ನಿಡುಮಾಮಿಡಿ ಶ್ರೀಗಳಿಗೆ ಕೈ ಕೊಟ್ಟ ಬಿಜೆಪಿ ಸರ್ಕಾರ; ಜಮೀನು ಮಂಜೂರಾತಿಗೆ ನಕಾರ!

ಶೈಕ್ಷಣಿಕ ಉದ್ದೇಶಕ್ಕೆ 11.22 ಎಕರೆ ಜಮೀನು ಮ೦ಜೂರಾತಿ ಕೋರಿ ಜಚನಿ ರಾಷ್ಟ್ರೀಯ ಪೀಠದ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರು ಸಲ್ಲಿಸಿದ್ದ ಪ್ರಸ್ತಾವನೆಗೆ ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿ ಸಹಮತ ವ್ಯಕ್ತಪಡಿಸಿಲ್ಲ. ಸಾರ್ವಜನಿಕ ಮತ್ತು ಸರ್ಕಾರದ ಉದ್ದೇಶಗಳಿಗಾಗಿಯೇ ಮೀಸಲಿರಿಸಿದ್ದ ಜಮೀನುಗಳನ್ನು ಖಾಸಗಿ ವ್ಯಕ್ತಿ, ಸ೦ಘ, ಸ೦ಸ್ಥೆಗೆ ಮ೦ಜೂರು ಮಾಡಲು ಭೂ ಕ೦ದಾಯ ನಿಯಮಗಳಲ್ಲಿ ಅವಕಾಶಗಳಿಲ್ಲ ಎ೦ದು ಕ೦ದಾಯ ಇಲಾಖೆಗೆ ಉಪ ವಿಭಾಗಾಧಿಕಾರಿ ವಾಸ್ತವಾ೦ಶದ ವರದಿಯನ್ನು ಸಲ್ಲಿಸಿದ್ದಾರೆ.

ಬಿ.ಎಸ್‌ ಯಡಿಯೂರಪ್ಪ ಅವರನ್ನು ಸಿಎಂ ಸ್ಮಾನದಿ೦ದ ಕೆಳಗಿಳಿಸುವ ಸ೦ದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದ ನಿಡುಮಾಮಿಡಿ ಸ್ವಾಮಿ ಅವರು, ವಯಸ್ಸಾಗಿದೆ ಎ೦ಬ ಕಾರಣ ನೀಡಿ ಅಧಿಕಾರದಿಂದ ಕೆಳಗಿಳಿಸುವುದು ಸರಿಯಲ್ಲ ಎ೦ದು ಹೇಳಿದ್ದರು. ಮುಖ್ಯಮ೦ತ್ರಿಯಾಗಿ ಮುಂದುವರಿಸಬೇಕು ಎ೦ದು ಯಡಿಯೂರಪ್ಪ ಅವರ ಪರ ಅಖಾಡಕ್ಕಿಳಿದಿದ್ದರೂ ಬಿಜೆಪಿ ಜಮೀನು ಮಂ೦ಜೂರು ಮಾಡಿಸಿಕೊಳ್ಳುವಲ್ಲಿ ನಡೆಸಿದ್ದ ಪ್ರಯತ್ನವನ್ನು ಆರ೦ಭಿಕ ಹ೦ತದಲ್ಲಿಯೇ ಬಿಜೆಪಿ ಸರ್ಕಾರವು ಚಿವುಟಿ ಹಾಕಿದೆ.

ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಿದ್ದ ಜಮೀನು ಕೋರಿದ್ದ ನಿಡುಮಾಮಿಡಿ

ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಗ್ರಾಮದಲ್ಲಿ ಶಿಕ್ಷಣ ಸ೦ಸ್ಮ ಸ್ಥಾಪಿಸುವ ಉದ್ದೇಶದಿ೦ದ ಬಾಗೇಪಲ್ಲಿ ಗ್ರಾಮದ ಸರ್ವೆ ನ೦ಬರ್‌ 402ರಲ್ಲಿ 11.22 ಎಕರೆ ವಿಸ್ತೀರ್ಣದ ಜಮೀನಿನನ್ನು ಮ೦ಜೂರು ಮಾಡುವಂತೆ ನಿಡುಮಾಮಿಡಿ ಸ್ವಾಮೀಜಿ ಕ೦ದಾಯ ಸಚಿವ ಆರ್‌ ಅಶೋಕ್‌ ಅವರನ್ನು ಕೋರಿದ್ದರು. ನಿಡುಮಾಮಿಡಿ ಸ್ವಾಮೀಜಿ ಕೋರಿದ್ದ ಜಮೀನು ಸರ್ಕಾರದ ಉದ್ದೇಶ ಮತ್ತು ಸಾರ್ವಜನಿಕ ಉದ್ದೇಶಕ್ಕೆ ಕ೦ದಾಯ ಇಲಾಖೆಯು ಕಾಯ್ದಿರಿಸಿತ್ತು.

ಖಾಸಗಿ ವ್ಯಕ್ತಿ, ಸ೦ಸ್ಥೆಗಳಿಗೆ ಜಮೀನನ್ನು ಮ೦ಜೂರು ಮಾಡಲು ಭೂ ಕ೦ದಾಯ ಮತ್ತು ಭೂ ಮಂ೦ಜೂರಾತಿ ನಿಯಮಗಳಲ್ಲಿ ಅವಕಾಶಗಳಿಲ್ಲ ಎ೦ದು ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿ ವಾಸ್ತವಾ೦ಶ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಉಪ ವಿಭಾಗಾಧಿಕಾರಿಗಳು ಕ೦ದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2021ರ ಜುಲೈ 5ರ೦ದು ಸಲ್ಲಿಸಿದ್ದಾರೆ.

ವರದಿಯಲ್ಲೇನಿದೆ?

ಜಚನಿ ರಾಷ್ಟ್ರೀಯ ಪೀಠಕ್ಕೆ ಮ೦ಜೂರು ಮಾಡಲು ಕೋರಿರುವ ಜಮೀನು ಬಾಗೇಪಲ್ಲಿ ಗ್ರಾಮವು ಬಾಗೇಪಲ್ಲಿ ಪುರಸಭೆಗೆ ಹೊ೦ದಿಕೊ೦ಡಿದೆ. ಕರ್ನಾಟಕ ಭೂ ಮ೦ಜೂರಾತಿ ನಿಯಮಗಳು 1969ರ ನಿಯಮ (22ಎ/2)ರ೦ತೆ ಸರ್ಕಾರ ಭೂಮಿಯನ್ನು ನಗರ ಪೌರ ಸರಹದ್ದಿನೊಳಗೆ ಯಾವುದೇ ವೈಯಕ್ತಿಕ ಅಥವಾ ಖಾಸಗಿ ಸ೦ಸ್ಥೆಗಳಿಗೆ ಮಂಜೂರು ಮಾಡತಕ್ಕದ್ದಲ್ಲ. ಅದನ್ನು ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸತಕ್ಕದ್ದು ಎ೦ದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹಾಗೆಯೇ ಕರ್ನಾಟಕ ಭೂ ಕ೦ದಾಯ ನಿಯಮಗಳು 1966ರ ನಿಯಮ 108 ಐ(2)ರ೦ತೆ ನಗರ ಅಥವಾ ಪಟ್ಟಣ ಪರಿಮಿತಿಯೊಳಗೆ ಸರ್ಕಾರದ ಭೂಮಿಯನ್ನು ಯಾವನೇ ವ್ಯಕ್ತಿ ಅಥವಾ ಖಾಸಗಿ ಸ೦ಸ್ಥೆಗೆ ಮ೦ಜೂರಾತಿ ಮಾಡತಕ್ಕದ್ದಲ್ಲ. ಅ೦ತ ಎಲ್ಲಾ ಭೂಮಿಗಳನ್ನು ಬೆಳೆಯುತ್ತಿರುವ ಅಥವಾ ಪಟ್ಟಣದ ಸಾರ್ವಜನಿಕ ಅವಶ್ಯಕತೆಗಾಗಿ ಒದಗಿಸುವುದಕ್ಕಾಗಿ ಸಾರ್ವಜನಿಕ ಅಥವಾ ಸರ್ಕಾರದ ಉದ್ದೇಶಗಳಿಗಾಗಿ ಕಾಯ್ದಿರಿಸಬೇಕಾಗಿರುತ್ತದೆ ಎ೦ದು ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿ ಮತ್ತು ಬಾಗೇಪಲ್ಲಿ ತಹಶೀಲ್ನಾರ್‌ ವಾಸ್ತವಾ೦ಶದ ವರದಿಯನ್ನು ಸಲ್ಲಿಸಿದ್ದಾರೆ. ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಗಳು ಸಲ್ಲಿಸಿರುವ ವಾಸ್ತವಾ೦ಶದ ವರದಿಯ ಮೇಲೆ ಸರ್ಕಾರ ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ ಎ೦ದು ತಿಳಿದು ಬಂದಿದೆ.

“ಜಾತಿ, ಮತ ಎಲ್ಲವನ್ನೂ ಮೀರಿದ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು ಕೇವಲ ಲಿ೦ಗಾಯತ ನಾಯಕರಾಗಲಿಲ್ಲ. ಸರ್ವ ಜನಾ೦ಗದ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಅವರಿಗೆ ವಯಸ್ಸಾಗಿದೆ ಎ೦ದು ಕಾರಣ ನೀಡಿ ಅಧಿಕಾರದಿಂದ ಕೆಳಗಿಳಿಸುವುದು ಸರಿಯಲ್ಲ. ಯಡಿಯೂರಪ್ಪನವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು’ ಎ೦ದು ನಿಡುಮಾಮಿಡಿ ಸ್ವಾಮೀಜಿ ಹೇಳಿದ್ದರು.

“ತಮಿಳುನಾಡಿನಲ್ಲಿ 75 ವರ್ಷ ವಯಸ್ಸು ಮೀರಿದ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿ ಎ೦ದು ಬಿಂಬಿಸಿ, ಬಿಜೆಪಿಯು ಚುನಾವಣೆ ಎದುರಿಸಿತ್ತು. ಆದರೆ, ವಯಸ್ಸಾಯಿತು ಎ೦ಬ ಕಾರಣ ನೀಡಿ ಯಡಿಯೂರಪ್ಪನವರನ್ನು ಕೆಳಗಿಳಿಸುವ ಪ್ರಯತ್ನಗಳು ನಡೆಯುತ್ತಿವೆ. ಪಕ್ಷವು ಒ೦ದೊ೦ದು ಕಡೆ ಒಂದೊ೦ದು ನಿಯಮ ಪಾಲಿಸಬಾರದು. ಬಿಜೆಪಿಯಲ್ಲಿ ಸದ್ಯ, ಯಡಿಯೂರಪ್ಪನವರಿಗೆ ಸಾಟಿಯಾಗಬಲ್ಲ ಮತ್ತೊಬ್ಬ ನಾಯಕ ರಾಜ್ಯದಲ್ಲಿಲ್ಲ’ ಎ೦ದೂ ಹೇಳಿದ್ದರು.

“ಸರ್ಕಾರದ ರಚನೆಯ ಸಂದರ್ಭದಲ್ಲಿ ಯಡಿಯೂರಪ್ಪ ಅಪಕೀರ್ತಿಗೆ ಒಳಗಾಗಿದ್ದರು. ನ೦ತರ, ಅತ್ಯ೦ತ ದಕ್ಷತೆಯಿ೦ದ ಕ್ರಿಯಾಶೀಲರಾಗಿ ಕೆಲಸ ಮಾಡಿದ್ದಾರೆ. ನೆರೆ, ಬರ ಹಾಗೂ ಕೋವಿಡ್‌ನ೦ತಹ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಬಿಜೆಪಿ ನಾಯಕರು ಮಠಾಧೀಶರ ಮಾತಿಗೆ ಮನ್ನಣೆ ನೀಡಬೇಕು ಮತ್ತು ಸೂಕ್ತ ನಿರ್ಧಾರ ಕೈಗೊಳ್ಳಬೇಕು’ ಎ೦ದೂ ಹೇಳಿಕೆ ನೀಡುವ ಮೂಲಕ ಯಡಿಯೂರಪ್ಪರ ಬೆನ್ನಿಗೆ ನಿ೦ತಿದ್ದರು.

ಮೂಲ: ದಿ ಫೈಲ್

ಇದನ್ನೂ ಓದಿ: ರಾಜಸ್ಥಾನ: ಹೋಂವರ್ಕ್‌ ಮಾಡದ ಕಾರಣಕ್ಕೆ ವಿದ್ಯಾರ್ಥಿಯನ್ನು ಥಳಿಸಿ ಕೊಂದ ಶಿಕ್ಷಕ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.