ಟುಹಬ್ಬದಂದು ಯಾವ ರೀತಿ ವೈರಲ್ ಆದ್ರು ಅನ್ನೋದನ್ನ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರೆಂಟಿ.
ಹೌದು… ಇಂದು (ನ4) ತಮ್ಮ 55ನೇ ಹುಟ್ಟುಹಬ್ಬ ಆಚರಿಸಿಕೊಂಡ ಮಿಲಿಂದ್ ಬೀಚ್ ನಲ್ಲಿ ಬೆತ್ತಲೆಯಾಗಿ ಓಡುವ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫಿಟ್ನೆಸ್ ಗಾಗಿ ನಾನಾ ಕರಸತ್ತು ಮಾಡುವ ಮಿಲಿಂದ್ ಈ ವಿಚಿತ್ರ ಫೋಟೋ ಹಂಚಿಕೆಯಿಂದ ಭಾರೀ ವೈರಲ್ ಆಗಿದ್ದಾರೆ.
ಯಾವುದೇ ಬಟ್ಟೆ ಧರಿಸದೇ ನಗ್ನವಾಗಿ ಬೀಚ್ ನಲ್ಲಿ ಓಡುತ್ತಿರುವ ಚಿತ್ರವನ್ನು ಕಂಡ ನೆಟ್ಟಿಗರು ಕಣ್ಣು ಕೆಂಪಾಗಿಸಿದ್ದಾರೆ. ಮಿಲಿಂದ್ ಗಿಂತ 25 ವರ್ಷ ಚಿಕ್ಕವಳಾದ ಪತ್ನಿ ಅಂಕಿತಾ ಈ ಫೋಟೋ ಶೂಟ್ ಮಾಡಿದ್ದಾರೆ.
ಈ ರೀತಿ ವಿಚಿತ್ರವಾದ ಫೋಟೋಗಳನ್ನು ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡ ಮಿಲಿಂದ್ ‘ ನನಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗಳಿಗೆ ಕೆಲವರು ಕಣ್ಣು ಕೆಂಪು ಮಾಡಿಕೊಂಡರೆ ಇನ್ನೂ ಕೆಲವರು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಸದ್ಯ ಗೋವಾದಲ್ಲಿ ಹುಟ್ಟುಹಬ್ಬಾಚರಿಸಿಕೊಳ್ಳುತ್ತಿರುವ ಮಿಲಿಂದ್ ಜೊತೆಗೆ ಪತ್ನಿ ಅಂಕಿತ ಕೂಡ ಪತಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.