ವ್ಯಾಕ್ಸಿನೇಟ್ ಕರ್ನಾಟಕ ಅಭಿಯಾನ; ಮೂವರು ಮಕ್ಕಳಿಗೆ ಬಹುಮಾನ ಘೋಷಣೆ!

ಕೋವಿಡ್ ಲಸಿಕೆ‌ ಪಡೆಯುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಕಾಂಗ್ರೆಸ್‌ ಪಕ್ಷವು ವ್ಯಾಕ್ಸಿನೇಟ್ ಕರ್ನಾಟಕ ಅಭಿಯಾನ ಆರಂಭಿಸಿದೆ. ಮಕ್ಕಳನ್ನು ಕೇಂದ್ರೀಕರಿಸಿ ಆರಂಭಿಸಿರುವ ಈ ಅಭಿಯಾನದಲ್ಲಿ ಮಕ್ಕಳು ಜನರಿಗೆ ವ್ಯಾಕ್ಸಿನ್‌ ಹಾಕಿಸಿಕೊಳ್ಳಲು ಪ್ರೇರೇಪಿಸಿ ವಿಡಿಯೋ ಮಾಡಿ ಕಳುಹಿಸಲು ಸೂಚಿಸಲಾಗಿದೆ. ಈ ರೀತಿಯಲ್ಲಿ ಉತ್ತಮ ವಿಡಿಯೋ ಕಳಿಸಿದವರ ಪೈಕಿ ಮೂವರು ವಿಜೇತರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೋಮವಾರ ಪ್ರಕಟಿಸಿದ್ದಾರೆ.

ಬೆಂಗಳೂರಿನ ಅಕ್ಷಿತ್ ಕುಮಾರ್ ಮತ್ತು ಎಂ.ಶ್ರೇಯಾ ಹಾಗೂ ಕೊಡಗು ಜಿಲ್ಲೆಯ ಆರ್ಲಿನ್ ಫರ್ನಾಂಡೀಸ್ ಅವರು ಸ್ಪರ್ಧೆಯ ವಿಜೇತರು.

ಕೋವಿಡ್ ವ್ಯಾಕ್ಸಿನ್ ಪಡೆಯುವಂತೆ ವಯಸ್ಕರನ್ನು ಪ್ರೇರೇಪಿಸುವಲ್ಲಿ ಈ ಮಕ್ಕಳು ಉತ್ತಮ ವಿಡಿಯೋಗಳನ್ನು ಮಾಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಪ್ರಶಂಸಿಸಿದ್ದಾರೆ.

ಅಭಿಯಾನ ಆರಂಭದ ಮೊದಲ ದಿನವೇ 5 ಸಾವಿರಕ್ಕೂ ಅಧಿಕ ಪ್ರವೇಶಗಳು ಬಂದಿದ್ದವು. 2ನೇ ದಿನ ಈ ಸಂಖ್ಯೆ ದುಪ್ಪಟ್ಟಾಗಿದೆ.
ವಿನೂತನವಾದ ಈ ವಿಡಿಯೋ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ರಾಜ್ಯದ 17 ವರ್ಷದೊಳಗಿನ ಎಲ್ಲ 95 ಲಕ್ಷ ಮಕ್ಕಳಿಗೂ ಅವಕಾಶ ಕಲ್ಪಿಸಲಾಗಿದೆ.

ಉತ್ತಮವಾದ 100 ವಿಡಿಯೋಗಳಿಗೆ ತಲಾ ಒಂದು ಆ್ಯಂಡ್ರಾಯ್ಡ್ ಟ್ಯಾಬ್ಲೆಟ್ ಗಳನ್ನು ಬಹುಮಾನವಾಗಿ ನೀಡಲಾಗುತ್ತಿದೆ.
ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮಕ್ಕಳು ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ವಯಸ್ಕರನ್ನು ಪ್ರೇರೇಪಿಸುವ 2 ನಿಮಿಷಗಳ ವಿಡಿಯೋ ಮಾಡಬೇಕು. ಈ ವಿಡಿಯೋ ಗಳನ್ನು #vaccinatekarnataka ಹ್ಯಾಸ್ ಟ್ಯಾಗ್ ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಜತೆಗೆ, www.vaccinatekarnataka.in ಗೆ ಕಳಿಸಬೇಕು.

Read Also: ಏನಿದು ಗ್ರೀನ್‌ ಫಂಗಸ್; ಇದರ ಲಕ್ಷಣಗಳೇನು? ಇದರಿಂದಾಗುವ ಸಮಸ್ಯೆಗಳೇನು? ಡೀಟೇಲ್ಸ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights