ಆರ್ ಆರ್ ನಗರ ಉಪಚುನಾವಣೆ : ಹಗಲಿರುಳು ಶ್ರಮಿಸಿ ಕ್ಷೇತ್ರದ ಚಿತ್ರಣ ಬದಲಿಸಿದ್ರಾ ಡಿಕೆ ಬ್ರದರ್ಸ್..?

ಬಹುನಿರೀಕ್ಷೆ ಆರ್ ಆರ್ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ಮತದಾನ ಮಂಗಳವಾರ (ನ3) ಪೂರ್ಣಗೊಂಡಿದ್ದು ಫಲಿತಾಂಶದ ಕಡೆಗೆ ಎಲ್ಲರ ಗಮನ ನೆಟ್ಟಿದೆ. ನವೆಂಬರ್ 10 ರಂದು ಉಪಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಯಾವ ಪಕ್ಷ ಗೆಲ್ಲಲಿದೆ? ಯಾವ ಪಕ್ಷಗಳು ಸೋಲಲಿವೆ ಎಂದು ತಿಲಿಯಲಿದೆ. ಸಾಕಷ್ಟು ಕುತೂಹಲ ಕೆರಳಿಸಿರುವ ಉಪಚುನಾವಣೆ ಫಲಿತಾಂಶ ಯಾರ ಕೈ ಹಿಡಿಯಲಿದೆ ಎಂದು ಜನ ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಉಪಚುನಾವಣೆಯಲ್ಲಿ ಯಾವ ಪಕ್ಷಕ್ಕೆ ವಿಜಯಲಕ್ಷ್ಮಿ ಒಲಿಯಲ್ಲಿದ್ದಾಳೆ ಎನ್ನುವ ಲೆಕ್ಕಾಚಾರ ಆರಂಭಗೊಂಡಿದೆ.

ಆರ್.ಆರ್.ನಗರದಲ್ಲಿ ಬಿಜೆಪಿಯಿಂದ ಮುನಿರತ್ನ, ಕಾಂಗ್ರೆಸ್ ನಿಂದ ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಪತ್ನಿ ಕುಸುಮಾ ಹನುಮಂತರಾಯಪ್ಪ  ಹಾಗೂ ಜೆಡಿಎಸ್ ನಿಂದ ಕೃಷ್ಣಮೂರ್ತಿ ನಡುವೆ ಸ್ಪರ್ಧೆ ನಡೆಯುತ್ತಿದೆ.

ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪ್ರಚಾರಕ್ಕೆ ತೋರಿಸಿದ ಆಸಕ್ತಿಯನ್ನು ಜನ ಮತದಾನಕ್ಕೆ ತೋರಿಸಲಿಲ್ಲ ಎನ್ನುವುದು ಸ್ಪಷ್ಟವಾಗಿದೆ. ನಿರಂತರ ಪ್ರಚಾರಕ್ಕೆ ಬಸವಳಿದ ಮೂರೂ ಪಕ್ಷದ ಮುಖಂಡರು ಈಗ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಪ್ರತೀ ಬೂತ್ ನಲ್ಲಾದ ವೋಟಿಂಗ್ ಪ್ರಮಾಣವನ್ನು ಕ್ರೋಡೀಕರಿಸಿಕೊಂಡು ಯಾರಿಗೆ ವಿಜಯಲಕ್ಷ್ಮಿ ಒಲಿಯಲಿದ್ದಾಳೆ ಎನ್ನುವುದನ್ನು ಲೆಕ್ಕಹಾಕುತ್ತಿವೆ.

ಆರ್ ಆರ್ ನಗರದಲ್ಲಿ ಬಿಜೆಪಿ ಕಂಡ ಕನಸು ಕೊಂಚ ಮಟ್ಟಿಗೆ ಹುಸಿಯಾಗುವ ಹಾಗೆ ಕಾಣಿಸುತ್ತಿದೆ. ಅಷ್ಟರ ಮಟ್ಟಿಗೆ ಡಿಕೆ ಸಹೋದರರು ಹಗಲಿರುಳು ಶ್ರಮಿಸಿದ್ದಾರೆ. ಹೊಸ ಅಭ್ಯರ್ಥಿ ಕುಸುಮಾ ಗೆಲ್ಲಲು ಸಾಧ್ಯತೆ ಕಡಿಮೆ ಅಂದುಕೊಂಡಿದ್ದ ಬಿಜೆಪಿಗೆ ಡಿಕೆ ಬ್ರದರ್ಸ್ ಶಾಕ್ ಕೊಡುವಂತೆ ಕಾಣುತ್ತಿದೆ.ಅಷ್ಟರ ಮಟ್ಟಿಗೆ ಕ್ಷೇತ್ರದ ಚಿತ್ರಣವನ್ನು ಡಿಕೆ ಬ್ರದರ್ಸ್ ಬದಲಾಯಿಸಿದ್ದಾರೆ.

ಕ್ಷೇತ್ರದ ಒಟ್ಟು ಮತದಾರರಲ್ಲಿ ಮಹಿಳಾ ಮತದಾರರೇ ಹೆಚ್ಚಾಗಿರುವುದರಿಂದ ಕುಸುಮಾಗೆ ಹೆಚ್ಚು ಮತಗಳು ಬಿದ್ದಿರುವ ಲೆಕ್ಕಾಚಾರವಿದೆ. ಇತ್ತ ಆರ್ ಆರ್ ನಗರದಲ್ಲಿ ಮುನಿರತ್ನ ಹೆಚ್ಚು ಹಿಡಿತ ಹೊಂದಿರುವುದರಿಂದ ಮತದಾರರು ಮತ ನೀಡಿರುವ ಸಾಧ್ಯತೆ ಕೂಡ ಇದೆ.

 

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights