ಕರುನಾಡಿನಲ್ಲಿ ಕೈ ಮೀರಿದ ಕೊರೊನಾ : ಮಂಗಳವಾರ ರಾಜ್ಯದ ಭವಿಷ್ಯ : ನೈಟ್ ಕರ್ಫ್ಯೂ ಮುಂದುವರಿಕೆ!

ರಾಜ್ಯದಲ್ಲಿ ಕೊರೊನಾ ಮಿತಿ ಮೀರಿ ಹೋಗುತ್ತಿರುವುದರಿಂದ ಕೊರೊನಾ ನೈಟ್ ಕರ್ಫ್ಯೂ ದಿನಾಂಕ ಮುಗಿದ ಬಳಿಕ ಚರ್ಚೆ ಮಾಡಿ ಲಾಕ್ ಡೌನ್ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಇಂದು ಅಧಿಕಾರಿಗಳ ಜೊತೆ ಸಿಎಂ ಯಡಿಯೂರಪ್ಪ ಚರ್ಚೆ ನಡೆಸಿದ ನಂತರ ಮಾತನಾಡಿ, ” ಕೊರೊನಾ ನೈಟ್ ಕರ್ಫ್ಯೂ ದಿನಾಂಕ ಮುಗಿದ ಬಳಿಕ ಚರ್ಚೆ ಮಾಡಿ ಲಾಕ್ ಡೌನ್ ಬಗ್ಗೆ ನಿರ್ಧರಿಸಲಾಗುತ್ತದೆ. ರಾಜ್ಯದ 8 ನಗರಗಳಲ್ಲಿ ಕರ್ಫ್ಯೂ ಮುಂದುವರಿಕೆ ಮಾಡುತ್ತೇವೆ. ಏಪ್ರಿಲ್ 20ರ ನಂತರ ಇನ್ಯಾವ ಜಿಲ್ಲೆಯವರೆಗೂ ವಿಸ್ತರಿಸಬೇಕು ಎಂದು ತೀರ್ಮಾನಿಸುತ್ತೇವೆ” ಎಂದಿದ್ದಾರೆ.

ಜೊತೆಗೆ “ದೆಹಲಿ, ಮಹಾರಾಷ್ಟ್ರಕ್ಕೆ ಕೊರೊನಾ ನಿಯಮಗಳನ್ನು ನಮ್ಮ ರಾಜ್ಯಕ್ಕೆ ಹೋಲಿಸಬೇಡಿ. ಯಾಕೆಂದರೆ ನಮ್ಮ ರಾಜ್ಯದ ಪರಿಸ್ಥಿತಿ ಬೇರೆ. ಏಪ್ರಿಲ್ 20 ವರೆಗೆ ಯಾವ ಬದಲಾವಣೆ ಇಲ್ಲ. ನಂತರ ಚರ್ಚೆ ಮಾಡುತ್ತೇವೆ ” ಎಂದಿದ್ದಾರೆ.

ಇದೇ ಭಾನುವಾರ 18ಕ್ಕೆ ತಜ್ಞರು ಹಾಗೂ ವಿಪಕ್ಷ ನಾಯಕರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.

ಒಟ್ಟಿನಲ್ಲಿ ಮಂಗಳವಾರ ರಾಜ್ಯದ ಭವಿಷ್ಯ ನಿರ್ಧಾರವಾಗಲಿದ್ದು, ಒಂದು ವೇಳೆ ಕೊರೊನಾ ಪ್ರಕರಣಗಳ ಸಂಖ್ಯೆ ಹೀಗೆ ಹೆಚ್ಚಾಗುತ್ತಾ ಹೋದರೆ ಕಠಿಣ ಕ್ರಮ ಕೈಗೊಳ್ಳುವುದರಲ್ಲಿ ಅನುಮಾನವೇ ಇಲ್ಲ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights