ಏರೋ ಇಂಡಿಯಾ 2021ಕ್ಕೆ ಚಾಲನೆ: ಯಲಹಂಕ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ ಕಲರವ..

ವಿಶ್ವದ ಮೊಟ್ಟ ಮೊದಲ ಹೈಬ್ರಿಡ್ ಹಾಗೂ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ-2021’ಗೆ ಯಲಹಂಕ ವಾಯುನೆಲೆಯಲ್ಲಿ ಚಾಲನೆ ನೀಡಲಾಗಿದೆ. ಎಚ್ಎಎಲ್ ನಿರ್ಮಿತ ಸ್ವದೇಶಿ ವಿಮಾನಗಳ ‘ಆತ್ಮ ನಿರ್ಭರ ಭಾರತ್’ ಹಾಗೂ ಸೂರ್ಯ ಕಿರಣ್-ಸಾರಂಗ್ ವಿಮಾನಗಳ ಜಂಟಿ ಪ್ರದರ್ಶನ ಸೇರಿದಂತೆ ಮೈನವಿರೇಳಿಸುವ ಹಲವು ವೈಶಿಷ್ಟ್ಯಗಳೊಂದಿಗೆ 13ನೇ ಆವೃತ್ತಿಯ ವೈಮಾನಿಕ ಪ್ರದರ್ಶನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದರು. ಈ ವೇಳೆ ಸಿಎಂ ಯಡಿಯೂರಪ್ಪ ಹೃಹ ಸಚಿವ ಬಸವರಾಜ ಬೊಮ್ಮಾಯಿ, ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಉಪಸ್ಥಿತರಿದ್ರು.

ಚಾಲನೆ ವೇಳೆ ರಾಷ್ಟ್ರಧ್ವಜ, ಭಾರತೀಯ ವಾಯು ಸೇನೆ ಹಾಗೂ ಏರೋ ಇಂಡಿಯಾ 2021ರ ಧ್ವಜ ಹೊತ್ತ ಎಲ್ ಯುಹೆಚ್ ಹೆಲಿಕಾಪ್ಟರ್ ಗಳು ಮೊದಲು ಪ್ರದರ್ಶನ ನೀಡಿದವು. ಈ ಬಾರಿ ಒಟ್ಟು 63 ವಿಮಾನಗಳಿಂದ ಪ್ರದರ್ಶನ ನಡೆಯಲಿದ್ದು ದಿನಕ್ಕೆ ಎರಡು ಬಾರಿ 42 ವಿಮಾನಗಳು ಹಾರಾಟ ನಡೆಸಿ ವೈಮಾನಿಕ ಪ್ರದರ್ಶನ ನೀಡಲಿವೆ.

ಕೊರೊನಾ ಪರಿಣಾಮ ಐದು ದಿನಗಳ ವೈಮಾನಿಕ ಪ್ರದರ್ಶನ ಮೂರು ದಿನಕ್ಕೆ ಸೀಮಿತಗೊಳಿಸಲಾಗಿದೆ. ಕೊರೊನಾ ನೆಗೆಟಿವ್ ಪರೀಕ್ಷೆಯೊಂದಿಗೆ ಪ್ರತಿ ದಿನ ವೈಮಾನಿಕ ಪ್ರದರ್ಶನ ವೀಕ್ಷಣಾ ಸ್ಥಳಕ್ಕೆ 3 ಸಾವಿರ ಮಂದಿ ಹಾಗೂ ವಸ್ತು ಪ್ರದರ್ಶನ ಮಳಿಗೆಗಳಲ್ಲಿ ದಿನವೊಂದಕ್ಕೆ 15 ಸಾವಿರ ಮಂದಿ ಭೇಟಿ ನೀಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರುಗಳೊಮದಿಗೆ ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ಹಲವು ಮಹತ್ವದ ಒಪ್ಪಂದಗಳಿಗೆ ಏರೋ ಇಂಡಿಯಾ ವೇದಿಕೆಯಾಗುತ್ತಿದೆ.

ಆತ್ಮನಿರ್ಭಯ ಭಾರತ್ ಕಲ್ಪನೆಯನ್ನು ಬಿಂಬಿಸಲು ಎಚ್ ಎಎಲ್ ವತಿಯಿಂದ ಅಥವಾ ಸಹಭಾಗಿತ್ವದಲ್ಲಿ ಅಭಿವೃದ್ಧಿ, ಜೋಡಣೆ ಮಾಡಿರುವ ವಿಮಾನಗಳಿಂದಲೇ ಪ್ರತ್ಯೇಕ ವೈಮಾನಿಕ ಪ್ರದರ್ಶನ ನೀಡಲಾಗುತ್ತಿದೆ. ಎಲ್ ಸಿಎ ಟ್ರೈನರ್, ಎಚ್ ಟಿಟಿ-40, ಹಾಕ್ ಎಂಕೆ-132, ಡು0228, ಐಜೆಟಿ ವಿಮಾನಗಳ ಫಾರ್ಮೇಷನ್ ಸ್ವದೇಶಿ ಸಾಮರ್ಥ್ಯ ಪ್ರದರ್ಶಿಸುತ್ತಲಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights