ಭಾರತ V/S ಆಸ್ಟ್ರೇಲಿಯಾ: ಆಸಿಸ್‌ಗೆ ಮಣಿಯದ ಇಂಡಿಯಾ; 3ನೇ ಟೆಸ್ಟ್‌ ‘ಡ್ರಾ’ನಲ್ಲಿ ಮುಕ್ತಾಯ!

ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ  ರೋಚಕ ಡ್ರಾದೊಂದಿಗೆ ಅಂತ್ಯಗೊಂಡಿದೆ. ಸೋಲಿನ ದವಡೆಯಲ್ಲಿದ್ದ  ಭಾರತವನ್ನು ಹನುಮ ವಿಹಾರಿ ಮತ್ತು ಆರ್ ಅಶ್ವಿನ್ ಅವರ ದಾಖಲೆಯ ಆಟ ಹೊರತಂದಿತು.. 5ನೇ ದಿನ 272 ರನ್ ಗಳಿಗೆ 5ನೇ ವಿಕೆಟ್ ಕಳೆದುಕೊಂಡ ಭಾರತ ಸಂದಷ್ಟದಲ್ಲಿತ್ತು. ಆಗ ಜೊತೆಗುಡಿದ ವಿಹಾರಿ ಮತ್ತು ಅಶ್ವಿನ್ 48 ಓವರ್ ಎದುರಿಸಿ ಪಂದ್ಯ ಡ್ರಾ ಮಾಡಿಸುವಲ್ಲಿ ಸಫಲಾದರು..

ದ್ವಿತೀಯ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ರಿಷಭ್ ಪಂತ್ ಅರ್ಧ ಶತಕ ಮತ್ತು ಹನುಮ ವಿಹಾರಿ, ರವಿಚಂದ್ರನ್ ಅಶ್ವಿನ್ ಅವರ ಅಜೇಯ ಆಟ ಸೋಲಿನಿಂದ ಪಾರು ಮಾಡಿದೆ. ಇದರೊಂದಿಗೆ ನಾಲ್ಕು ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ವಿಲ್ ಪುಕೊವ್‌ಸ್ಕಿ 62, ಮಾರ್ನಸ್ ಲಾಬುಶೇನ್ 91, ಸ್ಟೀವನ್ ಸ್ಮಿತ್ 131, ಮ್ಯಾಥ್ಯೂ ವೇಡ್ 13, ಮಿಚೆಲ್ ಸ್ಟಾರ್ಕ್ 24 ರನ್ ಬಾರಿಸಿದ್ದರು. ಆಸೀಸ್ 105.4 ಓವರ್‌ಗೆ 338 ರನ್ ಪೇರಿಸಿತ್ತು.
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದಿಂದ ರೋಹಿತ್ ಶರ್ಮಾ 26,  ಗಿಲ್ 50, ಚೇತೇಶ್ವರ್ ಪೂಜಾರ 50, ನಾಯಕ ಅಜಿಂಕ್ಯ ರಹಾನೆ 22, ರಿಷಭ್ ಪಂತ್ 36, ರವೀಂದ್ರ ಜಡೇಜಾ ಅಜೇಯ 28, ರವಿಚಂದ್ರನ್ ಅಶ್ವಿನ್ 10, ಮೊಹಮ್ಮದ್ ಸಿರಾಜ್ 6 ರನ್‌ ಬಾರಿಸಿದರು. ಭಾರತ 100.4 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 244 ರನ್ ಪೇರಿಸಿ 94 ರನ್ ಹಿನ್ನಡೆ ಅನುಭವಿಸಿತು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ, ಡೇವಿಡ್ ವಾರ್ನರ್ 13, ವಿಲ್ ಪುಕೊವ್‌ಸ್ಕಿ 10, ಮಾರ್ನಸ್ ಲಾಬುಶೇನ್ 73, ಸ್ಟೀವನ್ ಸ್ಮಿತ್ 81, ಕ್ಯಾಮರಾನ್ ಗ್ರೀನ್ 84, ಟಿಮ್ ಪೇನ್ ಅಜೇಯ 39 ರನ್‌ನೊಂದಿಗೆ 87 ಓವರ್‌ಗೆ 6 ವಿಕೆಟ್ ಕಳೆದು 312 ರನ್ ಗಳಿಸಿ ಡಿಕ್ಲೇರ್ ಘೋಷಿಸಿದೆ.

ಗೆಲ್ಲಲು 407 ರನ್ ಗಳ ಗಿರಿಗೊಂದಿಗೆ ಕಣಕ್ಕಿಳಿದ ರಹಾನೆ ಪಡೆಗೆ ಆರಂಭದಲ್ಲಿ ರೋಹಿತ್ ಶರ್ಮಾ,  ಮತ್ತು ಗಿಲ್ ಉತ್ತಮ ಆರಂಭ ನೀಡಿದರೆ,  ಚೇತೇಶ್ವರ ಪೂಜಾರ, ರಿಷಭ್ ಪಂತ್  ಟೀಮ್ ಇಂಡಿಯಾದ ಮರು ಹೋರಾಟವನ್ನು ಕಟ್ಟಿದರು.. ರಹಾನೆ ಬೇಗನೆ ವಿಕೆಟ್ ಒಪ್ಪಿಸಿದರು ಕಂಗೆಡದ ಈ ಜೊಡಿ 148 ರನ್ ಕಲೆಹಾಕಿದರು…

ಸೆಟ್ ಆದ ಈ ಜಡಿ ಪೆವಿಲಿಯನ್ ಗೆ ಮರಳಿದ ಮೇಲೆ ಭಾರತಕ್ಕೆ ಸೋಲು ನಿಶ್ಚಿತವಾಗಿತ್ತು. ಆಗ ಜಫತೆಗುಡಿದ ಹನುಮ ವಿಹಾರಿ ಮತ್ತು ಅಶ್ಚಿನ್ ಕಾಂಗರೊಗಳ ಕರಾರುವಕ್ಕಾರ ಬೌಲಿಂಗ್ ಗೆ ಅಡ್ಡಗೊಡೆಯಾಗಿ ನಿಂತು ಪಂದ್ಯವನ್ನು ಡ್ರಾ ಮಾಡಿಸುವಲ್ಲಿ ಯಶಸ್ವಿಯಾದರು… ಕೊನೆಯ ಮತ್ತು ನರತ್ಣಾಯಕ ಪಂದ್ಯ ಬ್ರಿಸ್ಬೆನ್ ನಲ್ಲಿ ನಡೆಯಲಿದೆ…


ಇದನ್ನೂ ಓದಿ: ಭಾರತಕ್ಕೆ ಮೊದಲ ವಿಶ್ವಕಪ್‌ ತಂದುಕೊಟ್ಟ ಕಪಿಲ್‌ದೇವ್‌: ಬರ್ತಡೇ ಸ್ಪೆಷಲ್‌ ಸ್ಟೋರಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights