ಕರ್ನಾಟಕದಲ್ಲಿ ಮಾತ್ರವಲ್ಲ ರಾಜಸ್ಥಾನದಲ್ಲೂ ಬಿಜೆಪಿ ಅಂತರ್ಯುದ್ಧ; ಹೋರ್ಡಿಂಗ್‌ನಿಂದ ಬಹಿರಂಗ!

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ, ಸಿಎಂ ಬಿಎಸ್‌ವೈ ವಿರುದ್ದ ಹೇಳಿಕೆಗಳು, ಅಸಮಾಧಾನ ಎಲ್ಲವೂ ಬಹಿರಂಗಗೊಂಡಿವೆ. ಇದೀಗ ರಾಜಸ್ಥಾನದಲ್ಲೂ ಬಿಜೆಪಿಯೊಳಗಿನ ಅಂತರ್‌ ಕಲಹದ ಹೊಗೆಯಾಡುತ್ತಿದೆ. ರಾಜಸ್ಥಾನದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಹಾಕಲಾಗಿರುವ ಹೊಸ ಹೋರ್ಡಿಂಗ್‌ನಲ್ಲಿ ಮಾಜಿ ಸಿಎಂ, ಬಿಜೆಪಿ ನಾಯಕಿ ವಸುಂಧರಾ ರಾಜೆ ಅವರ ಫೋಟೋಗಳು ಕಾಣೆಯಾಗಿವೆ. ರಾಜ್ಯ ನಾಯಕತ್ವದಲ್ಲಿನ ಬಿರುಕನ್ನು ಬಹಿರಂಗ ಪಡಿಸಿದೆ ಎಂದು ಹೇಳಲಾಗಿದೆ.

ಬಿಜೆಪಿ ಕಚೇರಿ ಎದುರು ಹಾಕಲಾಗಿರುವ ಹೊಸ ಹೋರ್ಡಿಂಗ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ಸತೀಶ್ ಪೂನಿಯಾ ಮತ್ತು ಪ್ರತಿಪಕ್ಷದ ನಾಯಕ ಗುಲಾಬ್‌ಚಂದ್ ಕಟಾರಿಯಾ ಅವರ ಫೋಟೋಗಳಿವೆ. ಆದರೆ ವಸುಂಧರಾ ರಾಜೆಯವರ ಫೋಟೋ ಕಾಣೆಯಾಗಿದೆ.

ಹೊಸ ಪೋಸ್ಟರ್‌ನಲ್ಲಿ ಅಮಿತ್ ಷಾ ಅವರ ಫೋಟೋ ಕೂಡ ಕಾಣೆಯಾಗಿದೆ. ಇದಕ್ಕೂ ಮುನ್ನ ಪಕ್ಷದ ಪ್ರಧಾನ ಕಚೇರಿಯಲ್ಲಿ ಹಾಕಲಾಗಿದ್ದ ಹೋರ್ಡಿಂಗ್‌ನಲ್ಲಿ ಮಾಜಿ ಸಿಎಂ ವಸುಂಧರಾ ರಾಜೆ ಮತ್ತು ಪ್ರತಿಪಕ್ಷದ ಉಪನಾಯಕ ರಾಜೇಂದ್ರ ರಾಥೋಡ್, ಸತೀಶ್ ಪೂನಿಯಾ ಮತ್ತು ಗುಲಾಬ್‌ಚಂದ್ ಕಟಾರಿಯಾ ಅವರ ಫೋಟೋಗಳೂ ಇದ್ದವು.

ರಾಜಸ್ತಾನದ ಉಪಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮಹಾರಾಣಾ ಪ್ರತಾಪ್ ಬಗ್ಗೆ ಗುಲಾಬ್ ಚಂದ್ ಕಟಾರಿಯಾ ಹೇಳಿಕೆ ನೀಡಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಕರ್ಣಿ ಸೇನೆ ಕಾರ್ಯಕರ್ತರು ಏಪ್ರಿಲ್ 13ರಂದು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಹಾಕಲಾಗಿದ್ದ ಮುಖ್ಯ ಹೋರ್ಡಿಂಗ್‌ನಲ್ಲಿ ಗುಲಾಬ್‌ಚಂದ್ ಕಟಾರಿಯಾ ಅವರ ಫೋಟೋ ಮೇಲೆ ಕಪ್ಪು ಇಂಕ್‌ ಚೆಲ್ಲಿದ್ದರು.

ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿರುವ ವಸುಂಧರಾ ರಾಜೆ ಅವರ ಫೋಟೋ ಹೋರ್ಡಿಂಗ್‌ನಲ್ಲಿ ಇಲ್ಲದಿರುವುದು ರಾಜ್ಯ ಕೇಸರಿ ಶಿಬಿರದೊಳಗಿನ ಆಂತರಿಕ ಕಲಹ ಜಗಜ್ಜಾಹೀರು ಮಾಡಿದೆ.

Read Also: ಮೋದಿಯ ಗಡ್ಡ ತೆಗೆಸಲು 100 ರೂ ಮನಿ ಆರ್ಡರ್‌ ಮಾಡಿದ ಚಾಯ್‌ ವಾಲಾ!

Spread the love

Leave a Reply

Your email address will not be published. Required fields are marked *