ನಾಯಿಯನ್ನು ಅಟ್ಟಾಡಿಸಿಕೊಂಡು ಬಂದು ಶೌಚಾಲಯದಲ್ಲಿ ಬಂಧಿಯಾದ ಚಿರತೆ..!

ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಚಿರತೆ ಕಾಣಿಸಿಕೊಂಡು ಜನರ ನಿದ್ದೆಗೆಡಿಸಿತ್ತು. ಅದೃಷ್ಟವಶಾತ ಅರಣ್ಯಾಧಿಕಾರಿಗಳು ಚಿರತೆಯನ್ನು ಹಿಡಿದು ಕೊಂಚ ನಿಟ್ಟುಸಿರು ಬಿಡುವಂತಾಯಿತು. ಆದರೆ ಮನೆಯೊಳಗೆ ಚಿರತೆ ನುಗ್ಗಿದ್ರೆ ಹೇಗಿರುತ್ತೆ? ಯೋಚನೇ ಮಾಡೋದಕ್ಕೂ ಭಯಯುಂಟಾಗುತ್ತೆ ಅಲ್ವಾ..? ಹೀಗೊಂದು ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕೈಕಂಬ ಗ್ರಾಮದಲ್ಲಿ ನಡೆದಿದೆ.

ಹೌದು.. ಚಿರತೆಯೊಂದು ನಾಯಿಯನ್ನು ಅಟ್ಟಾಡಿಸಿಕೊಂಡು ಶೌಚಾಲಯಕ್ಕೆ ನುಗ್ಗಿದೆ. ರೇಗಪ್ಪ ಎಂಬವರ ಮನೆಯ ಟಾಯ್ಲೆಟ್ ನಲ್ಲಿ ಚಿರತೆ ಮತ್ತು ನಾಯಿ ಮಲಗಿದ ದೃಶ್ಯ ವೈರಲ್ ಆಗಿದೆ. ನಾಯಿ ಹಿಡಿಯಲು ಮನೆಯ ಟಾಯ್ಲೆಟ್ ಚಿರತೆ ನುಗ್ಗಿದೆ. ಚಿರತೆ ನುಗ್ಗುತ್ತಿದ್ದಂತೆ ಗಾಬರಿಗೊಂಡ ಮನೆ ಮಂದಿ ಹೊರಗಡೆ ಓಡಿ ಬಂದಿದ್ದಾರೆ.

ಒಳಗಡೆ ಓಡಿ ಬಂದ ಚಿರತೆ ಮತ್ತು ನಾಯಿ ಎರಡನ್ನೂ ಮನೆಯವರು ಕೂಡಿ ಹಾಕಿದ್ದಾರೆ. ಹೀಗಾಗಿ ಟಾಯ್ಲೆಟ್ ಒಳಗಡೆ ಚಿರತೆ ಸಿಲುಕಿಕೊಂಡಿದೆ. ಚಿರತೆ ಮತ್ತು ನಾಯಿ ಒಂದೇ ಕಡೆ ಇರುವ ಫೋಟೋ ವೈರಲ್ ಆಗಿದೆ. ಸ್ಳಳಕ್ಕೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳು ದೌಡಾಯಿಸಿದ್ದು, ಚಿರತೆ ಸೆರೆಗೆ ಬಲೆ ಬೀಸಿದ್ದಾರೆ.

Spread the love

Leave a Reply

Your email address will not be published. Required fields are marked *