Bigg Boss : ಕುಚ್ ಕುಚ್ ಅಂತಿದೆ ರಘು-ವೈಷ್ಣವಿ ಹೃದಯ..!

ಬಿಗ್ ಬಾಸ್ ಮನೆಯಲ್ಲಿ ಜೋಡಿ ಹಕ್ಕಿಗಳ ಕಲರವ ಶುರುವಾಗಿದೆ. ಮನೆಯ ಸ್ಪರ್ಧಿಗಳಾದ ದಿವ್ಯಾ ಸುರೇಶ್- ಲ್ಯಾಗ್ ಮಂಜಾ, ದಿವ್ಯಾ ಉರುಡುಗ- ಅರವಿಂದ್ ಹಾಗೂ ರಘು- ವೈಷ್ಣವಿ ಹೃದಯ ಕುಚ್ ಕುಚ್ ಅಂತಿದೆ.

ಹೌದು… ಮನೆಯ ಸದಸ್ಯರು ಜೋಡಿ ಟಾಸ್ಕ್ ಬಳಿಕ ಬಾಯ್ಸ್ ಹಾಸ್ಟೆಲ್ -ಗರ್ಲ್ಸ್ ಹಾಸ್ಟೆಲ್ ಆಟ ಶುರು ಮಾಡಿದ್ದಾರೆ. ಹುಡುಗಿಯರ ಹಾಸ್ಟೆಲ್ ವಾರ್ಡನ್ ಆನಿ ನಿಧಿ ಸುಬ್ಬಯ್ಯ ಹಾಗೂ ಹುಡುಗರ ಹಾಸ್ಟಲ್ ವಾರ್ಡನ್ ಆಗಿ ಪ್ರಶಾಂತ ಸಂಬರಗಿ ಆಡುತ್ತಿದ್ದಾರೆ. ಈ ಟಾಸ್ಕ್ ನಲ್ಲಿ ಹುಡುಗರು ಹುಡುಗಿರಿಗೆ ಕಾಡಿಸಬಹುದು ರೇಗಿಸಬಹುದು, ಪ್ರಪೋಸ್ ಕೂಡ ಮಾಡಬಹುದು.

ಹೀಗಾಗಿ ಲ್ಯಾಗ್ ಮಂಜಾ ದಿವ್ಯಾ ಸುರೇಶ್ ಗೆ, ಅರವಿಂದ್ ದಿವ್ಯಾ ಉರುಡುಗಗೆ ಹಾಗೂ ರಘು ವೈಷ್ಣವಿಗೆ ಪ್ರಮೋಸ್ ಮಾಡುವ ಮೂಲಕ ಪ್ರೇಮ ಪತ್ರಗಳನ್ನು ಹಂಚಿಕೊಂಡರು. ಈ ಟಾಸ್ಕ್ ನಲ್ಲಿ  ತಮ್ಮ ಕಾಲೇಜು ದಿನಗಳನ್ನು ಮನೆಯ ಸದಸ್ಯರು ನೆನಪಿಸಿಕೊಂಡರು.

ಈ ಟಾಸ್ಕ್ ನಲ್ಲಿ ವಿಭಿನ್ನವಾಗಿ ಯಾರು ಅಭಿನಯಿಸುತ್ತಾರೋ ಅವರು ಮುಂದಿನ ಕ್ಯಾಪ್ಟನ್ ಟಾಸ್ಕ್ ಗೆ ಅರ್ಹರಾಗುವುದರಿಂದ ಮನೆಯ ಎಲ್ಲಾ ಸದಸ್ಯರು ಬಿಗ್ ಬಾಸ್ ಅಭಿಮಾನಿಗಳಿಗೆ ಮನರಂಜನೆ ನೀಡಿದರು.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights