ಬಸ್ ಫುಲ್, ಮಾರುಕಟ್ಟೆ ಗಿಜುಗುಡುತ್ತೆ, ಥಿಯೇಟರ್ಗೆ ಮಾತ್ರ 50% ನಿರ್ಬಂಧ ಯಾಕೆ? ಧ್ರುವಾ ಸರ್ಜಾ ಪ್ರಶ್ನೆ!

ಬಸ್ ಗಳಲ್ಲಿ ಜನ ತುಂಬಿಕೊಂಡು ಪ್ರಯಾಣ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಜನ ಗಿಜುಗುಡುತ್ತಿರುತ್ತಾರೆ. ಹೀಗಿರುವಾಗ ಚಿತ್ರಮಂದಿರಗಳಲ್ಲಿ ಯಾಕೆ ಒಂದು ಶೋವನ್ನು ಶೇ.50ರಷ್ಟು ಜನ ವೀಕ್ಷಣೆ ಮಾಡಲು ನಿರ್ಬಂಧ ಹೇರಲಾಗಿದೆ..? ಎಂದು ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ.

ಎಲ್ಲಾ ಕಡೆ ಸಾಮಾನ್ಯವಾಗಿ ಜನ ಓಡಾಡುತ್ತಿರುವಾಗ ಚಿತ್ರಮಂದಿರಗಳಲ್ಲಿ ಒಂದು ಶೋವನ್ನು 50%ರಷ್ಟು ಜನ ಮಾತ್ರ ಸಿನಿಮಾ ನೋಡಬೇಕು ಅಂದರೆ ಹೇಗೆ..? ಎಂದು ಪೊಗರು ಸಿನಿಮಾ ಹುಡುಗ ಪ್ರಶ್ನೆ ಮಾಡಿದ್ದಾರೆ. ಧ್ರುವ ಸರ್ಜಾ ಪ್ರಶ್ನೆಗೆ ಸ್ಯಾಂಡಲ್ ವುಡ್ ನಿರ್ದೇಶಕರು ಧ್ವನಿಗೂಡಿಸುತ್ತಿದ್ದಾರೆ. ಮಾತ್ರವಲ್ಲದೇ ಫಿಲ್ಮ್ ಚೇಂಬರ್ ಕೂಡ ಪೊಗರುಗೆ ಸಾತ್ ನೀಡಿದೆ.

ಫೆಬ್ರವರಿ 19 ಕ್ಕೆ ಪೊಗರು ಸಿನಿಮಾ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರದ ಮಾರ್ಗ ಸೂಚಿ ಪ್ರಕಾರ 50% ಮಾತ್ರ ಸಿನಿಮಾ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಧ್ರುವಾ ಪ್ರಶ್ನೆ ಮಾಡಿದ್ದಾರೆ. ಸಿನಿಮಾ ನಂಬಿಕೊಂಡು ಹಲವಾರು ಜನ ಜೀವನ ಮಾಡುತ್ತಾರೆ. ಆದರೆ ಹೀಗೆ ಸರ್ಕಾರ 50% ಜನ ಸಿನಿಮಾ ವೀಕ್ಷಣೆಗೆ ಸೂಚಿಸಿದರೆ ಭಾರೀ ಮಟ್ಟದ ಹೊಡೆತ ಬೀಳಲಿದೆ. ಇಲ್ಲಿ ಸಿನಿಮಾ ಹೌಸ್ ಫುಲ್ ಅಂತ ಹೇಳುವುದು ಕಷ್ಟ ಸಾಧ್ಯ. ಹೀಗಾಗಿ ಫಿಲ್ಮ್ ಚೇಂಬರ್  ಅಶ್ವಥ್ ನಾರಾಯಣ್, ಸಿಎಂಗೆ 100% ಸಿನಿಮಾ ವೀಕ್ಷಣೆ ಅವಕಾಶ ನೀಡುವ ಬಗ್ಗೆ ಮನವಿ ಮಾಡುವ ಸಾಧ್ಯತೆ ಇದೆ.

ಹೀಗಾಗಿ ಥಿಯೇಟರ್ ನಿರ್ಬಂಧ ತೆರವುಗೊಳಿಸಬೇಕು ಎಂದು ಸ್ಯಾಂಡಲ್ ವುಡ್ ನಿರ್ಮಾಪಕರು ಒತ್ತಾಯಿಸುತ್ತಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights