‘ಜಗಮೆ ತಂಧಿರಮ್’ ಮತ್ತು ‘ಕೋಲ್ಡ್ ಕೇಸ್’: 5 ತಮಿಳು ಮತ್ತು ಮಲಯಾಳಂ ಸಿನಿಮಾಗಳು ಓಟಿಟಿಯಲ್ಲಿ ಬಿಡುಗಡೆ!
ಧನುಷ್ ಅವರ ತಮಿಳು ಚಿತ್ರ ‘ಜಗಮೆ ತಂಧಿರಮ್’ ಇಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಇದು ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾದ ಧನುಷ್ ಅವರ ಮೊದಲ ಸಿನಿಮಾವಾಗಿದೆ. ಚಿತ್ರಮಂದಿರಗಳು ಯಾವಾಗ ಮತ್ತೆ ತೆರೆಯುತ್ತವೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣದಿಂದಾಗಿ ನೇರವಾಗಿ ಓಟಿಟಿಯಲ್ಲಿ ಸಿನಿಮಾ ರಿಲೀಸ್ ಮಾಡಿರುವುದಾಗಿ ಚಿತ್ರತಂಡ ಹೇಳಿದೆ.
ಓಟಿಟಿ ಬಿಡುಗಡೆಯಾಗಲಿರುವ ತಮಿಳು ಮತ್ತು ಮಲಯಾಳಂ ಚಿತ್ರಗಳ ಪಟ್ಟಿ ಇಲ್ಲಿದೆ:
ಜಗಮೆ ತಂಧಿರಮ್
2019 ರಲ್ಲಿ ಬಿಡುಗಡೆಯಾದ ‘ಪೆಟ್ಟಾ’ ಸಿನಿಮಾದ ನಂತರ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರ ನಿರ್ದೇಶನದ ಮೊತ್ತೊಂದು ಸಿನಿಮಾ ಇದಾಗಿದೆ. ನಟ ಧನುಷ್ ಮತ್ತು ನಟಿ ಐಶ್ವರ್ಯಾ ಲೆಕ್ಷ್ಮಿ ಅವರಿರುವ ಈ ಮಲ್ಟಿ-ಸ್ಟಾರ್ ಚಿತ್ರವು ಮುಖ್ಯವಾಗಿ ಯುನೈಟೆಡ್ ಕಿಂಗ್‌ಡಂನಲ್ಲಿ ಚಿತ್ರೀಕರಿಸಲ್ಪಟ್ಟಿದೆ. ನೆಟ್‌ಫ್ಲಿಕ್ಸ್ ಇಂಡಿಯಾದಲ್ಲಿ ಜೂನ್ 18 ರಂದು ಮಧ್ಯಾಹ್ನ 12.30 ಕ್ಕೆ 190 ದೇಶಗಳಲ್ಲಿ 17 ಭಾಷೆಗಳಲ್ಲಿ ಬಿಡುಗಡೆಯಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಮಲಿಕ್
ಫಹಾದ್ ಫಾಸಿಲ್ ಅವರ ‘ಮಲಿಕ್’ ಈ ವರ್ಷದ ಮೇ 13 ರಂದು ಮೋಹನ್ ಲಾಲ್ ಅವರ ‘ಮರಕ್ಕರ್’ ಸಿನಿಮಾದೊಂದಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಜ್ಜಾಗಿತ್ತು. ಆದರೆ, ಚಿತ್ರಮಂದಿರಗಳನ್ನು ಬಂದ್ ಮಾಡಿದ್ದರಿಂದಾಗಿ ಸಿನಿಮಾ ಬಿಡುಗಡೆಯನ್ನು ರದ್ದುಗೊಳಿಸಲಾಗಿತ್ತು. ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ನಿರ್ಮಾಪಕ ಆಂಟೋ ಜೋಸೆಫ್ ಅವರು ಸಿನಿಮಾವನ್ನು ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದರು. ಆದರೆ, ಇನ್ನೂ ದಿನಾಂಕವನ್ನು ಬಹಿರಂಗಪಡಿಸಿಲ್ಲ.
ಕೋಲ್ಡ್ ಕೇಸ್
ಇದು ಆಂಥೋ ಜೋಸೆಫ್ ನಿರ್ಮಿಸಿದ ಪೃಥ್ವಿರಾಜ್ ಅವರ ತನಿಖಾ ಥ್ರಿಲ್ಲರ್ ಸಿನಿಮಾ. ಹೆಚ್ಚಿನ ವಿವರಗಳು ಮತ್ತು ಚಿತ್ರದ ಬಿಡುಗಡೆಯ ದಿನಾಂಕಕ್ಕಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ಸುಮೋ
ನಟ ಶಿವ ಮತ್ತು ಪ್ರಿಯಾ ಆನಂದ್ ನಟಿಸಿರುವ ಮುಂಬರುವ ಹಾಸ್ಯ ನಾಟಕ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಯ ದಿನಾಂಕದ ಬಗ್ಗೆ ನಿರ್ಮಾಪಕರಿಂದ ಅಧಿಕೃತ ದೃಢೀಕರಣ ಇನ್ನೂ ಆಗಿಲ್ಲ. ಈ ಚಿತ್ರವು 2019 ರಿಂದ ಬಿಡುಗಡೆಯ ದಿನಾಂಕಕ್ಕಾಗಿ ಕಾಯುತ್ತಿದೆ.
ತುಗ್ಲಕ್ ದರ್ಬಾರ್
ರಾಜಕೀಯ ಹಾಸ್ಯ ನಾಟಕೀಯ ಸಿನಿಮಾ ತುಗ್ಲಕ್ ದರ್ಬಾರ್. ಮಂಜಿಮಾ ಮೋಹನ್, ರಾಶಿ ಖನ್ನಾ, ಕರುಣಕರನ್, ಮತ್ತು ಸಮುಕ್ತಾ ನಟಿಸಿರುವ ಈ ಸಿನಿಮಾ, ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅದರ ಬಿಡುಗಡೆಯ ಅಧಿಕೃತ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.
ಇದನ್ನೂ ಓದಿ: ಚೆಸ್ ಚಾಂಪಿಯನ್ ವಿಶ್ವನಾಥ್ ಆನಂದ್‌ಗೆ ಮೋಸ ಮಾಡಿದ್ರಾ ನಟ ಸುದೀಪ್? ಚೆಸ್ ಕೋಚ್ ಹೇಳಿದ್ದೇನು?