ನಟಿ ದಿಯಾ ಮಿರ್ಜಾ ಮತ್ತು ವೈಭವ್ ರೇಖಿ ದಂಪತಿಗೆ ಗಂಡು ಮಗು ಜನನ..!
ನಟಿ ದಿಯಾ ಮಿರ್ಜಾ ಮತ್ತು ವೈಭವ್ ರೇಖಿ ದಂಪತಿಗೆ ಗಂಡು ಮಗು ಜನನವಾಗಿದ್ದು ಮೊದಲ ಫೋಟೋ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಗನ ಜನನವನ್ನು ಘೋಷಿಸಿದ ದಿಯಾ ಮಿರ್ಜಾ ಮತ್ತು ವೈಭವ್ ರೇಖಿ ಮಗುವಿನ ಹೆಸರನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಮಗನಿಗೆ ಅವ್ಯಾನ್ ಆಜಾದ್ ರೇಖಿ ಎಂದು ಕರೆದಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ, ದಿಯಾ ಮಗ ಮೇ 14 ರಂದು ಜನಿಸಿದ. ಪ್ರಸ್ತುತ ಐಸಿಯುನಲ್ಲಿದ್ದಾನೆ ಎಂದು ಹಂಚಿಕೊಂಡಿದ್ದಾರೆ.
“ಗರ್ಭಾವಸ್ಥೆಯಲ್ಲಿ ನಾನು ಸೋಂಕಿಗೆ ಒಳಗಾಗಬಹುದು. ಅದು ಜೀವಕ್ಕೆ ಅಪಾಯಕಾರಿಯಾಗಬಹುದು ಎಂದು ತಿಳಿದಿದ್ದೆ. ಆದರೆ ಅದೃಷ್ಟವಶಾತ್, ನಮ್ಮ ವೈದ್ಯರ ಸಮಯೋಚಿತ ಆರೈಕೆಯಿಂದ ನಮ್ಮ ಮಗು ಸುರಕ್ಷಿತವಾಗಿ ಜನಿಸಿದೆ” ಎಂದು ಬರೆದಿದ್ದಾರೆ.