ಸಣ್ಣ ಆಂಜನೇಯನ ಗುಡಿ ಮುಂದೆ ದೊಡ್ಡ ಕುದುರೆಯ ಪ್ರಾರ್ಥನೆ : ಬೆರಗಾದ ಗ್ರಾಮಸ್ಥರು!

ಪ್ರಾಣಿಗಳಿಗೆ ದೇವರು ಕಾಣಿಸುತ್ತಾನೆ. ಅವು ದೇವರಂತೆ ಅನ್ನೋ ಮಾತುಗಳನ್ನ ಸಾಮಾನ್ಯವಾಗಿ ನೀವು ಕೇಳಿರುತ್ತೀರಾ. ಸಾಕು ಪ್ರಾಣಿಗಳನ್ನ ದೇವರೆಂದು ಪೂಜೆ ಕೂಡ ಮಾಡಿರುತ್ತೀರಾ. ಎಷ್ಟೋ ಪ್ರಾಣಿಗಳ ಪೂಜೆಯಿಂದ ಪವಾಡಗಳು ನಡೆದು ಹೋಗಿವೆ. ಮನುಷ್ಯರಲ್ಲಿ ಹಿಂದೆದೂ ಕಾಣದ ಬದಲಾವಣೆಗಳು ಆಗಿವೆ. ಹೀಗೊಂದು ಫೋಟೋದಲ್ಲಿ ಕುದುರೆಯೊಂದು ದೇವರ ಮುಂದೆ ಭಕ್ತಿಯಿಂದ ನಿಂತಿರುವುದನ್ನ ಕಂಡು ಜನ ಬೆರಗಾಗಿದ್ದಾರೆ. ಇಂತಹ ಅಪರೂಪದ ಫೋಟೋಗಳು ಸದ್ಯ ವೈರಲ್ ಆಗಿವೆ.

ಹೌದು…. ಬಾಗಲಕೋಟೆ ತಾಲೂಕಿನ ಮುರನಾಳ ಗ್ರಾಮದ ಪುನರ್ ವಸತಿ ಕೇಂದ್ರದ ಸಮೀಪವಿರುವ ಆಂಜನೇಯನ ಗುಡಿ ಮುಂದೆ ಕುದುರೆಯೊಂದು ತಲೆ ತಗ್ಗಿಸಿ ನಿಂತಿರುವ ಫೋಟೋಗಳು ಭಾರೀ ಚರ್ಚೆಗೆ ಕಾರಣವಾಗಿವೆ.  ಸಣ್ಣ ಆಂಜನೇಯನ ಗುಡಿಗೆ ತಲೆ ಕೊಟ್ಟು ಕುದುರೆ ಪ್ರಾರ್ಥನೆ ಮಾಡುವ ರೀತಿಯಲ್ಲಿ ಹದಿನೈದು ನಿಮಿಷಗಳ ಕಾಲ ನಿಂತುಕೊಂಡಿದೆ.

ಭಕ್ತಿಯಿಂದ ಕುದುರೆ ತಲೆ ತಗ್ಗಿಸಿ ಹಣೆಕೊಟ್ಟು ನಿಂತಿರುವುದನ್ನ ನೋಡಿದ ಜನ ಬೆರಗಾಗಿದ್ದಾರೆ. ಈ ದೃಶ್ಯಗಳನ್ನು ಶಾಲಾ ಶಿಕ್ಷಕನೊಬ್ಬ ಸೆರೆಹಿಡಿದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕುದುರೆಯ ಭಕ್ತಿ ಭಾವ ಕಂಡು ಸ್ಥಳೀಯ ಜನ ಮಾತ್ರವಲ್ಲದೇ ನೆಟ್ಟಿಗರು ಹುಬ್ಬೇರಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights